»   » ಶಂಕರಣ್ಣನ ಅಪ್ಪಟ ಅಭಿಮಾನಿಯ ಪ್ರೇಮ ಕಥೆ ಬಲ್ಲಿರಾ.?

ಶಂಕರಣ್ಣನ ಅಪ್ಪಟ ಅಭಿಮಾನಿಯ ಪ್ರೇಮ ಕಥೆ ಬಲ್ಲಿರಾ.?

Posted By:
Subscribe to Filmibeat Kannada

ದಶಕದ ಹಿಂದೆಯೇ ಮೋಡದ ಮರೆಗೆ ಸರಿದಿದ್ದರೂ, 'ಆಟೋ ರಾಜ' ಶಂಕರ್ ನಾಗ್ ಮಾತ್ರ ಈಗಲೂ ಸ್ಯಾಂಡಲ್ ವುಡ್ ನಲ್ಲಿ ಚಲ್ತಿ ಕಾ ನಾಮ್ ಗಾಡಿ. 'ಕರಾಟೆ ಕಿಂಗ್' ಶಂಕರ್ ನಾಗ್ ಹೆಸರಿನಲ್ಲಿ ಎಷ್ಟೋ ಸಿನಿಮಾಗಳು, ಪಾತ್ರಗಳು ಸೃಷ್ಟಿಯಾಗಿವೆ, ಆಗುತ್ತಿವೆ. ಅದಕ್ಕೆ ಹೊಸ ಸೇರ್ಪಡೆ 'ನನ್ನ ನಿನ್ನ ಪ್ರೇಮಕಥೆ'.

ಕನ್ನಡ ಚಿತ್ರರಂಗಕ್ಕೆ ನಿಧಿ ಸುಬ್ಬಯ್ಯ ಕಮ್ ಬ್ಯಾಕ್ ಮಾಡಿರುವ 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ನಾಯಕ ವಿಜಯ್ ರಾಘವೇಂದ್ರ ರದ್ದು ಶಂಕರ್ ನಾಗ್ ಅಪ್ಪಟ ಅಭಿಮಾನಿಯ ಪಾತ್ರ.


vijaya-raghavendra-plays-shankar-nag-s-fan-in-nanna-ninna-prema-kathe

ಶಂಕರ್ ನಾಗ್ ಅಭಿಮಾನಿ ಆಗಿ ಆರ್ಕೇಸ್ಟ್ರಾದಲ್ಲಿ ಹಾಡುವ ವಿಜಯ್ ರಾಘವೇಂದ್ರ ಮತ್ತು ಶ್ರೀಮಂತ ಕುಟುಂಬದ ಹುಡುಗಿ ನಿಧಿ ಸುಬ್ಬಯ್ಯ ನಡುವೆ ನಡೆಯುವ ಒಲವಿನ ಕಥೆಯೇ 'ನನ್ನ ನಿನ್ನ ಪ್ರೇಮಕಥೆ' ಸಿನಿಮಾ. [ನಿಧಿ ಸುಬ್ಬಯ್ಯ 'ಪ್ರೇಮಕಥೆ' ತಿಳಿಯುವ ಆಸೆ ಇದ್ಯಾ.?]


ಬಡ ಹುಡುಗ ಹಾಗೂ ಶ್ರೀಮಂತ ಹುಡುಗಿ ಅಂದಾಗಲೇ, ಕಥೆಯಲ್ಲಿ ಬರಬಹುದಾದ ಟ್ವಿಸ್ಟ್ ಗಳನ್ನ ನೀವು ಊಹಿಸಿಕೊಳ್ಳಬಹುದು. ಆದ್ರೆ, ನಿಮ್ಮಲ್ಲರ ಊಹೆಗೂ ಮೀರಿ ಶಂಕರ್ ನಾಗ್ ಫ್ಯಾನ್ ರೂಪದಲ್ಲಿ ವಿಭಿನ್ನವಾಗಿ 'ನನ್ನ ನಿನ್ನ ಪ್ರೇಮಕಥೆ' ರಚಿಸಿದ್ದಾರೆ ನಿರ್ದೇಶಕ ಶಿವು ಜಮಖಂಡಿ. ['ನನ್ನ ನಿನ್ನ ಪ್ರೇಮಕಥೆ'ಯಲ್ಲಿ ಉಪ್ಪಿ ಮತ್ತು ಪುನೀತ್ ರ ಕಮಾಲ್]


ನಿರ್ದೇಶಕ ಶಿವು ಜಮಖಂಡಿ ಮೂಲತಃ ಉತ್ತರ ಕರ್ನಾಟಕದವರಾದ್ದರಿಂದ 'ನನ್ನ ನಿನ್ನ ಪ್ರೇಮಕಥೆ' ನಡೆಯುವುದು ಬಿಜಾಪುರದಲ್ಲಿ. ಅಲ್ಲಿನ ವಿಶ್ವ ವಿಖ್ಯಾತ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ನವರಸಪುರ ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ 'ನನ್ನ ನಿನ್ನ ಪ್ರೇಮಕಥೆ' ಚಿತ್ರೀಕರಣಗೊಂಡಿದೆ.


ಹಲವು ವಿಶೇಷತೆಗಳಿಂದ ಕೂಡಿರುವ 'ನನ್ನ ನಿನ್ನ ಪ್ರೇಮಕಥೆ' ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದ ತಕ್ಷಣ ನಾವೇ ನಿಮಗೆ ಮೊದಲು ಹೇಳುತ್ತೇವೆ.

English summary
Kannada Actor Vijaya Raghavendra to play Shankar Nag's fan role in Kannada Movie 'Nanna Ninna Prem Kathe'. Nidhi Subbaiah is paired opposite Vijaya Raghavendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada