For Quick Alerts
  ALLOW NOTIFICATIONS  
  For Daily Alerts

  ಸೀರೆ ಜಾಹೀರಾತಿಗೆ 5 ಕೋಟಿ ಪಡೆದ ವಿದ್ಯಾ ಬಾಲನ್

  By Rajendra
  |

  ಬಾಲಿವುಡ್ ಹಾಟ್ ಸೆನ್ಸೇಷನ್ ವಿದ್ಯಾ ಬಾಲನ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ದಿ ಡರ್ಟಿ ಪಿಕ್ಚರ್ ಚಿತ್ರದಲ್ಲಿ ತಮ್ಮ ಅಷ್ಟೌಶ್ವರ್ಯಗಳನ್ನು ತೆರೆದಿಟ್ಟು ಪಡ್ಡೆಗಳ ಪಾಲಿಗೆ ರಸಿಕರ ರಾಣಿಯಾಗಿದ್ದಾರೆ. ಈ ಚಿತ್ರದಲ್ಲಿ ತಮ್ಮ ಚೆಂದುಳ್ಳಿ ಚೆಲುವನ್ನು ಸೀರೆಯಲ್ಲಿ ಧಾರೆ ಎರೆದಿದ್ದರು ವಿದ್ಯಾ.

  ಈಗ ಅದೆಕ್ಕೆಲ್ಲಾ ಫಲ ಸಿಕ್ಕಂತಿದೆ. ಪ್ರಸಿದ್ಧ ಸೀರೆ ಕಂಪನಿಯೊಂದು ತಮ್ಮ ಉತ್ಪನ್ನಕ್ಕೆ ರಾಯಭಾರಿಯಾಗಬೇಕು ಎಂದು ವಿದ್ಯಾರನ್ನು ಸಂಪರ್ಕಿಸಿದೆ. ಇದಕ್ಕಾಗಿ ರು. 5 ಕೋಟಿ ಸಂಭಾವನೆ ನೀಡುವುದಾಗಿ ಹೇಳಿದೆ. ಇಂತಹ ಸುವರ್ಣಾವಕಾಶವನ್ನು ಯಾರಾದರೂ ಬಿಡುತ್ತಾರಾ?

  ಚೆನ್ನೈ ಮೂಲದ ಜರತಾರಿ ಸೀರೆ ಬ್ರಾಂಡ್ ಗೆ ಸಹಿ ಹಾಕಿದ್ದಾರೆ ಮದ್ರಾಸಿ ಹುಡುಗಿ ವಿದ್ಯಾ ಬಾಲನ್. ತೀರಾ ಇತ್ತೀಚೆಗಷ್ಟೇ ವಿದ್ಯಾ ಮತ್ತೊಂದು ಸೀರೆ ಕಂಪನಿ ಜಾಲಿ ಸಿಲ್ಕ್ಸ್ ಗೆ ಸಹಿಹಾಕಿದ್ದರು. ವಿದ್ಯಾ ಅವರು ಸೀರೆಯಲ್ಲೇ ಹೆಚ್ಚಾಗಿ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಅವರನ್ನು ತಮ್ಮ ಉತ್ಪನ್ನಕ್ಕೆ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದ್ದಾಗಿ ಕಂಪನಿ ತಿಳಿಸಿದೆ.

  ವಿದ್ಯಾ ಬಾಲನ್ ಮೊದಲೇ ಹಾಟ್ ಬೆಡಗಿ. ಇನ್ನು ಮೈತುಂಬ ಸೀರೆ ಉಟ್ಟರಂತೂ ಅವರ ಸೌಂದರ್ಯ ಬೇಡ ಬೇಡವೆಂದರೂ ಕಣ್ಣು ಕುಕ್ಕುವುದು ಗ್ಯಾರಂಟಿ. ಈ ಹಿಂದೆ ವಿದ್ಯಾ ಬಾಲನ್ ಹಾಟ್ ಬೆಡಗಿಯಾಗಿ ಆಯ್ಕೆಯಾಗಿದ್ದನ್ನು ಇಲ್ಲಿ ಧಾರಾಳವಾಗಿ ಸ್ಮರಿಸಬಹುದು.

  ಮೊಣಕಾಲು ತೋರಿದವರೆಲ್ಲಾ ಸೆಕ್ಸಿ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರನ್ನು ಹಲವು ನಟಿಯರು ಮೂತಿ ಸೊಟ್ಟಗೆ ಮಾಡಿದ್ದರು. ಆದರೂ ವಿದ್ಯಾ ಇದ್ಯಾವುದಕ್ಕೂ ಕ್ಯಾರೆ ಅನ್ನದೆ ತಮ್ಮ ಸೌಂದರ್ಯವನ್ನು 'ಡರ್ಟಿ ಪಿಕ್ಚರ್‌'ನಲ್ಲಿ ತೆರೆದಿಟ್ಟಿದರು. ಈಗ ಸಹನಟಿಯರು ಮತ್ತಷ್ಟು ಹೊಟ್ಟೆ ಉರಿಪಡುವಂತಾಗಿದೆ. (ಏಜೆನ್ಸೀಸ್)

  English summary
  'The Dirty Picture' girl Vidya Balan has now reportedly been signed on by a Chennai-based saree brand for an endorsement deal worth a whopping Rs 5 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X