For Quick Alerts
  ALLOW NOTIFICATIONS  
  For Daily Alerts

  ರಾಜಸ್ಥಾನದ ಮರಳುಗಾಡಿನಲ್ಲಿ ಒಂಟೆ ಮೇಲೆ ತ್ರಿ'ವಿಕ್ರಮ್' ಮೈನವಿರೇಳಿಸುವ ಸಾಹಸ.!

  |

  ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ 'ತ್ರಿವಿಕ್ರಮ'. ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ 'ತ್ರಿವಿಕ್ರಮ್' ಚಿತ್ರದ ಚಿತ್ರೀಕರಣ ಸದ್ಯ ರಾಜಸ್ಥಾನದಲ್ಲಿ ನಡೆಯುತ್ತಿದೆ.

  ರಾಜಸ್ಥಾನದ ಮರಳುಗಾಡಿನಲ್ಲಿ 'ತ್ರಿವಿಕ್ರಮ' ಚಿತ್ರದ ಸಾಹಸ ದೃಶ್ಯಗಳ ಶೂಟಿಂಗ್ ಮಾಡಲಾಗುತ್ತಿದೆ. ಈ ನಡುವೆ ಒಂದು ಹೊಸ ಸಾಹಸ ಮಾಡಿದ್ದಾರೆ ನಟ ವಿಕ್ರಮ್. ಒಂಟೆ ಮೇಲೆ ಕೂತು ಥ್ರಿಲ್ಲಿಂಗ್ ಫೈಟ್ ಮಾಡುವುದರ ಜೊತೆಗೆ ಚೇಸಿಂಗ್ ಕೂಡ ಮಾಡಿದ್ದಾರೆ ವಿಕ್ರಮ್. ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲಿ ಇಂತಹ ಒಂದು ಸಾಹಸಕ್ಕೆ ಕೈ ಹಾಕಿರುವುದು ಇದೇ ಮೊದಲು.! ಮುಂದೆ ಓದಿರಿ...

  ಒಂಟೆ ಮೇಲೆ ಕೂತು ಚೇಸ್ ಮಾಡಿದ ವಿಕ್ರಮ್

  ಒಂಟೆ ಮೇಲೆ ಕೂತು ಚೇಸ್ ಮಾಡಿದ ವಿಕ್ರಮ್

  ಒಂಟೆ ಮೇಲೆ ಕೂತು ಒಂದು ರೌಂಡ್ ಹಾಕುವುದೇ ಕಷ್ಟ. ಅಂಥದ್ರಲ್ಲಿ, ನಟ ವಿಕ್ರಮ್ ಗಂಟೆಗಟ್ಟಲೆ ಒಂಟೆ ಮೇಲೆ ಕೂತು ಫೈಟ್ ಜೊತೆಗೆ ಚೇಸಿಂಗ್ ಕೂಡ ಮಾಡಿದ್ದಾರೆ. ಈ ಸಾಹಸ ದೃಶ್ಯದ ಚಿತ್ರೀಕರಣಕ್ಕಾಗಿ ಸುಮಾರು 15 ದಿನ ರಾಜಸ್ಥಾನದಲ್ಲಿ ಚಿತ್ರತಂಡ ಶ್ರಮಿಸಿದೆ.

  'ತ್ರಿವಿಕ್ರಮ' : ಮಗನ ಮೊದಲ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕ್ರೇಜಿ ಸ್ಟಾರ್'ತ್ರಿವಿಕ್ರಮ' : ಮಗನ ಮೊದಲ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕ್ರೇಜಿ ಸ್ಟಾರ್

  ಸ್ಟಂಟ್ ಮಾಸ್ಟರ್ ಯಾರು.?

  ಸ್ಟಂಟ್ ಮಾಸ್ಟರ್ ಯಾರು.?

  'ಸೈರಾ ನರಸಿಂಹ ರೆಡ್ಡಿ', 'ದಬಾಂಗ್', 'ಬಾಡಿಗಾರ್ಡ್', 'ಪೊಕಿರಿ' ಚಿತ್ರಗಳಿಗೆ ಸಾಹಸ ಸಂಯೋಜಿಸಿರುವ ಫೈಟ್ ಮಾಸ್ಟರ್ ವಿಜಿ 'ತ್ರಿವಿಕ್ರಮ' ಚಿತ್ರಕ್ಕೆ ಆಕ್ಷನ್ ಕೊರಿಯೋಗ್ರಾಫ್ ಮಾಡಿದ್ದಾರೆ. 'ತ್ರಿವಿಕ್ರಮ' ಚಿತ್ರದ ಬಹು ಮುಖ್ಯ ಘಟ್ಟದಲ್ಲಿ ಈ ಫೈಟ್ ಬರಲಿದ್ದು, ಪ್ರೇಕ್ಷಕರ ಮೈನವಿರೇಳುವುದು ಪಕ್ಕಾ ಎನ್ನುತ್ತದೆ ಚಿತ್ರತಂಡ.

  ಕ್ರೇಜಿ ಸ್ಟಾರ್ ಪುತ್ರನ ಸಿನಿಮಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಖ್ಯಾತ ನಟಕ್ರೇಜಿ ಸ್ಟಾರ್ ಪುತ್ರನ ಸಿನಿಮಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಖ್ಯಾತ ನಟ

  ಒಂಟೆಗಳಿಗೆ ತೊಂದರೆ ಆಗಿಲ್ಲ.!

  ಒಂಟೆಗಳಿಗೆ ತೊಂದರೆ ಆಗಿಲ್ಲ.!

  ಚಿತ್ರೀಕರಣದ ವೇಳೆ ಒಂಟೆಗಳಿಗೆ ಯಾವುದೇ ತೊಂದರೆ ಆಗದಂತೆ ಚಿತ್ರತಂಡ ಕಾಳಜಿ ವಹಿಸಿದೆ. ಅಸಲಿಗೆ, ವಿಕ್ರಮ್ ಪ್ರಾಣಿ ಪ್ರಿಯ. ಮನೆಯಲ್ಲಿ ಹಲವು ತಳಿಯ ಶ್ವಾನಗಳನ್ನು ಸಾಕಿರುವ ವಿಕ್ರಮ್, ಒಂಟೆಗಳ ಜೊತೆಗೂ ಪ್ರೀತಿಯಿಂದ ನಡೆದುಕೊಂಡಿದ್ದಾರೆ.

  'ತ್ರಿವಿಕ್ರಮ' ಚಿತ್ರತಂಡ

  'ತ್ರಿವಿಕ್ರಮ' ಚಿತ್ರತಂಡ

  'ತ್ರಿವಿಕ್ರಮ' ಚಿತ್ರದಲ್ಲಿ ವಿಕ್ರಮ್ ಜೊತೆಗೆ ಆಕಾಂಕ್ಷ ಶರ್ಮಾ, ಸಾಧು ಕೋಕಿಲ, ರೋಹಿತ್ ರಾಯ್ ಅಭಿನಯಿಸಿದ್ದಾರೆ. ಈ ಹಿಂದೆ 'ರೋಸ್', 'ಮಾಸ್ ಲೀಡರ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಸಹಾನಾ ಮೂರ್ತಿ 'ತ್ರಿವಿಕ್ರಮ' ಚಿತ್ರದ ನಿರ್ದೇಶಕ. ಇನ್ನೂ ಚಿತ್ರಕ್ಕೆ ಉದ್ಯಮಿ ಸೋಮಣ್ಣ (ರಾಮ್ಕೋ) ಬಂಡವಾಳ ಹಾಕಿದ್ದಾರೆ.

  Read more about: vikram ravichandran
  English summary
  Vikram Ravichandran starrer Trivikrama fight shooting at Rajasthan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X