»   » ಕೆ.ಬಾಲಚಂದರ್ ಆರೋಗ್ಯ ಗಂಭೀರ: ಆಸ್ಪತ್ರೆಗೆ ರಜನಿ ಭೇಟಿ

ಕೆ.ಬಾಲಚಂದರ್ ಆರೋಗ್ಯ ಗಂಭೀರ: ಆಸ್ಪತ್ರೆಗೆ ರಜನಿ ಭೇಟಿ

Posted By:
Subscribe to Filmibeat Kannada

ಕಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಕೆ.ಬಾಲಚಂದರ್ ರವರನ್ನ ಚೆನ್ನೈ ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲ ತಿಂಗಳಿನಿಂದ ವಯೋ ಸಹಜ ಕಾಯಿಲೆಗಳಿಂದ ನರಳುತ್ತಿದ್ದ ಕೆ.ಬಾಲಚಂದರ್ ರವರನ್ನು ತೀವ್ರ ನಿಗಾ ಘಟಕದಲ್ಲಿ, ನುರಿತ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಕೆ.ಬಾಲಚಂದರ್ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿಯನ್ನ ಕೇಳುತ್ತಿದ್ದಂತೆ ಸೂಪರ್ ಸ್ಟಾರ್ ರಜನಿಕಾಂತ್ ಕಾವೇರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವೈದ್ಯರ ಬಳಿ ಬಾಲಚಂದರ್ ಆರೋಗ್ಯ ಸ್ಥಿತಿಯನ್ನು ರಜನಿಕಾಂತ್ ವಿಚಾರಿಸಿದ್ದಾರೆ.

K.Balachander

ಕಮಲ್ ಹಾಸನ್ ಅಭಿನಯದ 'ಉತ್ತಮ ವಿಲನ್' ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸುತ್ತಿದ್ದ ಕೆ.ಬಾಲಚಂದರ್ ಅದರ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಆದರೆ, ತಮ್ಮ 53 ವರ್ಷದ ಮುದ್ದಿನ ಮಗ ಕೈಲಾಸಂ ಸಾವನ್ನಪ್ಪಿದ ಬಳಿಕ ಬಾಲಚಂದರ್, ಮಾನಸಿಕವಾಗಿ ಕುಗ್ಗಿದ್ದರು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

84 ವರ್ಷ ವಯಸ್ಸಿನ ಕೆ.ಬಾಲಚಂದರ್, ತಮಿಳು, ತೆಲುಗು, ಕನ್ನಡ, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ 100 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸಕಲಕಲಾವಲ್ಲಭ ಕಮಲ್ ಹಾಸನ್, ರಮೇಶ್ ಅರವಿಂದ್ ರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಇದೇ ಬಾಲಚಂದರ್. [ಸಿನಿಮಾ ರಂಗದಲ್ಲಿ 40 ವರ್ಷ ಉಳಿಯುವುದು ತಮಾಷೆಯಾ?]

K.Balachander2

ಜೆಮಿನಿ ಗಣೇಶನ್, ಎಂ.ಜಿ.ರಾಮಚಂದ್ರನ್, ರಾಜೇಶ್ ಖನ್ನಾ, ಸಾಹುಕಾರ್ ಜಾನಕಿ, ಶ್ರೀದೇವಿ, ಶಿವಾಜಿ ಗಣೇಶನ್, ಚಿರಂಜೀವಿ, ಲಕ್ಷ್ಮಿ, ಶಿವಕುಮಾರ್, ಮಮ್ಮೂಟಿಯಂತ ದೊಡ್ಡ ದೊಡ್ಡ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ ಖ್ಯಾತಿ ಕೆ.ಬಾಲಚಂದರ್ ರದ್ದು. ಐದು ದಶಕಗಳ ತಮ್ಮ ಸುದೀರ್ಘ ಸಿನಿಪಯಣದಲ್ಲಿ 9 ರಾಷ್ಟ್ರ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. [ರಮೇಶ್-ಕಮಲ್ ಕಾಂಬಿನೇಷನ್ 'ಉತ್ತಮ ವಿಲನ್' ಫಿನಿಷ್]

ಕೆ.ಬಾಲಚಂದರ್ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರಗಳ ಪಟ್ಟಿ ಇಲ್ಲದೆ.

1964 - ದೈವ ತಾಯೈ
1975 - ಅಪೂರ್ವ ರಾಗಂಗಳ್
1975 - ಮನ್ಮಧ ಲೀಲೈ
1976 - ಅಥುಲೇನಿ ಕಥಾ
1976 - ಮೂನ್ಡ್ರು ಮುಡಿಚು
1978 - ಮರೋ ಚರಿತ್ರ
1978 - ತಪ್ಪು ತಾಳಂಗಳ್
1978 - ತಪ್ಪಿದ ತಾಳ
1979 - ಅಂದಮೈನ ಅನುಭವಂ
1979 - ಇದಿ ಕಥ ಕಾದು
1982 - ಬೆಂಕಿಯಲ್ಲಿ ಅರಳಿದ ಹೂವು
1985 - ಮುಗಿಲ ಮಲ್ಲಿಗೆ
1986 - ಸುಂದರ ಸ್ವಪ್ನಗಳು
2006 - ಪೋಯಿ

English summary
Veteran Director K.Balachander has been admitted to Kaveri hospital in Chennai. K.Balachander suffering from Fever, is been given necessary treatments. Super Star Rajinikanth is said to have visited the hospital.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada