For Quick Alerts
  ALLOW NOTIFICATIONS  
  For Daily Alerts

  ಸಿಟ್ಟಿಗೆದ್ರೆ 'ಸುಡುಗಾಡು ಸಿದ್ಧ' ಆಗುವ ವಿಜಯ್ ರಾಘವೇಂದ್ರ.!

  By Harshitha
  |

  ವಿಜಯ್ ರಾಘವೇಂದ್ರ ಬರೀ ಲವ್ವರ್ ಬಾಯ್ ಆಗಿ ಮಾತ್ರ ಅಲ್ಲ. 'ಆಕ್ಷನ್ ಹೀರೋ' ಆಗಿಯೂ ಕನ್ನಡ ಚಿತ್ರರಂಗದಲ್ಲಿ ಫೇಮಸ್. 'ಮಿಲನ' ಪ್ರಕಾಶ್ ನಿರ್ದೇಶನದ 'ಶ್ರೀ' ಹಾಗೂ 'ರಿಷಿ' ಚಿತ್ರಗಳಲ್ಲಿ ವಿಜಯ್ ರಾಘವೇಂದ್ರ ಸೂಪರ್ ಸ್ಟಂಟ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.

  ಇದೀಗ ಅದೇ ಆಕ್ಷನ್ ಇಮೇಜ್ ನೊಂದಿಗೆ ಪ್ರೇಮಕಥೆ ಹೇಳಲು ನಟ ವಿಜಯ್ ರಾಘವೇಂದ್ರ ನಿಮ್ಮ ಮುಂದೆ ಬಂದಿದ್ದಾರೆ.

  ಸ್ಯಾಂಡಲ್ ವುಡ್ ಗೆ 'ಕೊಡಗಿನ ಕಿನ್ನರಿ' ನಿಧಿ ಸುಬ್ಬಯ್ಯ ಕಮ್ ಬ್ಯಾಕ್ ಮಾಡಿರುವ 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ವಿಜಯ್ ರಾಘವೇಂದ್ರ ಉತ್ತರ ಕರ್ನಾಟಕದ ಮಣ್ಣಿನ ಮಗನಾಗಿ ಮಿಂಚಿದ್ದಾರೆ. ಜೊತೆಗೆ 'ಕರಾಟೆ ಕಿಂಗ್' ಶಂಕರ್ ನಾಗ್ ಅಪ್ಪಟ ಅಭಿಮಾನಿಯಾಗಿ ಅಭಿನಯಿಸಿದ್ದಾರೆ. [ಶಂಕರಣ್ಣನ ಅಪ್ಪಟ ಅಭಿಮಾನಿಯ ಪ್ರೇಮ ಕಥೆ ಬಲ್ಲಿರಾ.?]

  ಇದುವರೆಗೂ ಸೀದಾ ಸಾದಾ ಹುಡುಗನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ರಾಘವೇಂದ್ರ 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ಖಡಕ್ ಹೈದ. ಬೇಕಾದ್ರೆ, ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ನ ಒಮ್ಮೆ ನೋಡಿ....

  ''ಸಿಟ್ಟಿಗೆದ್ರೆ ಸುಡುಗಾಡು ಸಿದ್ಧ..'' ಅಂತ ರಗಡ ಶೈಲಿಯಲ್ಲಿ ಡೈಲಾಗ್ ಹೇಳುವ ವಿಜಯ್ ರಾಘವೇಂದ್ರ, ಶ್ರೀಮಂತ ಮನೆತನದ ಹುಡುಗಿಯಾಗಿ ಬಡ ಹುಡುಗನ ಪ್ರೀತಿಸುವ ನಾಯಕಿ ನಿಧಿ ಸುಬ್ಬಯ್ಯ, ಇಬ್ಬರ ಪ್ರೀತಿಗೆ ಕಲ್ಲು ಹಾಕುವ ವಿಲನ್ ತಿಲಕ್ 'ನನ್ನ ನಿನ್ನ ಪ್ರೇಮಕಥೆ' ಚಿತ್ರದ ಪ್ರಮುಖ ಪಾತ್ರಧಾರಿಗಳು. ['ಪ್ರೇಮಕಥೆ'ಗೆ ಚಿಕ್ಕಣ್ಣನಿಂದ ಒಂದು ಶೋಕ ಗೀತೆ]

  ಇವರ ಮಧ್ಯೆ ನಕ್ಕು-ನಲಿಸಲು ಚಿಕ್ಕಣ್ಣ ಕೂಡ ಇದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ನಿರ್ದೇಶನದ ಹೊಣೆ ಕೂಡ ಹೊತ್ತಿದ್ದಾರೆ ಶಿವು ಜಮಖಂಡಿ. ಆನಂದ.ಸಿ.ನ್ಯಾಮಗೌಡ ನಿರ್ಮಾಣ ಮಾಡಿರುವ 'ನನ್ನ ನಿನ್ನ ಪ್ರೇಮಕಥೆ' ಬಿಡುಗಡೆಗೆ ಸಿದ್ಧವಾಗಿದೆ.

  English summary
  Beside being Lover Boy, Kannada Actor Vijaya Raghavendra has portrayed rough character in Kannada Movie 'Nanna Ninna Prem Kathe'. Nidhi Subbaiah is paired opposite Vijaya Raghavendra. Watch the trailer here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X