For Quick Alerts
  ALLOW NOTIFICATIONS  
  For Daily Alerts

  ಹಾಫ್ ಸೆಂಚುರಿ ಬಾರಿಸಿದ ವಿಜಯ್ ರಾಘವೇಂದ್ರಗೆ ಸೆಂಚುರಿ ಸ್ಟಾರ್ ಶಿವಣ್ಣ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ 50ರ ಕ್ಲಬ್ ಸೇರಿಕೊಂಡಿದ್ದಾರೆ. ಹಾಫ್ ಸೆಂಚುರಿ ಬಾರಿಸಿದ ವಿಜಯ್ ರಾಘವೇಂದ್ರ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಅಂದ್ಹಾಗೆ ವಿಜಯ್ ರಾಘವೇಂದ್ರ ಹಾಫ್ ಸೆಂಚುರಿ ಬಾರಿಸಿದ್ದು ವಯಸ್ಸಿನಲ್ಲಿ ಅಲ್ಲ, ಸಿನಿಮಾ ವಿಚಾರದಲ್ಲಿ.

  ವಿಜಯ್ ರಾಘವೇಂದ್ರ 49 ಸಿನಿಮಾಗಳನ್ನು ಪೂರ್ಣಗೊಳಿಸಿ ಇದೀಗ 50ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿಶೇಷ ಅಂದರೆ ದಸರಾ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಸಹ ರಿವೀಲ್ ಆಗಿದೆ. 50ನೇ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವಿಭಿನ್ನ ಲುಕ್ ಜೊತೆಗೆ ಸಿನಿಮಾ ಟೈಟಲ್ ಸಹ ವಿಭಿನ್ನವಾಗಿದೆ.

  ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ ಸಿಬ್ಬಂದಿವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ ಸಿಬ್ಬಂದಿ

  ವಿಜಯ್ 50ನೇ ಸಿನಿಮಾಗೆ 'ಸೀತಾರಾಮ್ ಬಿನೋಯ್' ಎಂದು ಹೆಸರಿಡಲಾಗಿದೆ. ಕೇಸ್ ನಂ.18 ಎನ್ನುವ ಟ್ಯಾಗ್ ಲೈನ್ ಇದೆ. ಈ ಹೆಸರು ನೋಡಿದ್ರೆ ಇದು ಕ್ರೈಮ್ ಥ್ರಿಲ್ಲರ್ ಸಿನಿಮಾ ಎಂದು ಗೊತ್ತಾಗುತ್ತಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಶೇರ್ ಮಾಡಿ ವಿಶ್ ಮಾಡಿದ್ದಾರೆ.

  ವಿಜಯ್ ರಾಘವೇಂದ್ರ ಅವರನ್ನು 50ರ ಕ್ಲಬ್ ಗೆ ಸ್ವಾಗತ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಶಿವರಾಜ್ ಕುಮಾರ್ ಬರೆದುಕೊಂಡಿದ್ದಾರೆ, "ಚಿತ್ರಕ್ಕೆ ಒಳ್ಳೆಯದಾಗಲು ರಾಘು, 50 ಕ್ಲಬ್ ಗೆ ಸ್ವಾಗತ" ಎಂದು ಹೇಳಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada

  ಅಂದ್ಹಾಗೆ ವಿಜಯ್ ರಾಘವೇಂದ್ರ 50ನೇ ಸಿನಿಮಾಗೆ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಸಿನಿಮಾತಂಡ, ಯಾರೆಲ್ಲಾ ನಟಿಸಲಿದ್ದಾರ, ನಾಯಕಿಯಾರು ಎನ್ನುವ ಬಗ್ಗೆ ಸದ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ.

  English summary
  Vijaya Raghavendra starrer 50th movie Seetaram Benoy first look release at the occasion of Dasara. Shivaraj kumar welcomes to vijay Raghavendra for 50th club.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X