Just In
Don't Miss!
- News
ಶೌರ್ಯ ಪ್ರಶಸ್ತಿಗೆ ಚಿಕ್ಕಾಸೂ ಬೆಲೆ ನೀಡದ ಕೇರಳ ಸರಕಾರ; ವೃದ್ಧೆಯ ದಶಕಗಳ ಹೋರಾಟ
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಜಯ್ ರಾಘವೇಂದ್ರ ಹಾಡು ಹಾಡಲು ಆ ವಿಶೇಷ ವ್ಯಕ್ತಿಯೇ ಸ್ಪೂರ್ತಿ
ನಟ ವಿಜಯ್ ರಾಘವೇಂದ್ರ ಅದ್ಭುತ ಹಾಡುಗಾರ ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಕನ್ನಡ ಬಿಗ್‌ಬಾಸ್ ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿ ವಿಜಯ್ ಜನರ ಮನಗೆಲ್ಲಲು ಅವರ ಸುಮಧುರ ಕಂಠವೂ ಕಾರಣವಾಗಿತ್ತು.
ನಂತರ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು, ಟಿವಿ ಚ್ಯಾನಲ್‌ಗಳ ಸಂದರ್ಶನಕ್ಕೆ ಹೋದರು ಹಾಡುವಂತೆ ಅವರನ್ನು ಒತ್ತಾಯಿಸಲಾಗುತ್ತಿತ್ತು, ಹಾಡುವುದನ್ನು ಎಂಜಾಯ್ ಮಾಡುವ ವಿಜಯ್ ರಾಘವೇಂದ್ರ ಇಲ್ಲವೆನ್ನದೆ ಹಾಡುತ್ತಿದ್ದರು.
ಈಗ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿಜಯ್ ರಾಘವೇಂದ್ರ ಮಾಮೂಲಿಗಿಂತಲೂ ಹೆಚ್ಚಿಗೆ ಹಾಡುತ್ತಿದ್ದಾರಂತೆ. ಇದಕ್ಕೆ ಕಾರಣ ಒಬ್ಬ ವಿಶೇಷ ವ್ಯಕ್ತಿ, ಹಾಡುವುದನ್ನು ಗಂಭೀರವಾಗಿ ತೆಗೆದುಕೊಳ್ಳಲು ಅವರೇ ಸ್ಪೂರ್ತಿ ಎಂದು ವಿಜಯ್ 'ಕನ್ನಡ ಫಿಲ್ಮಿಬೀಟ್' ಫೇಸ್‌ಬುಕ್‌ನಲ್ಲಿ ನಡೆದ ಲೈವ್ ನಲ್ಲಿ ಹೇಳಿದ್ದಾರೆ.

ಫೇಸ್‌ಬುಕ್ ನಲ್ಲಿ ದಿನವೂ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ
ದಿನವೂ ಒಂದು ಹಾಡು ಹಾಡಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವನ್ನು ವಿಜಯ್ ರಾಘವೇಂದ್ರ ಹಂಚಿಕೊಳ್ಳುತ್ತಿದ್ದಾರೆ. ವಿಜಯ್ ರಾಘವೇಂದ್ರ ಹಾಡನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಅಲ್ಲಿ ಬರುತ್ತಿರುವ ಕಮೆಂಟ್‌ಗಳೇ ಸಾಕ್ಷಿ. ಆದರೆ ವಿಜಯ್ ರಾಘವೇಂದ್ರ ಹಾಡು ಹಾಡಲು ಸ್ಪೂರ್ತಿ ಅವರ ಮಡದಿ.

ವಿಜಯ್ ರಾಘವೇಂದ್ರ ಹಾಡಿಗೆ ಮಡದಿಯೇ ಸ್ಪೂರ್ತಿ
ಹೌದು, ವಿಜಯ್ ರಾಘವೇಂದ್ರ ಅವರು ಹಾಡುವುದನ್ನು ಗಂಭೀರವಾಗಿ ಪರಿಗಣಿಸಲು, ಹಾಗೂ ಪ್ರತಿದಿನ ಹಾಡು ಹಾಡುವಂತೆ ಆಗಲು ಆಗಲು ಕಾರಣ, ಸ್ಪೂರ್ತಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ. ವಿಜಯ್ ರಾಘವೇಂದ್ರ ಹಾಡು ಹಾಡಲು, ಹಾಡುವುದನ್ನು ಗಂಭೀರವಾಗಿ ಪರಿಗಣಿಸಲು ಸ್ಪಂದನೇ ಅವರೇ ಕಾರಣವಂತೆ.

ಖಡಕ್ ಪೊಲೀಸ್ ಅಧಿಕಾರಿ ಮಗಳು
ಅಂದಹಾಗೆ ಸ್ಪಂದನ ಹಾಗೂ ವಿಜಯ್ ರಾಘವೇಂದ್ರ ಅವರ ವಿವಾಹವು 2007 ರಲ್ಲಿ ನಡೆಯಿತು. ಸ್ಪಂದನ ಅವರು ನಾಡು ಕಂಡ ನಿಷ್ಠಾವಂತ ಹಾಗೂ ಖಡಕ್ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿದ್ದ ಬಿ.ಕೆ.ಶಿವರಾಂ ಅವರ ಪುತ್ರಿ. ವಿಜಯ್ ರಾಘವೇಂದ್ರ-ಸ್ಪಂದನ ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ.

ಬಿಡುಗಡೆಗೆ ತಯಾರಾಗಿದೆ '3BHK'
ಇನ್ನು ವಿಜಯ್ ರಾಘವೇಂದ್ರ ಅವರು ಸಿನಿಮಾದ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಅಭಿನಯದ '3BHK' ಸಿನಿಮಾ ಚಿತ್ರೀಕರಣ ಮುಗಿದಿದ್ದು, ಲಾಕ್‌ಡೌನ್ ಮುಗಿದ ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಬಿಡುಗಡೆ ಆಗಲಿದೆ.