»   »  ಕಾಲಿವುಡ್ ಜನರನ್ನು ಭಯ ಪಡಿಸುತ್ತಿದ್ದಾಳೆ ಕನ್ನಡದ 'ಮಮ್ಮಿ'

ಕಾಲಿವುಡ್ ಜನರನ್ನು ಭಯ ಪಡಿಸುತ್ತಿದ್ದಾಳೆ ಕನ್ನಡದ 'ಮಮ್ಮಿ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿ ನಿರ್ಮಾಪಕರ ಜೇಬು ತುಂಬಿಸುತ್ತಿರುವ ನಟಿ ಪ್ರಿಯಾಂಕ ಉಪೇಂದ್ರ. ಕಳೆದ ವರ್ಷ ಪ್ರಿಯಾಂಕ ಅಭಿನಯದ ಹಾರಾರ್ ಸಿನಿಮಾ 'ಮಮ್ಮಿ ಸೇವ್ ಮಿ' ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು.

ನವ ನಿರ್ದೇಶಕ ಹೆಚ್ ಲೋಹಿತ್ ನಿರ್ದೆಶನದಲ್ಲಿ ಮೂಡಿ ಬಂದಿದ್ದ 'ಮಮ್ಮಿ' ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆಯನ್ನೂ ಪಡೆದುಕೊಂಡಿತ್ತು. ಇದೀಗ 'ಮಮ್ಮಿ' ಚಿತ್ರ ತಮಿಳಿನಲ್ಲಿ ಡಬ್ ಆಗಿದ್ದು ಇತ್ತೀಚಿಗಷ್ಟೇ ಕಾಲಿವುಡ್ ನ ಸ್ಟಾರ್ ವಿಜಯ್ ಸೇತುಪತಿ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಸಿನಿಮಾಗೆ ಶುಭಕೋರಿದ್ದಾರೆ.

Vijay Sethupathi released tamil version of Mummy movie trailer

ಸುದೀಪ್, ಯಶ್ ಹಾದಿಯಲ್ಲೇ ಹೆಜ್ಜೆ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ

ಸಾಕಷ್ಟು ದಿನಗಳ ನಂತರ ಪ್ರಿಯಾಂಕ ಉಪೇಂದ್ರ ಆಕ್ಟ್ ಮಾಡಿರುವ ಚಿತ್ರವೊಂದು ಕಾಲಿವುಡ್ ನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಾಕಷ್ಟು ತಮಿಳು ಚಿತ್ರದಲ್ಲಿ ಪ್ರಿಯಾಂಕ ಅಭಿನಯಿಸಿದ್ದು ಸದ್ಯ ಆಕ್ಟ್ ಮಾಡುತ್ತಿರುವ 'ಹೌರಾ ಬ್ರಿಡ್ಜ್' ಚಿತ್ರ ಕೂಡ ತಮಿಳಿನಲ್ಲಿ ಬಿಡುಗಡೆ ಆಗುತ್ತಿದೆ.

Vijay Sethupathi released tamil version of Mummy movie trailer

ಇದೇ ತಿಂಗಳ 29 ರಂದು ತಮಿಳಿನ 'ಮಮ್ಮಿ' ಚಿತ್ರ ತೆರೆಗೆ ಬರುತ್ತಿದೆ. 'ಮಮ್ಮಿ' ಸಿನಿಮಾದಲ್ಲಿ ಪ್ರಿಯಾಂಕ ಜೊತೆಯಾಗಿ ಯುವಿನಾ ಪಾರ್ಥವಿ, ಐಶ್ವರ್ಯ ಸಿಂಧೋಗಿ, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

English summary
Priyanka Upendra's Kannada movie 'Mummy' Cinema is dubbing in Tamil. Recently tamil actor vijay Sethupathi released tamil version of mummy movie trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X