Just In
Don't Miss!
- News
ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
3 ಮಗಳಂದಿರ ಜೊತೆ ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಹೊಸ ಮ್ಯಾಜಿಕ್
ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಒಂದು ಸುಂದರ 'ಯಾನ'ದ ಕಥೆ ಆರಂಭವಾಗುತ್ತಿದೆ. ಈ ಚಿತ್ರಕ್ಕೆ ಅಪ್ಪನೇ ನಿರ್ಮಾಪಕ, ಅಮ್ಮನೇ ನಿರ್ದೇಶಕಿ. ಚಿತ್ರದಲ್ಲಿ ಯಾನಕ್ಕೆ ಹೊರಟ ನಾಯಕಿಯರು ಈ ಅಪ್ಪ-ಅಮ್ಮನ ಮುದ್ದಾದ ಮೂರು ಹೆಣ್ಣುಮಕ್ಕಳು.
ಏನಪ್ಪಾ ಕಥೆ ಇದು ಅಂತ ತಲೆ ಕೆರ್ಕೋತಾ ಇದ್ದೀರಾ? ಹೌದು ಇದು ನಟಿ ಕಮ್ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಹಾಗೂ ನಟ ಕಮ್ ನಿರ್ಮಾಪಕ ಜೈ ಜಗದೀಶ್ ಅವರ ಮುಂದಿನ ಹೊಸ ಪ್ರಾಜೆಕ್ಟ್ 'ಯಾನ'ದ ಕಥೆ.[ಕಾರ್ಪೋರೇಟರ್ ಆಗಬೇಕೆಂದು ಹೊರಟ ನಟಿಗೆ ಸಿಗದ 'ವಿಜಯಲಕ್ಷ್ಮಿ']
ಸದ್ಯದಲ್ಲೇ ಸೆಟ್ಟೇರುತ್ತಿರುವ 'ಯಾನ' ಚಿತ್ರದಲ್ಲಿ ಮೂವರು ನಾಯಕಿಯರು. ಬೇರಾರು ಅಲ್ಲ ವಿಜಯಲಕ್ಷ್ಮಿ ಸಿಂಗ್ ಮತ್ತು ಜೈ ಜಗದೀಶ್ ದಂಪತಿಗಳ ಮೂವರು ಮುದ್ದಾದ ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿ. ಜೈ ಜಗದೀಶ್ ಅವರು 'ಯಾನ' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ವಿಜಯಲಕ್ಷ್ಮಿ ಸಿಂಗ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.
ಸುಮಾರು ಸಮಯದಿಂದ ಪ್ರವಾಸದ ಹಿನ್ನಲೆಯುಳ್ಳ ಕಥೆಯೊಂದನ್ನು ತಯಾರಿಸಿರುವ ನಟಿ ವಿಜಯಲಕ್ಷ್ಮಿ ಸಿಂಗ್ ಯೋಚನೆ ಮಾಡಿ ಮಾಡಿ ಚಿತ್ರದ ಪಾತ್ರಗಳಿಗೆ ತಮ್ಮ ಮೂವರು ಹೆಣ್ಣು ಮಕ್ಕಳನ್ನೇ ಪಾತ್ರಧಾರಿಗಳಾಗಿ ಆಯ್ಕೆ ಮಾಡಿಕೊಂಡು ಹೊಸ ಮ್ಯಾಜಿಕ್ ಮಾಡಲು ಹೊರಟಿದ್ದಾರೆ.['ಸ್ವೀಟಿ' ರಾಧಿಕಾಗೆ ಖಾರವಾದ ವಿಜಯಲಕ್ಷ್ಮಿ ಸಿಂಗ್]
ಸದ್ಯಕ್ಕೆ ಈ ಮೂವರು ಹೆಣ್ಣುಮಕ್ಕಳಿಗೆ ನಾಯಕರ ಹುಡುಕಾಟದಲ್ಲಿ ತೊಡಗಿರುವ ದಂಪತಿಗಳು ಕರ್ನಾಟಕದ ಪ್ರಸಿದ್ಧ ಸ್ಥಳಗಳಾದ ಪಶ್ಚಿಮ ಘಟ್ಟದ ಕಾಡುಗಳು, ಕರಾವಳಿ ಪ್ರದೇಶ ಅಂತ ವಿವಿಧ ಲೊಕೇಶನ್ ಗಳಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದಾರೆ.
ಚಿತ್ರಕ್ಕೆ ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಒಟ್ನಲ್ಲಿ ಏಕಕಾಲಕ್ಕೆ ಚಂದನವನಕ್ಕೆ ಚೆಂದದ ಮೂವರು ಸುಂದರಿಯರು ಎಂಟ್ರಿ ಕೊಡುತ್ತಿದ್ದು, ಸಿಂಗ್ ಅವರ ಐಡಿಯಾ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.[ನಟ ಜೈ ಜಗದೀಶ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ]
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಈಗಾಗಲೇ ಬಿಡುಗಡೆ ಆಗಿದ್ದು, ಅವುಗಳ ಫೊಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಗಳತ್ತ ಕಣ್ಣಾಡಿಸಿ...