»   » 'ಚಿನ್ನಾರಿ ಮುತ್ತ' ವಿಜಯ ರಾಘವೇಂದ್ರ 'ಜಾನಿ' ಬಿಡುಗಡೆ ಡೇಟ್ ಫಿಕ್ಸ್

'ಚಿನ್ನಾರಿ ಮುತ್ತ' ವಿಜಯ ರಾಘವೇಂದ್ರ 'ಜಾನಿ' ಬಿಡುಗಡೆ ಡೇಟ್ ಫಿಕ್ಸ್

Posted By:
Subscribe to Filmibeat Kannada

'ಚಿನ್ನಾರಿ ಮುತ್ತ' ವಿಜಯ ರಾಘವೇಂದ್ರ ಅಭಿನಯಿಸಿದ್ದ ಮಲ್ಟಿಸ್ಟಾರರ್ 'ಚೌಕ' ಚಿತ್ರ ಚಂದನವನದಲ್ಲಿ ಶತ ದಿನ ಪೂರೈಸಿ, ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಗಳಿಕೆ ಕಂಡಿತು. ಈ ಚಿತ್ರದ ನಂತರ ಅವರು ನಾಯಕ ನಟನಾಗಿ ಅಭಿನಯಿಸಿದ 'ಎರಡು ಕನಸು' ಸಿನಿಮಾ ಮಾತ್ರ ಅಂತಹ ಯಶಸ್ಸು ಕಾಣಲಿಲ್ಲ. ನಂತರ ಬಿಡುಗಡೆ ಆಗಲಿರುವ ಅವರ ಮುಂದಿನ ಚಿತ್ರ ಯಾವುದು ಎಂದು ಅಭಿಮಾನಿಗಳಲ್ಲಿ ಇದ್ದ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ.

ವಿಜಯ ರಾಘವೇಂದ್ರ ರವರ ಅಭಿನಯದ 'ಜಾನಿ' ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಆಗಸ್ಟ್ 11 ರಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ ಚಿನ್ನಾರಿ ಮುತ್ತ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಭರ್ಜರಿ ಫೈಟ್ ಮಾಡಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು ಟ್ರೈಲರ್ ನಿಂದ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

Vijaya Raghavendra starrer 'Jani' movie releasing on august 11

'ಜಾನಿ' ಚಿತ್ರದಲ್ಲಿ ವಿಜಯ್ ರಾಘವೇಂದ್ರ ರವರಿಗೆ ಜನನಿ ಜೊತೆಯಾಗಿ ನಟಿಸಿದ್ದಾರೆ. ಲವ್, ರಾಜಕೀಯ ಸೇರಿದಂತೆ ಹಲವು ಎಲಿಮೆಂಟ್ಸ್‌ಗಳನ್ನು ಹೊಂದಿರುವ ಈ ಚಿತ್ರದಲ್ಲಿ ಉಳಿದಂತೆ ನಟಿ ಮಿಲನ ನಾಗರಾಜ್, ಸಾಧು ಕೋಕಿಲ, ರವಿ ಕಾಳೆ, ಶೋಭರಾಜ್, ರಂಗಾಯಣ ರಘು ಮತ್ತು ಮುಂತಾದವರು ನಟಿಸಿದ್ದಾರೆ.

ಪಿ ಕೆ ಎಚ್ ದಾಸ್ ಆಕ್ಷನ್ ಕಟ್ ಹೇಳಿರುವ 'ಜಾನಿ' ಚಿತ್ರವನ್ನು ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಜೆ ಜಾನಕಿರಾಮ್ ಮತ್ತು ಎಂ ಅರವಿಂದ್ ರವರು ನಿರ್ಮಾಣ ಮಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

English summary
Kannada Actor Vijaya Raghavendra starrer 'Jani' movie releasing on august 11. This movie direct by P K H Dass, features Sadhu Kokila, Rangayana Raghu and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada