For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ 'ಮಾಲ್ಗುಡಿ ಡೇಸ್': ಹೀರೋ ಆಗಿ 'ಚಿನ್ನಾರಿ ಮುತ್ತಾ' ವಿಜಯ್ ರಾಘವೇಂದ್ರ

  |
  ಕನ್ನಡದಲ್ಲೂ ಬರ್ತಿದೆ ಮಾಲ್ಗುಡಿ ಡೇಸ್ ಸಿನಿಮಾ..! | FILMIBEAT KANNADA

  'ಮಾಲ್ಗುಡಿ ಡೇಸ್' ಎಂದ ಕೂಡಲೆ ಸಿನಿ ಪ್ರಿಯರಿಗೆ ತಕ್ಷಣ ನೆನಪಾಗುವುದು ಶಂಕರ್ ನಾಗ್. 'ಕರಾಟೆ ಕಿಂಗ್' ಶಂಕರ್ ನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್' ಹೆಸರು ಕೇಳದವರೇ ಇಲ್ಲ. ಆರ್.ಕೆ.ನಾರಾಯಣ್ ರಚಿಸಿದ್ದ 'ಮಾಲ್ಗುಡಿ ಡೇಸ್' ಕಥೆಯನ್ನು ಧಾರಾವಾಹಿ ಮೂಲಕ ವೀಕ್ಷಕರೆದುರಿಗೆ ತಂದವರು ಶಂಕರ್ ನಾಗ್.

  ದಶಕಗಳ ಹಿಂದೆ ಪ್ರಸಾರವಾದ 'ಮಾಲ್ಗುಡಿ ಡೇಸ್' ಧಾರಾವಾಹಿಗೆ ಈಗಲೂ ಡಿಮ್ಯಾಂಡ್ ಇದೆ. 'ಮಾಲ್ಗುಡಿ ಡೇಸ್' ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕಲು ಒಂದು ಕಾರಣ ಇದೆ. ಆ ಕಾರಣ ಏನಪ್ಪಾ ಅಂದ್ರೆ, 'ಮಾಲ್ಗುಡಿ ಡೇಸ್' ಹೆಸರಿನಲ್ಲಿ ಒಂದು ಸಿನಿಮಾ ತಯಾರಾಗುತ್ತಿದೆ.

  ಸ್ವಯಂಪ್ರಭ ಎಂಟರ್‍ ಟೇನ್ಮೆಂಟ್, ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ರತ್ನಾಕರ್ ಕಾಮತ್ ನಿರ್ಮಾಣದಲ್ಲಿ 'ಮಾಲ್ಗುಡಿ ಡೇಸ್' ಸಿನಿಮಾ ಮೂಡಿಬರಲಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  ಪೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್

  ಪೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್

  'ಮಾಲ್ಗುಡಿ ಡೇಸ್' ಚಿತ್ರದ ಪೋಸ್ಟರ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಇದೇ ತಿಂಗಳಲ್ಲಿ 'ಮಾಲ್ಗುಡಿ ಡೇಸ್' ಚಿತ್ರದ ಚಿತ್ರೀಕರಣ ಶುರುವಾಗಲಿದೆ.

  ಜನಶ್ರೀ ವಾಹಿನಿಯಲ್ಲಿ ಶಂಕರನಾಗ್ ಮಾಲ್ಗುಡಿ ಡೇಸ್ಜನಶ್ರೀ ವಾಹಿನಿಯಲ್ಲಿ ಶಂಕರನಾಗ್ ಮಾಲ್ಗುಡಿ ಡೇಸ್

  ವಿಜಯ್ ರಾಘವೇಂದ್ರ ಹೀರೋ.!

  ವಿಜಯ್ ರಾಘವೇಂದ್ರ ಹೀರೋ.!

  'ಮಾಲ್ಗುಡಿ ಡೇಸ್' ಚಿತ್ರದಲ್ಲಿ ನಾಯಕನಾಗಿ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಹಿಂದೆಂದೂ ನಟಿಸಿರದ ಪಾತ್ರವೊಂದರಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸಲಿದ್ದಾರೆ.

  'ಮಾಲ್ಗುಡಿ ಡೇಸ್' ಕನ್ನಡ ಡಬ್ಬಿಂಗ್‌‌ಗೆ ಒಕ್ಕೊರಲ ಆಗ್ರಹ'ಮಾಲ್ಗುಡಿ ಡೇಸ್' ಕನ್ನಡ ಡಬ್ಬಿಂಗ್‌‌ಗೆ ಒಕ್ಕೊರಲ ಆಗ್ರಹ

  ಚಿತ್ರತಂಡದ ಕುರಿತು...

  ಚಿತ್ರತಂಡದ ಕುರಿತು...

  'ಮಾಲ್ಗುಡಿ ಡೇಸ್' ಚಿತ್ರವನ್ನು ಕಿಶೋರ್ ಮೂಡಬಿದ್ರೆ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ 'ಅಪ್ಪೆ ಟೀಚರ್' ಎಂಬ ತುಳು ಚಿತ್ರವನ್ನು ಕಿಶೋರ್ ನಿರ್ದೇಶಿಸಿದ್ದರು. ಕಿಶೋರ್ ಮೂಡಬಿದ್ರೆ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಪ್ರದೀಪ್ ನಾಯಕ್ ಸಂಕಲನವಿರುವ ಈ ಚಿತ್ರಕ್ಕೆ ಗಗನ್ ಖಡೇರಿಯಾ ಸಂಗೀತ ನೀಡುತ್ತಿದ್ದಾರೆ. ಸಾತ್ವಿಕ್ ಹೆಬ್ಬಾರ್, ಸಂದೀಪ್ ಬೆದ್ರ, ಕರುಣಾಕರ್ ಉಡುಪಿ, ಶಾಶಾಂಕ್ ನಾರಾಯಣ ನಿರ್ದೇಶನ ತಂಡದಲ್ಲಿದ್ದಾರೆ.

  ಯೂಟ್ಯೂಬಲ್ಲಿ ನೋಡಿ ಆನಂದಿಸಿ 'ಮಾಲ್ಗುಡಿ ಡೇಸ್'ಯೂಟ್ಯೂಬಲ್ಲಿ ನೋಡಿ ಆನಂದಿಸಿ 'ಮಾಲ್ಗುಡಿ ಡೇಸ್'

  ಇನ್ನೂ ಸಸ್ಪೆನ್ಸ್.!

  ಇನ್ನೂ ಸಸ್ಪೆನ್ಸ್.!

  ಆರ್.ಕೆ.ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಥೆಗೂ ಈ ಚಿತ್ರಕ್ಕೂ ಏನಾದರೂ ಸಂಬಂಧ ಇದ್ಯಾ.? 'ಮಾಲ್ಗುಡಿ ಡೇಸ್' ಕಥೆಯನ್ನ ರೀ ಕ್ರಿಯೇಟ್ ಮಾಡಲು ಕಿಶೋರ್ ಮೂಡಬಿದ್ರೆ ಹೊರಟಿದ್ದಾರಾ.? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅಸಲಿಗೆ ಸಿನಿಮಾಗೆ 'ಮಾಲ್ಗುಡಿ ಡೇಸ್' ಅಂತ ಶೀರ್ಷಿಕೆ ಇಟ್ಟಿರುವುದು ಯಾಕೆ ಎಂಬುದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ.

  English summary
  Kannada Actor Vijay Raghavendra to play lead in Kannada Movie Malgudi Days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X