'ಎರಡು ಕನಸು'ಗೆ ಮಿಡಿದ ವಿಜಯ್ ರಾಘವೇಂದ್ರ ಮನಸ್ಸು
ಎಪ್ಪತ್ತರ ದಶಕದಲ್ಲಿ ದೊರೈ-ಭಗವಾನ್ ಜೋಡಿ ನಿರ್ದೇಶಿಸಿದ ದೃಶ್ಯಕಾವ್ಯ 'ಎರಡು ಕನಸು'. ವಾಣಿ ಅವರ ಅದೇ ಹೆಸರಿನ ಕಾದಂಬರಿ ಆಧಾರಿತ ಈ ಚಿತ್ರದ ಹಾಡುಗಳು ಇಂದಿಗೂ ಮನಸೂರೆಗೊಳ್ಳುವಂತಿವೆ.
ವರನಟ ಡಾ.ರಾಜ್ ಕುಮಾರ್, ಮಂಜುಳಾ, ಕಲ್ಪನಾ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ರಾಜನ್ ನಾಗೇಂದ್ರ ಅವರ ಸಂಗೀತ ಝಲಕ್ ಮರೆಯಲು ಸಾಧ್ಯವೇ? ಬಾಡಿ ಹೋದ ಬಳ್ಳಿಯಿಂದ, ತಮ್ ನಂ ತಮ್ ನಂ, ಇಂದು ಎನಗೆ ಗೋವಿಂದ, ಪೂಜಿಸಲೆಂದೇ ಹೂಗಳ ತಂದೆ, ಎಂದು ನಿನ್ನ ನೋಡುವೆ ಹಾಡುಗಳು ಚಿತ್ರಕ್ಕೆ ವಿಶೇಷ ಮೆರುಗು ತಂದಿವೆ. [ಹೆಸರು ಬದಲಾಯಿಸಿಕೊಂಡ ವಿಜಯ ರಾಘವೇಂದ್ರ]

ಇದೀಗ ಇದೇ ಹೆಸರಿನ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸುತ್ತಿದ್ದಾರೆ. 'ಕೊಟ್ರೇಶಿ ಕನಸು' ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ವಿಜಯ್ ರಾಘವೇಂದ್ರ ಇದೀಗ 'ಎರಡು ಕನಸು' ಕಾಣಲು ಮುಂದಾಗಿದ್ದಾರೆ. ಆದರೆ ಅಂದಿನ 'ಎರಡು ಕನಸು' (1974) ಚಿತ್ರಕ್ಕೂ ಇಂದಿನ ತಮ್ಮ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತದೆ ಚಿತ್ರತಂಡ. [ಸ್ಯಾಂಡಲ್ ವುಡ್ ಮಹಾ ಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಇದೊಂದು ಪಕ್ಕಾ ಲವ್ ಸ್ಟೋರಿ ಕಮ್ ಕೌಟುಂಬಿಕ ಕಥೆಯಾಧಾರಿತ ಚಿತ್ರ ಎನ್ನುತ್ತಾರೆ ವಿಜಯ್ ರಾಘವೇಂದ್ರ. ಇದೇ ಮೊದಲ ಬಾರಿಗೆ ಮದನ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಆಕಾಶ್ ಸ್ಟುಡಿಯೋದಲ್ಲಿ ಹಾಡಿನ ಧ್ವನಿಮುದ್ರಣದ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ.


Click it and Unblock the Notifications











