»   » ಶಿವಣ್ಣ vs ವಿಜಯ ರಾಘವೇಂದ್ರ: ಈ ರೀತಿ ಆಗಬಾರದು!

ಶಿವಣ್ಣ vs ವಿಜಯ ರಾಘವೇಂದ್ರ: ಈ ರೀತಿ ಆಗಬಾರದು!

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾ ಈಗಾಗಲೇ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಿದೆ. ಆಗಸ್ಟ್ 11 ರಂದು 'ಮಾಸ್ ಲೀಡರ್' ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಜೊತೆ ವಿಜಯ ರಾಘವೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ, ಚಿನ್ನಾರಿ ಮುತ್ತನ ಅಭಿಮಾನಿಗಳಿಗೂ ಖುಷಿಯ ವಿಚಾರ.

ಆದ್ರೆ, ಈ ಖುಷಿಯ ಬೆನ್ನಲ್ಲೆ ಒಂದು ಬೇಸರದ ಸಂಗತಿ ಕೂಡ ವಿಜಯ ರಾಘವೇಂದ್ರ ಫ್ಯಾನ್ಸ್ ಗೆ ಎದುರಾಗಿದೆ. ಹೌದು, 'ಮಾಸ್ ಲೀಡರ್' ಚಿತ್ರದ ಜೊತೆಗೆ ವಿಜಯ ರಾಘವೇಂದ್ರ ನಾಯಕನಾಗಿ ಅಭಿನಯಿಸಿರುವ 'ಜಾನಿ' ಚಿತ್ರ ತೆರೆಗೆ ಬರುತ್ತಿದೆ. ಹೀಗಾಗಿ, ಹ್ಯಾಟ್ರಿಕ್ ಹೀರೋ ಜೊತೆ ಮಿಂಚಿರುವ ವಿಜಯ ರಾಘವೇಂದ್ರ ಅವರನ್ನ ನೋಡ್ಬೇಕಾ ಅಥವಾ ಪೂರ್ತಿ ಪ್ರಮಾಣದಲ್ಲಿ ನಾಯಕನಾಗಿ ಮಿಂಚಿರುವುದು ನೋಡ್ಬೇಕಾ ಎನ್ನುವ ಗೊಂದಲ ಸಿನಿಪ್ರೇಮಿಗಳನ್ನ ಕಾಡುತ್ತಿದೆ.

Vijay raghavendra Film vs Shiva Rajkumar Film

ಪಿ.ಕೆ.ಎಚ್ ದಾಸ್ ಆಕ್ಷನ್ ಕಟ್ ಹೇಳಿರುವ 'ಜಾನಿ' ಚಿತ್ರದಲ್ಲಿ ವಿಜಯ್ ರಾಘವೇಂದ್ರ ರವರಿಗೆ ಜನನಿ ಜೊತೆಯಾಗಿ ನಟಿಸಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಿಲನ ನಾಗರಾಜ್, ಸಾಧು ಕೋಕಿಲ, ರವಿ ಕಾಳೆ, ಶೋಭರಾಜ್, ರಂಗಾಯಣ ರಘು ಮತ್ತು ಮುಂತಾದವರು ನಟಿಸಿದ್ದಾರೆ.

'ಚಿನ್ನಾರಿ ಮುತ್ತ' ವಿಜಯ ರಾಘವೇಂದ್ರ 'ಜಾನಿ' ಬಿಡುಗಡೆ ಡೇಟ್ ಫಿಕ್ಸ್

Vijay raghavendra Film vs Shiva Rajkumar Film

ಇನ್ನು ನರಸಿಂಹ ಆಕ್ಷನ್ ಕಟ್ ಹೇಳಿರುವ ಮಾಸ್ ಲೀಡರ್ ಚಿತ್ರದಲ್ಲಿ ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೇಶ್, ಗುರು ಜಗ್ಗೇಶ್, ಪ್ರಣೀತಾ, ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಸ್ವಾತಂತ್ರ್ಯದಿನೋತ್ಸವದ ಪ್ರಯುಕ್ತ 'ಸೆಂಚುರಿ ಸ್ಟಾರ್' ಸಿನಿಮಾ ರಿಲೀಸ್

English summary
There is a clash between Shivarajkumar and Vijay Raghavendra coming up next week. Shivanna's Mass Leader and Vijay Raghavendra's Jaani is releasing on August 11. Coincidentally Vijay Raghavendra has also acted in Mass Leader

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada