Don't Miss!
- News
Republic Day 2023: ಕರ್ನಾಟಕದ 20 ಮಂದಿಗೆ ಪೊಲೀಸ್ ಪದಕಕ್ಕೆ ಆಯ್ಕೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿನಯ್ ರಾಜ್‌ಕುಮಾರ್– ಸಿಂಪಲ್ ಸುನಿ ಸಿನಿಮಾದಲ್ಲಿ ಕಮಲ್ ಹಾಸನ್ ಸಿನಿಮಾದ ನಟಿ ಸ್ವತಿಷ್ಠ ಕೃಷ್ಣನ್
ವಿನಯ್ ರಾಜ್‌ಕುಮಾರ್ ಹೊಸ ಸಿನಿಮಾಗೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಮುಹೂರ್ತ ನಡೆದಿದ್ದು, ಶೂಟಿಂಗ್ ಕೆಲಸಗಳು ಜೋರಾಗಿಯೇ ಆರಂಭ ಆಗಿದೆ.
ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ಸಿನಿಮಾಗೆ ತಮಿಳು ಸಿನಿಮಾಗಳ ನಾಯಕಿ ಆಯ್ಕೆ ಮಾಡಲಾಗಿದೆ. ಇದೊಂದು ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿ. ಒಂದು ಸರಳ ಪ್ರೇಮಕಥೆಯನ್ನಾಧರಿಸಿದ ಈ ಚಿತ್ರಕ್ಕೆ ಕಮಲ್ ಹಾಸನ್ ಜೊತೆ 'ವಿಕ್ರಮ್' ಸಿನಿಮಾದಲ್ಲಿ ನಟಿಸಿದ್ದ ನಟಿ ಸ್ವತಿಷ್ಠ ಕೃಷ್ಣನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ವಿನಯ್ ರಾಜ್ ಕುಮಾರ್, ಸಿಂಪಲ್ ಸುನಿ ಸಿನಿಮಾ ಒಂದು ಸರಳ ಪ್ರೇಮಕಥೆಯಾಗಿರುವುದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಂದ್ಹಾಗೆ ತಮಿಳು ನಟಿ ಸ್ವತಿಷ್ಠ ಕೃಷ್ಣನ್ ಧಾರವಾಡ ಮೂಲದ ಕನ್ನಡತಿ. ಈಗಾಗಲೇ ಸ್ವತಿಷ್ಠ ಕೃಷ್ಣನ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈಗ ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದಾರೆ.
ಸ್ವತಿಷ್ಠ ಕೃಷ್ಣನ್ ತಮಿಳಿನ ಉರಗನಾಯಗನ್ ಕಮಲ್ ಹಾಸನ್ ನಟನೆಯ 'ವಿಕ್ರಮ್' ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದರು. ಈಗ ವಿನಯ್ ರಾಜ್ ಕುಮಾರ್ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ.

ಸಿಂಪಲ್ ಸುನಿ ನಿರ್ದೇಶಿಸೋ ಸಿನಿಮಾಗಳಲ್ಲಿ ಕನ್ನಡದ ನಾಯಕಿಯರೇ ಇರುತ್ತಾರೆ. ಈ ಬಾರಿ ಕೂಡ ವಿನಯ್ ಕುಮಾರ್ ಸಿನಿಮಾಗೆ ಕನ್ನಡದ ನಾಯಕಿಯನ್ನೇ ಕರೆದುಕೊಂಡು ಬಂದಿದ್ದಾರೆ. "ಸ್ವತಿಷ್ಠ ಮೂಲತಃ ಉತ್ತರ ಕರ್ನಾಟಕದವರು. ನಮ್ಮ ಸಿನಿಮಾ ಪಾತ್ರಕ್ಕೆ ಅವರು ಸೂಕ್ತ ಎನಿಸಿತು ಅವರು ಕೂಡ ಕಥೆ ಕೇಳಿ ಓಕೆ ಮಾಡಿ ನಮ್ಮ ಚಿತ್ರತಂಡ ಸೇರಿಕೊಂಡಿದ್ದಾರೆ" ಎಂದು ಸಿಂಪಲ್ ಸುನಿ ತಿಳಿಸಿದ್ದಾರೆ.
ಈ ಸಿನಿಮಾಗೆ ಪ್ರಸನ್ನ ಕಥೆ ಬರೆದಿದ್ದಾರೆ. ಇನ್ನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಸಿಂಪಲ್ ಸುನಿ ಹೊತ್ತುಕೊಂಡಿದ್ದಾರೆ. ಸದ್ಯ ಈ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸ ಬಾರೀ ಜೋರಾಗಿ ನಡೆಯುತ್ತಿದೆ. ಉಳಿದ ತಾರಾಗಣದ ಬಗ್ಗೆ ಶೀಘ್ರದಲ್ಲಿಯೇ ಚಿತ್ರತಂಡ ಮಾಹಿತಿ ನೀಡಲಿದ್ದು, ಮೈಸೂರು ರಮೇಶ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗೇ ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.