For Quick Alerts
  ALLOW NOTIFICATIONS  
  For Daily Alerts

  ದಯವಿಟ್ಟು ಈ ವಿಡಿಯೋವನ್ನು ಸುಮಲತಾ ಅವರಿಗೆ ತಲುಪಿಸಿ; ವಿಜಯಲಕ್ಷ್ಮಿ ಮನವಿ

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ವಿಜಯಲಕ್ಷ್ಮಿ ಕಳೆದ ಕೆಲವು ತಿಂಗಳಿಂದ ಸುದ್ದಿಯಲ್ಲಿದ್ದಾರೆ. ವಿಜಯಲಕ್ಷ್ಮಿ ಸಹೋದರಿ ಉಷಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹೆಚ್ಚಿನ ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಜೊತೆಗೆ ಉಷಾ ಅವರ ಪತಿ, ಖ್ಯಾತ ನಟಿ ಜಯಪ್ರದಾ ಅವರ ಸಹೋದರ ರಾಜ್ ಬಾಬು ಅವರಿಂದ ವಿಚ್ಛೇದನ ಕೊಡಿಸಿ ಎಂದು ವಿಜಯಲಕ್ಷ್ಮಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

  ಜಯಪ್ರದಾ ಅವರನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ, ಸಂಪರ್ಕ ಮಾಡಲು ಯಾರು ಬಿಡುತ್ತಿಲ್ಲ ಎನ್ನುತ್ತಿರುವ ನಟಿ ವಿಜಯಲಕ್ಷ್ಮಿ ಈಗ ಸುಮಲತಾ ಅಂಬರೀಶ್ ಬಳಿ ಸಹಾಯ ಕೇಳಿದ್ದಾರೆ. ವಿಡಿಯೋ ಮೂಲಕ ಮನವಿ ಮಾಡಿರುವ ವಿಜಯಲಕ್ಷ್ಮಿ ಈ ವಿಡಿಯೋ ದಯವಿಟ್ಟು ಸುಮಲತಾ ಅವರಿಗೆ ತಲುಪಿಸಿ ಎಂದಿದ್ದಾರೆ. ಸಹೋದರಿ ಉಷಾ ಅವರಿಗೆ ನ್ಯಾಯ ಕೊಡಿಸಲು ಅವರಿಂದ ಸಾಧ್ಯವಿದೆ. ಅದೇ ನಂಬಿಕೆಯಲ್ಲಿ ಈ ವಿಡಿಯೋ ಮಾಡುತ್ತಿದ್ದೇನೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಮುಂದೆ ಓದಿ...

  ಸಹೋದರಿ ಆರೋಗ್ಯ ಗಂಭೀರವಾಗಿದೆ

  ಸಹೋದರಿ ಆರೋಗ್ಯ ಗಂಭೀರವಾಗಿದೆ

  ಸಹೋದರಿ ಆರೋಗ್ಯ ಹದಗೆಡುತ್ತಿದೆ, ಪತಿಯಿಂದ ವಿಚ್ಛೇದನ ಕೊಡಿಸಿದರೆ ಚಿಕಿತ್ಸೆಗೆ ಹಣ ಸಿಗುತ್ತೆ ಎನ್ನುತ್ತಿದ್ದಾರೆ ವಿಜಯಲಕ್ಷ್ಮಿ. "ಉಷಾ ಅವರ ಆರೋಗ್ಯ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹಣಬೇಕು. 15 ವರ್ಷಗಳಿಂದ ಉಷಾ ಚೆನ್ನೈನಲ್ಲಿ ಇದ್ದಾರೆ. ವಿಚ್ಛೇದನಕ್ಕೆ ಇಲ್ಲೆ ಅರ್ಜಿ ಹಾಕಬೇಕು. ಇದಕ್ಕೆ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.

  15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ

  15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ

  "15 ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿರುವ ಮಹಿಳೆ, ಬಿಜೆಪಿಯಂತ ಮಹಾನ್ ಪಕ್ಷದಲ್ಲಿ ಇರುವ ಮಹಿಳೆ, ಮಹಿಳೆಯರಿಗೆ ಧ್ವನಿ ಕೊಡ್ತೀನಿ ಅಂತ ಹೇಳಿರುವ ಜಯಪ್ರದಾ, 15 ವರ್ಷಗಳಿಂದ ನಮ್ಮ ಈ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ, ಹಿಂಸೆ ಮಾಡಿದ್ದಾರೆ" ಎಂದು ವಿಜಯಲಕ್ಷ್ಮಿ ದೂರಿದ್ದಾರೆ.

  ಎಲ್ಲರೂ ಹೀಯಾಳಿಸುತ್ತಾರೆ

  ಎಲ್ಲರೂ ಹೀಯಾಳಿಸುತ್ತಾರೆ

  "ತಮಿಳುನಾಡಿನಲ್ಲಿ ಕೇಳಿದ್ರೆ ಕರ್ನಾಟಕದವರು ಕನ್ನಡದ ಹಿರಿಯರ ಜೊತೆ ಮಾತನಾಡಿ ಎಂದು ಹೇಳುತ್ತಾರೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಚಿಕಿತ್ಸೆಗೆ ಹೆಚ್ಚಿನ ಹಣಬೇಕು, ನನ್ನ ಬಳಿ ಹಣವಿಲ್ಲ. ಸಹಾಯ ಕೇಳಿದರೆ ಹೀಯಾಳಿಸುತ್ತಾರೆ. ಕೆಲಸಕ್ಕೆ ಹೋಗು ಎನ್ನುತ್ತಿದ್ದಾರೆ. ಆದರೆ ಕೆಲಸಕ್ಕೆ ಹೋಗಲು ಆಗಲ್ಲ, ಸದಾ ಜೊತೆಯಲ್ಲಿದ್ದು ಅಕ್ಕನ ನೋಡಿಕೊಳ್ಳಬೇಕು" ಎಂದು ಹೇಳಿದ್ದಾರೆ.

  ಮಗನನ್ನು ನೋಡಲು ಬಿಡಲ್ಲ

  ಮಗನನ್ನು ನೋಡಲು ಬಿಡಲ್ಲ

  "ಮಗನ ನೋಡಲು ಬಿಡಲ್ಲ. 15 ವರ್ಷಗಳಾಗಿದೆ ಅಕ್ಕ ಮಗನ ನೋಡದೆ. ಕರ್ನಾಟಕದಲ್ಲಿ ಎಲ್ಲರಿಗೂ ನ್ಯಾಯ ಸಿಕ್ಕಿದೆ. ಉಷಾ ಅವರಿಗೆ ಯಾಗೆ ಹೀಗೆ. ಜಯಪ್ರದಾ ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ" ಎಂದಿದ್ದಾರೆ.

  ಸುಮಲತಾ ಅವರಿಗೆ ಈ ವಿಡಿಯೋ ತಲುಪಿಸಿ

  ಸುಮಲತಾ ಅವರಿಗೆ ಈ ವಿಡಿಯೋ ತಲುಪಿಸಿ

  "ಸುಮಲತಾ ಅಂಬರೀಶ್ ಅವರನ್ನು ಸಂಪರ್ಕ ಮಾಡಿ ಉಷಾ ಅವರ ಈ ಪರಿಸ್ಥಿತಿ ತಿಳಿಸಿ, ಜಯಪ್ರದಾ ಏನೆಲ್ಲ ಹಿಂಸೆ ಕೊಟ್ಟಿದ್ದಾರೆ ಎಲ್ಲಾ ತಿಳಿಸಬೇಕು. ಅಂಬರೀಶ್ ಅವರನ್ನು ಸಂಪರ್ಕ ಮಾಡಲು ನನ್ನ ಬಳಿ ಆಗಿಲ್ಲ. ಆದರೀಗ ಸುಮಲತಾ ಅಂಬರೀಶ್ ಅವರಿಗೆ ಈ ವಿಡಿಯೋ ತಲುಪಿಸಿ. ನಾನು ಸಂಪರ್ಕ ಮಾಡಲು ಪ್ರಯತ್ನ ಪಟ್ಟರೆ ಖಂಡಿತ ಯಾರು ಬಿಡಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.

  ಸುಮಲತಾ ಅವರಿಂದ ಇದು ಖಂಡಿತ ಸಾಧ್ಯ

  ಸುಮಲತಾ ಅವರಿಂದ ಇದು ಖಂಡಿತ ಸಾಧ್ಯ

  "ದಯವಿಟ್ಟು ಈ ವಿಡಿಯೋ ತಲುಪಿಸಿ. ಈ ನೆಲದಲ್ಲಿ ಯಾರಿಗೂ ಅನ್ಯಾಯ ಆಗಲು ಚಾಮುಂಡಿ ತಾಯಿ ಬಿಡಲ್ಲ. ಹೆಚ್ಚಿನ ಚಿಕಿತ್ಸೆಗೆ ದುಡ್ಡಿನ ಅವಶ್ಯತೆ ಇದೆ. ಉಷಾಗೆ ನ್ಯಾಯ ಕೊಡಿಸಿ. ಸುಮಲತಾ ಅವರನ್ನು ಭೇಟಿ ಮಾಡಿಲಿಕ್ಕೆ ಅವಕಾಶ ಮಾಡಿಕೊಡಿ. ಸುಮಲತಾ ಮೇಡಮ್, ಜಯಪ್ರದಾ ಬಳಿ ಮಾತನಾಡಿದ್ರೆ ಖಂಡಿತ ಆಗುತ್ತೆ. ಆ ನಂಬಿಕೆಯಲ್ಲಿ ಈ ವಿಡಿಯೋ ಮಾಡಿದ್ದೀನಿ" ಎಂದು ವಿಜಯಲಕ್ಷ್ಮಿ ಹೊಸ ವಿಡಿಯೋ ಮೂಲಕ ಸುಮಲತಾ ಅಂಬರೀಶ್ ಬಳಿ ಮನವಿ ಮಾಡಿದ್ದಾರೆ.

  English summary
  Actress Vijayalakshmi requests to Sumalatha Ambareesh for help her.
  Tuesday, July 27, 2021, 8:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X