Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರು
ಯೋಗರಾಜ ಭಟ್ಟರು ಎರಡನೇ ಬಾರಿ ಗಾಳಿಪಟ ಹಾರಿಸುತ್ತಿರುವುದು ಗೊತ್ತಿರುವ ಸಂಗತಿಯೇ. ಮೊದಲ ಗಾಳಿಪಟ ಸಿನಿಮಾ ಭರಪೂರ ಹಿಟ್ ಆಗಿ ಹದಿಮೂರು ವರ್ಷದ ಬಳಿಕ ಗಾಳಿಪಟ 2 ಮಾಡುತ್ತಿದ್ದಾರೆ ಯೋಗರಾಜ್ ಭಟ್.
ಮೊದಲ ಸಿನಿಮಾದಲ್ಲಿ ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ನಾಯಕರಾಗಿದ್ದರು. ಗಾಳಿಪಟ 2 ನಲ್ಲಿ ರಾಜೇಶ್ ಕೃಷ್ಣನ್ ಸ್ಥಾನವನ್ನು ನಿರ್ದೇಶಕ, ನಟ ಪವನ್ ಕುಮಾರ್ ತುಂಬುತ್ತಿದ್ದಾರೆ. ಗಣೇಶ್, ದಿಗಂತ್ ಮುಂದುವರೆದಿದ್ದಾರೆ.
ಗಾಳಿಪಟ 2 ಸಿನಿಮಾದ ನಾಯಕರು, ಶೂಟಿಂಗ್, ಪೋಸ್ಟರ್‌ಗಳು ಇನ್ನಿತರೆ ವಿಷಯಗಳನ್ನು ಬಹಿರಂಗಗೊಳಿಸಿದ್ದ ಭಟ್ಟರು ನಾಯಕಿಯರು ಯಾರಾಗಲಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ನೀಡಿರಲಿಲ್ಲ. ಇದೀಗ ಅದೂ ಸಹ ಬಹಿರಂಗಗೊಂಡಿದೆ. ಹೊಸ ಗಾಳಿಪಟಕ್ಕೆ ಹೊಸ ನಾಯಕಿಯರನ್ನು ಆರಿಸಿ ತಂದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.

ತಮಿಳು, ಕನ್ನಡ, ಮಲಯಾಳಂ ನಟಿಯರು
ತಮಿಳು, ಮರಾಠಿ ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿರುವ ವೈಭವಿ ಶಾಂಡಿಲ್ಯ, ನಟಿ ಶರ್ಮಿಳಾ ಮಾಂಡ್ರೆ ಹಾಗೂ ಮಲಯಾಳಂ ಚೆಲುವೆ ಸಂಯುಕ್ತಾ ಮೆನನ್ ಅವರುಗಳು ಗಾಳಿಪಟ 2 ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಲಿದ್ದಾರೆ. ಆದರೆ ಯಾವ ನಟಿ ಯಾವ ನಟರಿಗೆ ಜೋಡಿ ಎಂಬುದು ಗೊತ್ತಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಸಿನಿಮಾದ ಮೂರು ನಾಯಕರಲ್ಲಿ ಒಬ್ಬರಾದ ಪವನ್ ಕುಮಾರ್ ಅವರು ಗಾಳಿಪಟ 2 ಸಿನಿಮಾದ ನಾಯಕಿಯರ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಗಾಳಿಪಟ 2 ಸಿನಿಮಾದಲ್ಲಿದ್ದಾರೆ ಎಂಬುದು ಬಹಿರಂಗಗೊಂಡಿತ್ತು. ಆದರೆ ಇನ್ನಿಬ್ಬರು ನಟಿಯರ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ.

ಕಜಕಿಸ್ತಾನದಲ್ಲಿ ಚಿತ್ರೀಕರಣ ನಡೆಯುತ್ತಿದೆ
ಪ್ರಸ್ತುತ ಗಾಳಿಪಟ 2 ಸಿನಿಮಾ ಕಜಕಿಸ್ತಾನ ಹಾಗೂ ಯೂರೋಪ್ ನ ಇನ್ನು ಕೆಲವು ಸುಂದರ ಹಿಮಚ್ಛಾಧಿತ ಪ್ರದೇಶಗಳಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದೆ. ಗಾಳಿಪಟ 2 ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇದಾಗಿದೆ ಎನ್ನಲಾಗುತ್ತಿದೆ. ಆ ನಂತರ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.
Recommended Video

ಶಿವರಾಜ್ ಕುಮಾರ್-ಪ್ರಭುದೇವ ಸಿನಿಮಾ ನಿರ್ದೇಶಿಸಲಿರುವ ಭಟ್ಟರು
ಗಾಳಿಪಟ 2 ಸಿನಿಮಾದ ಬಳಿಕ ಯೋಗರಾಜ್ ಭಟ್ ಅವರು ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಅವರ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇದೊಂದು ಸ್ವಾತಂತ್ರ್ಯ ಪೂರ್ವದ ಕತೆ ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಇಬ್ಬರೂ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದಾರೆ.