For Quick Alerts
  ALLOW NOTIFICATIONS  
  For Daily Alerts

  ಬ್ಲ್ಯಾಕ್‌ ಮೇಲ್ ಮಾಡುವ ಮಾಧ್ಯಮಗಳ ಮೇಲೆ ವಿಜಯ್ ದೇವರಕೊಂಡ ಕಿಡಿ

  |

  ನಟ ವಿಜಯ್ ದೇವರಕೊಂಡ ಇದ್ದಕ್ಕಿದ್ದಂತೆ ಮಾಧ್ಯಮಗಳ ಮೇಲೆ ವಿಪರೀತ ಸಿಟ್ಟಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ ದೇವರಕೊಂಡ.

  ಮಕ್ಕಳೊಂದಿಗೆ KGF ನಿರ್ದೇಶಕ ಪ್ರಶಾಂತ್ ನೀಲ್ ಜಬರ್ದಸ್ತ್ ಫೃಟ್ | Prashanth Neel | KGF 2

  ಹೌದು, ವಿಜಯ್ ದೇವರಕೊಂಡ ಅವರು ಎಲ್ಲಾ ಮಾಧ್ಯಮಗಳ ಮೇಲೂ ಸಿಟ್ಟಾಗಿಲ್ಲ. ಬದಲಿಗೆ, ತಮ್ಮ ಬಗ್ಗೆ ಉದ್ದೇಶಪೂರ್ವಕವಾಗಿ ಕೆಟ್ಟದಾಗಿ ಬರೆಯುವ, ಸಿನಿಮಾ ಮಂದಿಯನ್ನು ಜಾಹೀರಾತಿಗಾಗಿ ಬ್ಲ್ಯಾಕ್ ಮೇಲ್ ಮಾಡುವ ಮಾಧ್ಯಮಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಕೊರೊನಾ ಸಮಯದಲ್ಲಿ ವಿಜಯ್ ದೇವರಕೊಂಡ ಜನರಿಂದ ದೇಣಿಗೆ ಸಂಗ್ರಹಿಸಿ ಅದನ್ನು ಬಡವರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು. ಆದರೆ ಇದರ ಬಗ್ಗೆ ಅಂತರ್ಜಾಲ ಮಾಧ್ಯಮವೊಂದು ತಪ್ಪಾಗಿ ಬರೆದಿತ್ತು. ಇದು ವಿಜಯ್ ದೇವರಕೊಂಡ ಅವರನ್ನು ಕೆರಳಿಸಿದೆ.

  ನಮಗೆ ಬೆದರಿಕೆ ಹಾಕುತ್ತಾರೆ: ವಿಜಯ್ ದೇವರಕೊಂಡ

  ನಮಗೆ ಬೆದರಿಕೆ ಹಾಕುತ್ತಾರೆ: ವಿಜಯ್ ದೇವರಕೊಂಡ

  ''ಈ ಮಾಧ್ಯಮಗಳು ನಡೆಯುವುದೇ ನಮ್ಮ ಉದ್ಯಮದಿಂದ, ಮತ್ತೆ ಜಾಹೀರಾತಿಗಾಗಿ ಸಿನಿಮಾ ಮಂದಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ನಿಮ್ಮ ಸಿನಿಮಾ ರೇಟಿಂಗ್ ಕಡಿಮೆ ಮಾಡುತ್ತೇವೆ, ಎಂಬಿತ್ಯಾದಿ ಬೆದರಿಕೆಗಳನ್ನು ಹಾಕುತ್ತಾರೆ'' ಎಂದು ವಿಜಯ್ ದೇವರಕೊಂಡ ಕಿಡಿ ಕಾರಿದ್ದಾರೆ.

  ಚಾರಿಟಿ ಬಗ್ಗೆ ತಪ್ಪು ಮಾಹಿತಿ ಪ್ರಕಟ

  ಚಾರಿಟಿ ಬಗ್ಗೆ ತಪ್ಪು ಮಾಹಿತಿ ಪ್ರಕಟ

  ತಮ್ಮ ಬಗ್ಗೆ ತಮ್ಮ ಚಾರಿಟಿ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಅಂತರ್ಜಾಲ ಮಾಧ್ಯಮದ ಬಗ್ಗೆ ತೀವ್ರ ಆಕ್ರೋಶವನ್ನು ವಿಡಿಯೋದಲ್ಲಿ ಹೊರಹಾಕಿರುವ ವಿಜಯ್ ದೇವರಕೊಂಡ, ಸುಳ್ಳು ಸುದ್ದಿಗಳನ್ನು ಹರಡುವ ವೆಬ್‌ಸೈಟ್‌ಗಳಿಂದ ದೂರ ಇರಿ ಎಂದು ಮನವಿ ಮಾಡಿದ್ದಾರೆ.

  ಎಲ್ಲಾ ಪ್ರಶ್ನೆಗಳಿಗೂ ದೇವರಕೊಂಡ ಉತ್ತರ

  ಎಲ್ಲಾ ಪ್ರಶ್ನೆಗಳಿಗೂ ದೇವರಕೊಂಡ ಉತ್ತರ

  ಅಂತರ್ಜಾಲ ಮಾಧ್ಯಮವು ತಮ್ಮ ಬಗ್ಗೆ ಪ್ರಕಟಿಸಿದ್ದ ಸುದ್ದಿಯನ್ನು ವಿಡಿಯೋದಲ್ಲಿ ಓದಿ ಹೇಳಿ ಅವರು ಬರೆದಿರುವುದಕ್ಕೆಲ್ಲಾ ಅಲ್ಲಿಯೇ ಉತ್ತರ ನೀಡಿದ ವಿಜಯ್ ದೇವರಕೊಂಡ, ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳನ್ನುನ ತರಾಟೆಗೆ ತೆಗೆದುಕೊಂಡಿದ್ದಾರೆ.

  ಹಣ ಬಳಸಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು

  ಹಣ ಬಳಸಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು

  ವಿಜಯ್ ದೇವರಕೊಂಡ ಅವರು ಮಾಡುತ್ತಿರುವ ಚಾರಿಟಿ ಹೆಚ್ಚಿನ ಜನರಿಗೆ ಸಹಾಯ ಮಾಡಿಲ್ಲ, ಜನರಿಂದ, ಅಭಿಮಾನಿಗಳಿಂದ ಸಂಗ್ರಹಿಸಿರುವ ಹಣವನ್ನು ತಾವೇ ಬಳಸಿಕೊಂಡಿದ್ದಾರೆ ಎಂದು ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿತ್ತು, ಈ ವರದಿ ವಿಜಯ್ ದೇವರಕೊಂಡ ಸಿಟ್ಟು ಕೆರಳಿಸಿತ್ತು.

  English summary
  Actor Vijay Devarkonda angry on entertainment website which wrote wrong information about him and his social work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X