For Quick Alerts
  ALLOW NOTIFICATIONS  
  For Daily Alerts

  'ಬಂಗಾರದ ಮನುಷ್ಯ'ನ ಜೋಡಿಯಾಗೋ ಚೆಂದುಳ್ಳಿ ಚೆಲುವೆ ಈಕೆ

  By Suneetha
  |

  ಕನ್ನಡ ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 'ಕಿಲ್ಲಿಂಗ್ ವೀರಪ್ಪನ್' ಮತ್ತು 'ಶಿವಲಿಂಗ' ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆದ ನಂತರ ಇದೀಗ ಹೊಸ ಪ್ರಾಜೆಕ್ಟ್ ಗಳತ್ತ ಕಣ್ಣು ಹಾಯಿಸಿದ್ದಾರೆ.

  ಈಗಾಗಲೇ 'ಶ್ರೀಕಂಠ' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಈ ನಡುವೆಯೇ ಶಿವಣ್ಣ ಅವರ ಮತ್ತೊಂದು ಸಿನಿಮಾ 'S/O ಬಂಗಾರದ ಮನುಷ್ಯ' ಜನವರಿ 15 ಸಂಕ್ರಾಂತಿ ಹಬ್ಬದಂದು ಮೂಹೂರ್ತ ನೆರವೇರಿಸಿಕೊಂಡು ಶೂಟಿಂಗ್ ಗೆ ತಯಾರಾಗಿದೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಗೋಲ್ಡನ್ ಕ್ವೀನ್ ಅಮೂಲ್ಯ ಜೋಡಿಯಾಗಿ ನಟಿಸಿದ್ದ 'ಖುಷಿ-ಖುಷಿಯಾಗಿ' [ಚಿತ್ರ ವಿಮರ್ಶೆ: 'ಖುಷಿ ಖುಷಿಯಾಗಿ' ಹೋಗಿ ಬನ್ನಿ] ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಯೋಗಿ ಜಿ.ರಾಜ್ ಅವರು ಶಿವಣ್ಣ ಅವರ ಹೊಸ ಚಿತ್ರ 'S/O ಬಂಗಾರದ ಮನುಷ್ಯ'ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

  ಅಂದಹಾಗೆ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಲು ಒಬ್ಬ ಸುಂದರ ಹುಡುಗಿಯನ್ನು ನಮ್ಮ ನಿರ್ದೇಶಕರು ದಕ್ಷಿಣ ಭಾರತದಿಂದ ಕರೆ ತಂದಿದ್ದಾರೆ. ಅವರು ಯಾರು ಎಂಬುದನ್ನು ನೋಡಬೇಕೆ? ಹಾಗಿದ್ದರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ನಟಿ ವಿದ್ಯಾ ಪ್ರದೀಪ್

  ನಟಿ ವಿದ್ಯಾ ಪ್ರದೀಪ್

  ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ, ಗ್ಲಾಮರ್ ಬೆಡಗಿ ವಿದ್ಯಾ ಪ್ರದೀಪ್ ಅವರು ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಶಿವಣ್ಣ ಅವರ ಜೊತೆ 'S/O ಬಂಗಾರದ ಮನುಷ್ಯ' ಚಿತ್ರದಲ್ಲಿ ಡ್ಯುಯೆಟ್ ಹಾಡಲು ತಯಾರಾಗಿದ್ದಾರೆ.[ಸಂಕ್ರಾಂತಿಗೆ ಭರ್ಜರಿಯಾಗಿ ಸೆಟ್ಟೇರಿದ ಜಯಣ್ಣ ನಿರ್ಮಾಣದ 2 ಚಿತ್ರಗಳು]

  ತಮಿಳು-ಮಲಯಾಳಂನಲ್ಲಿ ಬ್ಯುಸಿ

  ತಮಿಳು-ಮಲಯಾಳಂನಲ್ಲಿ ಬ್ಯುಸಿ

  ತಮಿಳು ಮತ್ತು ಮಲಯಾಳಂ ಚಿತ್ರರಂಗ ಕ್ಷೇತ್ರದಲ್ಲಿ ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿರುವ ನಟಿ ವಿದ್ಯಾ ಪ್ರದೀಪ್ ಅವರು ಸದ್ಯಕ್ಕೆ ದಕ್ಷಿಣ ಭಾರತದ ಚಿತ್ರರಂಗ ಕ್ಷೇತ್ರದಲ್ಲಿ ಬ್ಯುಸಿ ನಟಿ.

  ತಮಿಳು ನಟ ಸೂರ್ಯ ಜೊತೆ ನಟನೆ

  ತಮಿಳು ನಟ ಸೂರ್ಯ ಜೊತೆ ನಟನೆ

  ತಮಿಳಿನ ಖ್ಯಾತ ಸ್ಟಾರ್ ನಟರೊಡನೆ ಅಭಿನಯಿಸಿರುವ ವಿದ್ಯಾ ಪ್ರದೀಪ್ ಅವರು ಇತ್ತೀಚೆಗೆ ಬಿಡುಗಡೆ ಆಗಿ ಯಶಸ್ವಿಯಾದ ಸೂರ್ಯ ಅವರ ನಿರ್ಮಾಣದಲ್ಲಿ ಅವರೇ ನಟನೆ ಮಾಡಿದ್ದ 'ಪಸಂಗ 2' ಚಿತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

  ಮಾಲಿವುಡ್ ನಲ್ಲೂ ಬ್ಯುಸಿ

  ಮಾಲಿವುಡ್ ನಲ್ಲೂ ಬ್ಯುಸಿ

  ಬರೀ ಕಾಲಿವುಡ್ ಮಾತ್ರವಲ್ಲದೇ, ಮಾಲಿವುಡ್ ಕ್ಷೇತ್ರದಲ್ಲಿಯೂ ತುಂಬಾ ಬ್ಯುಸಿಯಾಗಿರುವ ನಟಿ ವಿದ್ಯಾ ಪ್ರದೀಪ್ ಅವರು ಸದ್ಯಕ್ಕೆ ನಿರ್ದೇಶಕ ವಿಘ್ನೇಶ್ ಆಕ್ಷನ್-ಕಟ್ ಹೇಳುತ್ತಿರುವ ಮಲಯಾಳಂ ಚಿತ್ರ 'ಅಸುರಕುಲಮ್' ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಜಾಹೀರಾತಿಗೆ ಬಹು ಬೇಡಿಕೆಯುಳ್ಳ ನಟಿ

  ಜಾಹೀರಾತಿಗೆ ಬಹು ಬೇಡಿಕೆಯುಳ್ಳ ನಟಿ

  ಇವರು ಬರೀ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೇ, ಜಾಹೀರಾತು ಕ್ಷೇತ್ರಗಳಲ್ಲೂ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಚಿನ್ನಾಭರಣಗಳ ಜಾಹೀರಾತು, ಸೀರೆ ಮಳಿಗೆಗೆಳ ಜಾಹೀರಾತು, ಮನೆ ಅಡುಗೆಗಳ ಜಾಹೀರಾತು ಮುಂತಾದವುಗಳಿಗೆ ರಾಯಭಾರಿಯಾಗಿದ್ದಾರೆ.

  ಚಿನ್ನಾಭರಣಗಳ ಜಾಹೀರಾತಿನಲ್ಲಿ ನಟಿ

  ಚಿನ್ನಾಭರಣಗಳ ಜಾಹೀರಾತಿನಲ್ಲಿ ನಟಿ

  ಚಿನ್ನಾಭರಣಗಳ ಜಾಹೀರಾತಿಗಾಗಿ ಗುಜರಾತಿನ ವಡೋದರ ಅರಮನೆಯಲ್ಲಿ ಬೀಡು ಬಿಟ್ಟಿದ್ದ ನಟಿ ವಿದ್ಯಾ ಪ್ರದೀಪ್ ಬಿಡುವಿನ ಸಮಯದಲ್ಲಿ ಹಿಂದಿ ಸೂಪರ್ ಹಿಟ್ 'ಬಾಜೀರಾವ್ ಮಸ್ತಾನಿ' ಸಿನಿಮಾ ಖ್ಯಾತಿಯ ಛಾಯಾಗ್ರಾಹಕ ಸುದೀಪ್ ಚಟರ್ಜಿ ಅವರ ಜೊತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದು ನೋಡಿ.

  ಸದ್ಯದಲ್ಲೇ ಶೂಟಿಂಗ್ ಆರಂಭ

  ಸದ್ಯದಲ್ಲೇ ಶೂಟಿಂಗ್ ಆರಂಭ

  ಇನ್ನೇನು ಚಿತ್ರಕ್ಕೆ ನಟಿಯ ಆಯ್ಕೆ ಕೂಡ ಆಗಿದ್ದು ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಆದಷ್ಟು ಬೇಗ 'ಶ್ರೀಕಂಠ' ಶೂಟಿಂಗ್ ಮುಗಿಸಿ ಶಿವಣ್ಣ ಅವರು ಈ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

  English summary
  Actress Vidya Pradeep, who predominantly works in Tamil & Malayalam movies will soon make her debut in a Kannada movie. The actress has been chosen to play the female lead opposite Shivarajkumar's 'S/O Bangarada Manushya'. The movie is directed by Yogi G Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X