»   » ವಿಜಯ್ -ನಾಗರತ್ನ ವಿರಸಕ್ಕೆ ಅಂಬರೀಷ್ ಸಂಧಾನ

ವಿಜಯ್ -ನಾಗರತ್ನ ವಿರಸಕ್ಕೆ ಅಂಬರೀಷ್ ಸಂಧಾನ

Posted By:
Subscribe to Filmibeat Kannada
Duniya Vijay wife Nagarathna meet Ambareesh
ನಾಲ್ಕು ಗೋಡೆಗಳ ನಡುವೆ ಮಾತು ಕತೆ ಮೂಲಕ ಬಗೆ ಹರೆಯಬೇಕಾಗಿದ್ದ ದುನಿಯಾ ವಿಜಯ್ ದಾಂಪತ್ಯ ಪ್ರಕರಣ ಕೌಟುಂಬಿಕ ನ್ಯಾಯಾಲಯ ಮೆಟ್ಟಿಲೇರಿದ್ದು ಆಯ್ತು. ವಿಜಯ್ ಅವರ ಪತ್ನಿ ನಾಗರತ್ನ ಅವರು ಬೆದರಿಕೆ ಕರೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು ಆಯ್ತು.

ಈಗ ಕನ್ನಡ ಚಿತ್ರರಂಗದ ಹಿರಿಯಣ್ಣನಂತಿರುವ ಮಂಡ್ಯದ ಗಂಡು ಅಂಬರೀಷ್ ಅವರ ಮುಂದೆ ಪ್ರಕರಣ ಬಂದು ನಿಂತಿದೆ. 'ನನ್ನ ಪ್ರಯತ್ನ ನಾನು ಮಾಡುತ್ತೇನೆ. ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದೆ. ವಿಜಿಯನ್ನು ಕರೆದು ಮಾತನಾಡುತ್ತೇನೆ. ಮಕ್ಕಳಿಗಾಗಿ ಸಂಸಾರ ಸರಿ ಹೋಗಬೇಕಿದೆ' ಎಂದು ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಭರವಸೆ ನೀಡಿದ್ದಾರೆ.

ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು ಮಕ್ಕಳಾದ ಮೋನಿಷಾ, ಮೋನಿಕಾ, ಸಾಮ್ರಾಟ್ ಅವರನ್ನು ಕರೆದುಕೊಂಡು ಜೆಪಿ ನಗರದಲ್ಲಿರುವ ಅಂಬರೀಷ್ ಅವರ ಮನೆಗೆ ಭಾನುವಾರ (ಜ.20) ಬೆಳಗ್ಗೆ ಭೇಟಿ ನೀಡಿ ಮಾತನಾಡಿದ್ದಾರೆ. ನಮಗೆ ನಮ್ಮ ಅಪ್ಪ ಬೇಕು ದಯವಿಟ್ಟು ಮನೆಗೆ ಬರುವಂತೆ ಹೇಳಿ ಎಂದು ಮಕ್ಕಳು ಮೊರೆ ಇಟ್ಟಿದ್ದಾರೆ.

ವಿಜಯ್ ಗೆ ಇಂದು ಹುಟ್ಟು ಹಬ್ಬ:' ನಾನು ಪ್ರಾಮಾಣಿಕನಾದರೆ ನನಗೆ ನ್ಯಾಯ ಸಿಗುತ್ತೆ. ನನಗೆ ಹುಟ್ಟುಹುಬ್ಬ ಆಚರಿಸುವ ಮನಸ್ಸಿಲ್ಲ. ಆದರೆ, ದೂರದ ಊರುಗಳಿಂದ ಬಂದ ಅಭಿಮಾನಿಗಳಿಗೆ ನಿರಾಶೆ ಮಾಡಲು ಮನಸ್ಸಾಗುತ್ತಿಲ್ಲ ಎಂದು ಕತ್ರಿಗುಪ್ಪೆ ನಿವಾಸದಲ್ಲಿರುವ 38ನೇ ವಸಂತಕ್ಕೆ ಕಾಲಿರಿಸಿದ ವಿಜಯ್ ಅವರು ಹೇಳಿದ್ದಾರೆ.

ಪಬ್ಲಿಕ್ ಟಿವಿ ಮೇಲೆ ದಾಳಿ: ಬೇಕೇ ಬೇಕು ನ್ಯಾಯ ಬೇಕು. ದುನಿಯಾ ವಿಜಯ್ ದಾಂಪತ್ಯ ಸರಿಹೋಗುವುದು ನಿಮಗೆ ಬೇಕಿಲ್ಲವೇ? ಎಂದು ಪಬ್ಲಿಕ್ ಟಿವಿಯನ್ನು ಪ್ರಶ್ನಿಸಿದ ದುನಿಯಾ ವಿಜಯ್ ಅಭಿಮಾನಿಗಳು ಟಿವಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಆದರೆ, ಸ್ಥಳಕ್ಕೆ ಆಗಮಿಸಿದ ಯಶವಂತಪುರ ಠಾಣೆ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ವಿಜಯ್ ಅವರ ಪತ್ನಿ ನಾಗರತ್ನ ಹಾಗೂ ಮಕ್ಕಳು ಲೈವ್ ಶೋನಲ್ಲಿ ಭಾಗವಹಿಸಿ ವಿಜಯ್ ಅವರು ಬೇಕು ಎಂದು ಬೇಡಿಕೊಂಡಿದ್ದರು.

English summary
Duniya Vijay wife Nagarathna alongwith children meets Actor's association President Ambareesh and requests him to solve the issue. Duniya Vijay had a quite birthday celebration today(Jan.20). Few fans of Vijay reportedly attacked Public TV office at Yeshwanthpur, Bangalore
Please Wait while comments are loading...