ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡ ನಟ ಶಿವರಾಂ
ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್ ಶಿವರಾಂ (75) ಅವರು ಮನೆಯಲ್ಲಿ ಜಾರಿಬಿದ್ದ ಕಾರಣ ಗಾಯಗೊಂಡಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಬೆನ್ನುಹುರಿಯಲ್ಲಿ ಅಸ್ಥಿಭಂಗವಾಗಿದ್ದು, ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಮರಳಿನ ಚೀಲದ ಚಿಕಿತ್ಸೆಯನ್ನೂ ನೀಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು ಗಾಬರಿಬೀಳುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.

ರಂಗಭೂಮಿ ಹಿನ್ನೆಲೆಯಿಂದ ಬಂದ ಶಿವರಾಮಣ್ಣನವರು 1000 ಹೆಚ್ಚು ನಾಟಕಗಳಲ್ಲಿ ಹಾಗೂ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶರಪಂಜರ, ಗುರುಶಿಷ್ಯರು ಚಿತ್ರಗಳ ಹಾಸ್ಯಪಾತ್ರಗಳು, ಶುಭಮಂಗಳ ಚಿತ್ರದ ಪೋಷಕ ಪಾತ್ರ ಶಿವರಾಂ ಅವರಿಗೆ ಸಾಕಷ್ಟು ಹೆಸರುತಂದುಕೊಟ್ಟಿವೆ.
ಪ್ರಣಯರಾಜ ಶ್ರೀನಾಥ ಅವರ ಜೊತೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಮ್ಮೆ ಶಿವರಾಂ ಅವರದು. ಹಲವು ಆಸಕ್ತಿ ಹಾಗೂ ಬಹುನೈಪುಣ್ಯಗಳ ಶಿವರಾಂ ಅವರು ಚಿತ್ರರಂಗದಲ್ಲಿ ನಿಖರತೆ ಹಾಗೂ ಶಿಸ್ತಿಗೆ ಹೆಸರಾದವರು. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿ ಎಂದು ಒನ್ಇಂಡಿಯಾ ಕನ್ನಡ ಬಯಸುತ್ತದೆ. (ಏಜೆನ್ಸೀಸ್)


Click it and Unblock the Notifications











