»   » ಸಂಭಾಷಣೆ ಚತುರ ಕುಣಿಗಲ್ ನಾಗಭೂಷಣ್ ಕಣ್ಮರೆ

ಸಂಭಾಷಣೆ ಚತುರ ಕುಣಿಗಲ್ ನಾಗಭೂಷಣ್ ಕಣ್ಮರೆ

Posted By:
Subscribe to Filmibeat Kannada
Veteran actor Kunigal Nagabhushan Passes away
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಕುಣಿಗಲ್ ನಾಗಭೂಷಣ್ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಮಧ್ಯರಾತ್ರಿ ನಂತರ ಸುಮಾರು 1.30 ರ ಹೊತ್ತಿಗೆ ಅವರ ದೇಹಾಂತ್ಯವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಭೂಷಣ್ ಅವರ ಬಲಗಾಲಿಗೆ ಮಧುಮೇಹದಿಂದ ಕತ್ತರಿ ಬಿದ್ದಿತ್ತು. ಹಲವು ಆಂಗಾಂಗ ವೈಫಲ್ಯ, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ನಾಗಭೂಷಣ್ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಹಲವು ದಿನಗಳ ಕಾಲ ನಾಗಭೂಷಣ್ ಅವರು ಕಷ್ಟಪಟ್ಟಿದ್ದರು.

ಆಶೀರ್ವಾದ, ಬಾಳು ಸೇರಿದಂತೆ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದ ನಾಗಭೂಷಣ್ ಅವರು 250ಕ್ಕೂ ಅಧಿಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 500ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ನಾಗಭೂಷಣ್ ಅವರು ಜನಮೆಚ್ಚುಗೆ ಗಳಿಸಿದ್ದ ಪ್ರತಿಭೆ.

1945 ಡಿಸೆಂಬರ್ 6 ರಂದು ಜನಸಿದ್ದ ನಾಗಭೂಷಣ್ ಅವರ ಪತ್ನಿ, ಪುತ್ರ ಕೂಡಾ ಒಂದೆರಡು ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಸರಳ ಸಂಭಾಷಣೆ ಮೂಲಕ ಚಿತ್ರಗಳತ್ತ ಜನರನ್ನು ಆಕರ್ಷಿಸುತ್ತಿದ್ದರು ಇವರ ಸಾವಿನಿಂದ ಚಿತ್ರರಂಗ ಬಡವಾಗಿದೆ ಎಂದು ಹಿರಿಯ ನಟ ಶಿವರಾಮ್ ಪ್ರತಿಕ್ರಿಯಿಸಿದ್ದಾರೆ.

English summary
Veteran Kannada actor Kunigal Nagabhushan Passed away in the wee hours today. Kunigala Nagabhushan acted in more than 250 films and was dialogue writer for 450 films
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada