twitter
    For Quick Alerts
    ALLOW NOTIFICATIONS  
    For Daily Alerts

    "ಕಾಂತಾರ' ಯಾಕೆ ಆಸ್ಕರ್‌ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್‌ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್

    |

    ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಸಾಂಗ್ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವುದು ಗೊತ್ತೇಯಿದೆ. ಕನ್ನಡದ 'ಕಾಂತಾರ' ಸಿನಿಮಾ ಕೂಡ ಶಾರ್ಟ್ಗ ಲಿಸ್ಟ್‌ನಲ್ಲಿ ಇತ್ತು. ಆದರೆ ನಾಮಿನೇಟ್ ಆಗುವಲ್ಲಿ ವಿಫಲವಾಗಿತ್ತು. ಇದಕ್ಕೆ ಕಾರಣ ಏನಿರಬಹುದು ಎನ್ನುವುದನ್ನು ವಿಜಯ್ ಕಿರಗಂದೂರ್ ಬಿಚ್ಚಿಟ್ಟಿದ್ದಾರೆ.

    ಕಳೆದ ವರ್ಷ ದಸರಾ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಎಲ್ಲರ ಹುಬ್ಬೇರಿಸಿತ್ತು. ಪರಭಾಷಿಕರು ಕೂಡ ಸಿನಿಮಾ ನೋಡಿ ಕೈ ಮುಗಿದಿದ್ದರು. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಂದಾಜು 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಿತ್ತು. ಕನ್ನಡ ಸಿನಿಮಾ ಆಗಿ ರಿಲೀಸ್ ಆಗಿದ್ದ ಸಿನಿಮಾ ನೋಡ ನೋಡುತ್ತಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿತ್ತು.

    ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!

    ಕರಾವಳಿ ಭಾಷೆ, ಅಲ್ಲಿನ ಆಚರಣೆ, ಕಂಬಳ, ಕೋಲ ಎಲ್ಲವನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಇನ್ನು ಸಿನಿಮಾ ಕ್ಲೈಮ್ಯಾಕ್ಸ್ ಅಂತೂ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. 'ಕಾಂತಾರ' ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.

    ಆಸ್ಕರ್‌ಗೆ ಯಾಕೆ ನಾಮಿನೇಟ್ ಆಗ್ಲಿಲ್ಲ?

    ಆಸ್ಕರ್‌ಗೆ ಯಾಕೆ ನಾಮಿನೇಟ್ ಆಗ್ಲಿಲ್ಲ?

    ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಮಾತನಾಡಿದ್ದಾರೆ. "ಕಾಂತಾರ ಸಿನಿಮಾ ಸೆಪ್ಟೆಂಬರ್‌ ಕೊನೆಗೆ ರಿಲೀಸ್ ಆಗಿತ್ತು. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಾರ್ಡ್ಸ್ ನಾಮಿನೇಷನ್‌ ಹೊತ್ತಿಗೆ ಸಿನಿಮಾ ಬಗ್ಗೆ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಹೊರ ದೇಶಗಳಲ್ಲಿ ಪ್ರದರ್ಶನ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಚಿತ್ರಕ್ಕೆ ಮತಗಳು ಸಿಕ್ಕಿಲ್ಲ. ಸರಿಯಾದ ಪ್ರಚಾರ ಇಲ್ಲದ ಕಾರಣಕ್ಕೆ ಆಸ್ಕರ್, ಗೋಲ್ಡನ್ ಗ್ಲೋಬ್ ರೀತಿಯ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಸಿನಿಮಾ ನಾಮಿನೇಟ್ ಆಗಿಲ್ಲ ಎನಿಸುತ್ತಿದೆ. RRR ಸಿನಿಮಾ ರಿಲೀಸ್ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮೋಟ್ ಮಾಡಲು ಅವರಿಗೆ ಬಹಳ ಸಮಯ ಸಿಕ್ಕಿತ್ತು" ಎಂದಿದ್ದಾರೆ.

    'ಕಾಂತಾರ' -2ಗೆ ಪ್ರಶಸ್ತಿ ಗ್ಯಾರೆಂಟಿ!

    'ಕಾಂತಾರ' -2ಗೆ ಪ್ರಶಸ್ತಿ ಗ್ಯಾರೆಂಟಿ!

    "ಈ ವರ್ಷ ನಮಗೆ ಗೊತ್ತಾಗಿದೆ. ನಾವು ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಹೋಗುವಲ್ಲಿ ಎಲ್ಲಿ ವಿಫಲವಾಗಿದ್ದೇವೆ ಎನ್ನುವುದು ಗೊತ್ತಾಗಿದೆ. ಮುಂದಿನ ಬಾರಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲಾ ವಿಧದಲ್ಲೂ 'ಕಾಂತಾರ' ಸೀಕ್ವೆಲ್‌ನ ದೊಡ್ಡಮಟ್ಟದಲ್ಲಿ ಕೊಂಡೊಯ್ಯುವ ಪ್ರಯತ್ನ ನಡೀತಿದೆ. ನಮ್ಮ ಸಿನಿಮಾಗಳಿಗೆ ಪ್ರಶಸ್ತಿಗಳು ಬೇಕು. ಅದಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತೇವೆ" ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ.

    'ಕಾಂತಾರ'- 2 ರಿಲೀಸ್ ಯಾವಾಗ?

    'ಕಾಂತಾರ'- 2 ರಿಲೀಸ್ ಯಾವಾಗ?

    ಡಿವೈನ್ ಬ್ಲಾಕ್‌ಬಸ್ಟರ್ 'ಕಾಂತಾರ' ಸೀಕ್ವೆಲ್‌ ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಸಿನಿಮಾ ರಿಲೀಸ್ ಯಾವಾಗ ಎನ್ನುವ ಪ್ರಶ್ನೆಗೆ "ಮುಂದಿನ ವರ್ಷದ ಮಧ್ಯದ ವೇಳೆಗೆ ಎಂದು ಉತ್ತರಿಸಿದ್ದಾರೆ. 'ಕಾಂತಾರ' ಸಿನಿಮಾ ಇಂಪ್ಯಾಕ್ಟ್ ಯಾವ ರೀತಿ ಇತ್ತು ಎನ್ನುವುದು ಗೊತ್ತಾಗಿದೆ. ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆ ಇದೆ. ಈ ಸಿನಿಮಾ ಅಂತರಾಷ್ಟ್ರೀಯ ಪ್ರಶಸ್ತಿಗಳ ವೇದಿಕೆಗೆ ಸೂಕ್ತವಾಗಿರುತ್ತದೆ. ನಾವು ಕಂಡಿತ ದೊಡ್ಡಮಟ್ಟದಲ್ಲಿ ಕೊಂಡೊಯ್ಯುತ್ತೇವೆ" ಎಂದಿದ್ದಾರೆ.

    ಮಾರ್ಕೆಟಿಂಗ್ ಬಹಳ ಮುಖ್ಯ

    ಮಾರ್ಕೆಟಿಂಗ್ ಬಹಳ ಮುಖ್ಯ

    ರಾಜಮೌಳಿ ರೀತಿಯ ಫಿಲ್ಮ್ ಮೇಕರ್ಸ್ ಬಹಳ ದೊಡ್ಡದಾಗಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಮಾರ್ಕೆಟಿಂಗ್ ಬಹಳ ಮುಖ್ಯನಾ? ಎನ್ನುವ ಪ್ರಶ್ನೆಗೆ "ಒಳ್ಳೆ ಕಂಟೆಂಟ್ ಇದ್ದು ಮಾರ್ಕೆಟಿಂಗ್ ಸರಿಯಾಗಿ ಮಾಡದಿದ್ದರೆ ದೊಡ್ಡ ಸಂಖ್ಯೆಯಲ್ಲಿ ಜನ ಬಂದು ಸಿನಿಮಾ ನೋಡಲ್ಲ. KGF ಚಿತ್ರದ ವಿಚಾರದಲ್ಲಿ ಇದ್ದನ್ನೇ ಮಾಡಿದ್ದೆವು. ನಾವು ಚಾಪ್ಟರ್‌- 1 ಪ್ರಚಾರಕ್ಕೆ ಹೆಚ್ಚು ಸಮಯ ವ್ಯಯಿಸಿದ್ದೆವು. ಸಾಕಷ್ಟು ಶ್ರಮ ಹಾಕಿದ್ದೆವು. ಚಾಪ್ಟರ್‌- 2 ವಿಚಾರದಲ್ಲೂ ಇದನ್ನೇ ಮಾಡಿದ್ದೆವು. ಮೊದಲೆಲ್ಲಾ ದಕ್ಷಿಣದಲ್ಲಿ ಒಳ್ಳೆ ಸಿನಿಮಾ ಬರುತ್ತಿರಲಿಲ್ಲ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಅವರು ಮಾರ್ಕೆಟಿಂಗ್ ಮಾಡುತ್ತಿರಲಿಲ್ಲ. ಒಳ್ಳೆ ಪ್ರಾಡೆಕ್ಟ್ ಜೊತೆಗೆ ಒಳ್ಳೆ ಪ್ರಮೋಷನ್ ಮಾಡಿದರೆ ಸಕ್ಸಸ್ ಸಿಗುತ್ತೆ" ಎಂದು ಹೇಳಿದ್ದಾರೆ.

    English summary
    Vijay Kiragandur opens up why Kantara missed qualifying for the Oscar nominations. He also ensure Kantara Sequel wins International awards. Know more.
    Wednesday, February 1, 2023, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X