For Quick Alerts
  ALLOW NOTIFICATIONS  
  For Daily Alerts

  'ಲಂಡನ್'ನಲ್ಲಿ ದರ್ಶನ್ ಗೆ ಸನ್ಮಾನ: ಶುಭಕೋರಿದ ಪತ್ನಿ ವಿಜಯಲಕ್ಷ್ಮಿ

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಂಡನ್ ಪಾರ್ಲಿಮೆಂಟ್ ನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನೆಲೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಶುಭಕೋರಿದ್ದಾರೆ. ವಿಶೇಷ ಅಂದ್ರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು, ತಮ್ಮ ಪತಿಗೆ ವಿಶ್ ಮಾಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

  ಕನ್ನಡ ಚಿತ್ರರಂಗಕ್ಕೆ ಚಾಲೆಂಜಿಂಗ್ ಸ್ಟಾರ್ ಸಲ್ಲಿಸಿದ ಕೊಡುಗೆಯನ್ನ ಗೌರವಿಸಿ ಲಂಡನ್ ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್' ನೀಡಿ ಸತ್ಕರಿಸಲಾಗಿದೆ. ದಾಖಲೆಗಳ ಪ್ರಕಾರ ಈ ಪ್ರಶಸ್ತಿ ಪಡೆದ ಕನ್ನಡದ ಮೊದಲ ನಟ ಎಂದು ಹೇಳಲಾಗ್ತಿದೆ.

  ದರ್ಶನ್ ಗೆ ಪತ್ನಿ ವಿಜಯಲಕ್ಷ್ಮಿ ಏನೆಂದು ವಿಶ್ ಮಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ

  ದರ್ಶನ್ ಪತ್ನಿ ಫುಲ್ ಹ್ಯಾಪಿ

  ದರ್ಶನ್ ಪತ್ನಿ ಫುಲ್ ಹ್ಯಾಪಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಂಡನ್ ಪಾರ್ಲಿಮೆಂಟ್ ನಲ್ಲಿ ಸನ್ಮಾನ ಮಾಡುತ್ತಿರುವ ಸುದ್ದಿ ಕೇಳಿದ ಪತ್ನಿ ವಿಜಯ್ ಲಕ್ಷ್ಮಿ ಅವರು ಸಂತಸಗೊಂಡಿದ್ದರು. ತಮ್ಮ ಸಂತಸವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ದರ್ಶನ್ ಅವರ ಪತ್ನಿ ''ದೊಡ್ಡ ಸಮಾರಂಭಕ್ಕೆ ವೇದಿಕೆ ಸಜ್ಜಾಗಿದೆ'' ಎಂದು ಫೋಟೋ ಪೋಸ್ಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದರು.

  'ಲಂಡನ್ ಪಾರ್ಲಿಮೆಂಟ್'ನಿಂದ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.!

  ಶುಭಾ ಕೋರಿದ ವಿಜಯಲಕ್ಷ್ಮಿ

  ಶುಭಾ ಕೋರಿದ ವಿಜಯಲಕ್ಷ್ಮಿ

  ಪ್ರಶಸ್ತಿ ಪಡೆಯುವುದಕ್ಕೆ ಮುಂಚೆಯೇ ಫೋಟೋ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದ ವಿಜಯಲಕ್ಷ್ಮಿ ಅವರು, ಯುಕೆ ಪಾರ್ಲಿಮೆಂಟ್ ನಲ್ಲಿ ಸನ್ಮಾನಿಸಿದ ನಂತರ ದರ್ಶನ್ ಅವರಿಗೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

  ಲಂಡನ್ ನಲ್ಲಿ ಅಪ್ಪ-ಮಗನ ಜುಗಲ್ ಬಂದಿ

  ಲಂಡನ್ ನಲ್ಲಿ ಅಪ್ಪ-ಮಗನ ಜುಗಲ್ ಬಂದಿ

  ಲಂಡನ್ ಪಾರ್ಲಿಮೆಂಟ್ ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್' ಪಡೆಯಲು ನಟ ದರ್ಶನ್ ಅವರು, ತಮ್ಮ ಮಗ ವಿನೀಶ್ ಅವರನ್ನ ಕೂಡ ಕರೆದುಕೊಂಡು ಹೋಗಿದ್ದರು. ಬ್ರಿಟಿಷ್ ನಾಡಲ್ಲಿ ಅಪ್ಪ-ಮಗ ಇಬ್ಬರು ಸೂಟ್ ಧರಿಸಿ ಜಬರ್ ದಸ್ತ್ ಆಗಿ ಮಿಂಚಿದ್ದಾರೆ.

  ದರ್ಶನ್ ದಾಂಪತ್ಯ ಉತ್ತಮವಾಗಿದೆ

  ದರ್ಶನ್ ದಾಂಪತ್ಯ ಉತ್ತಮವಾಗಿದೆ

  ಇನ್ನು ದರ್ಶನ್ ಅವರು ಸಿನಿಮಾಗಳಿಗೆ ಹಾಗೂ ಅವರು ಟ್ವೀಟ್ ಗಳಿಗೆ ಪತ್ನಿ ವಿಜಯಲಕ್ಷ್ಮಿ ಅವರು ಯಾವಾಗಲೂ ರೀ-ಟ್ವೀಟ್ ಮಾಡುತ್ತಿರುತ್ತಾರೆ. ಈಗ ಇವರಿಬ್ಬರು ಸಂಬಂಧ ಉತ್ತಮವಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.

  English summary
  Darshan's Wife vijaya lakshmi Wish to Her Husband Challenging star darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X