twitter
    For Quick Alerts
    ALLOW NOTIFICATIONS  
    For Daily Alerts

    'ವಿಕ್ರಾಂತ್ ರೋಣ' ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಲೆಕ್ಕಾಚಾರ!

    |

    'ವಿಕ್ರಾಂತ್ ರೋಣ' ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾ ನೋಡುವ ಕೌತುಕತೆ ಪ್ರೇಕ್ಷಕರಲ್ಲಿ ಹೆಚ್ಚುತ್ತಿದೆ. ಅದರಂತೆ ಸಿನಿಮಾ ತಂಡ ಹೆಚ್ಚಿನ ಪ್ರಚಾರವನ್ನೂ ಮಾಡುತ್ತಿದೆ. ನಟ ಸುದೀಪ್ ರಾಜ್ಯ ರಾಜ್ಯ ಸುತ್ತಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ.

    ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಕೂಡ ಕನ್ನಡದ, ಸೌತ್ ಚಿತ್ರರಂಗದ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಮೇಲು ಹೆಚ್ಚಿನ ನಿರೀಕ್ಷೆಗಳು ಮನೆ ಮಾಡಿವೆ. 'ವಿಕ್ರಾಂತ್ ರೋಣ' ವಿಶ್ವಾದಾದ್ಯಂತ ಅಬ್ಬರಿಸಲಿದ್ದಾನೆ.

    'ವಿಕ್ರಾಂತ್ ರೋಣ' ಲೈನ್ ಕ್ಲಿಯರ್: ಕಿಚ್ಚನ ಮುಂದೆ ನಿಲ್ಲೋರೇ ಇಲ್ಲ!'ವಿಕ್ರಾಂತ್ ರೋಣ' ಲೈನ್ ಕ್ಲಿಯರ್: ಕಿಚ್ಚನ ಮುಂದೆ ನಿಲ್ಲೋರೇ ಇಲ್ಲ!

    ರಿಲೀಸ್ ಹತ್ತಿರ ಆಗುತ್ತಿದ್ದಂತೆಯೇ ಸಿನಿಮಾ ಗಳಿಕೆಯ ಲೆಕ್ಕಾಚಾರ ಕೂಡ ಹುಟ್ಟಿಕೊಂಡಿದೆ. ಇನ್ನು ಮೊದಲ ದಿನ ಎಷ್ಟು ಗಳಿಸ ಬಹುದು ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ. ಯಾವ ಮಟ್ಟಿಗೆ ವಿಕ್ರಾಂತ್ ರೋಣ ಸಿನಿಮಾ ಓಪನಿಂಗ್ ಪಡೆಯಲಿದೆ ಎನ್ನುವುದನ್ನು ಮುಂದೆ ಓದಿ....

    'ಪ್ಯಾನ್ ಇಂಡಿಯಾ' ಮುಂದೆ 'ರಿಮೇಕ್‌ ಸಿನಿಮಾ'ಗಳಿಗೀಗ ಬೆಲೆ ಇಲ್ಲ- ಕಿಚ್ಚ ಸುದೀಪ್!'ಪ್ಯಾನ್ ಇಂಡಿಯಾ' ಮುಂದೆ 'ರಿಮೇಕ್‌ ಸಿನಿಮಾ'ಗಳಿಗೀಗ ಬೆಲೆ ಇಲ್ಲ- ಕಿಚ್ಚ ಸುದೀಪ್!

    'ವಿಕ್ರಾಂತ್ ರೋಣ' ಗಳಿಕೆ ಮೇಲೆ ನಿರೀಕ್ಷೆ!

    'ವಿಕ್ರಾಂತ್ ರೋಣ' ಗಳಿಕೆ ಮೇಲೆ ನಿರೀಕ್ಷೆ!

    ಕನ್ನಡದ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಸಿನಿಮಾದ ಮೊದಲ ದಿನದ ಗಳಿಕೆಯ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ವಿಕ್ರಾಂತ್ ರೋಣ, ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ಆದರೆ ವಿದೇಶಗಳಲ್ಲಿ ಇನ್ನೂ ಚಿತ್ರಮಂದಿರಗಳ ಸಂಖ್ಯೆ ಸ್ಪಷ್ಟವಾಗಿ ನಿಗಧಿ ಆಗಿಲ್ಲ. ಹಾಗಾಗಿ ಭಾರತದಾದ್ಯಂತ ಮೊದಲ ದಿನದ ಗಳಿಕೆ ಎಷ್ಟಾಗಬಹುದು ಎನ್ನುವ ಲೆಕ್ಕಾಚಾರ ಮಾತ್ರವೇ ಲಭ್ಯವಾಗಿದೆ.

    25 ರಿಂದ 50 ಕೋಟಿ ಗಳಿಕೆ!

    25 ರಿಂದ 50 ಕೋಟಿ ಗಳಿಕೆ!

    ಮೊದಲ ದಿನ ಭಾರತದಾದ್ಯಂತ 'ವಿಕ್ರಾಂತ್ ರೋಣ' ಸುಮಾರು 25 ರಿಂದ 30 ಕೋಟಿ ರೂ. ಗಳಿಕೆ ಕಾಣುತ್ತದೆ. ಇನ್ನು ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾದರೆ ಮತ್ತಷ್ಟು ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳಲಿದೆ. ಅಲ್ಲದೇ ಇದು ಕೇವಲ ಭಾರತದಾದ್ಯಂತ ಮೊದಲ ದಿನ ಗಳಿಸ ಬಹುದಾದ ಲೆಕ್ಕಾಚಾರ. ಇನ್ನು ವಿಶ್ವದಾದ್ಯಂತ ಲೆಕ್ಕ ತೆಗೆದುಕೊಂಡರೆ, 50 ಕೋಟಿಯನ್ನು ಸುಲಭವಾಗಿ ಗಳಿಸುತ್ತದೆ. ಸಿನಿಮಾತಂಡ ಕೂಡ ಇದೇ ಲೆಕ್ಕಾಚಾರದಲ್ಲಿದೆ.

    ಭಾರತದಲ್ಲಿ 3500ಕ್ಕೂ ಹೆಚ್ಚು ಸ್ಕ್ರೀನ್!

    ಭಾರತದಲ್ಲಿ 3500ಕ್ಕೂ ಹೆಚ್ಚು ಸ್ಕ್ರೀನ್!

    'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಅನ್ನೋ ಬಗ್ಗೆ ಸಹಜ ಕುತೂಹಲ ಇದ್ದೇ ಇದೆ. ಅದು ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎನ್ನುವ ಬಗ್ಗೆ ಚಿತ್ರತಂಡ ಕಡೆಯಿಂದ ಫಿಲ್ಮೀ ಬೀಟ್‌ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಸುಮಾರು 3500 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ. ಇನ್ನು ಈ ಸಿನಿಮಾ ರಿಲಸ್‌ಗೆ ಕೆಲವು ದಿನಗಳು ಬಾಕಿ ಇದೆ. ಹಾಗಾಗಿ ಈ ಸ್ಕ್ರೀನ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. (ಜುಲೈ 23)ರ ವರೆಗೆ ಸ್ಕ್ರೀನ್ ಲೆಕ್ಕ ತೆಗೆದುಕೊಂಡರೆ ಒಟ್ಟಾರೆ 3500 ಸ್ಕ್ರೀನ್‌ಗಳು ಈಗಾಗಲೇ ವಿಕ್ರಾಂತ್ ರೋಣನಿಗಾಗಿ ಬುಕ್ ಆಗಿವೆ.

    ಬಾಲಿವುಡ್‌ನಲ್ಲಿ 'ವಿಕ್ರಾಂತ್ ರೋಣ'!

    ಬಾಲಿವುಡ್‌ನಲ್ಲಿ 'ವಿಕ್ರಾಂತ್ ರೋಣ'!

    ಸೌತ್ ಸಿನಿಮಾಗಳಿಗೆ ನಾರ್ತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 'ವಿಕ್ರಾಂತ್ ರೋಣ' ಹಿಂದಿ ಅವತರಣಿಕೆ 1000 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ. ಇನ್ನು ಬಾಲಿವುಡ್‌ನಲ್ಲಿ ಬಂದ ಶಂಶೇರಾ ಸಿನಿಮಾ ಅಷ್ಟಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡದ ಕಾರಣ, ಮತ್ತಷ್ಟು ಸ್ಕ್ರೀನ್‌ಗಳು ವಿಕ್ರಾಂತ್ ರೋಣನ ಪಾಲಾಗಲಿವೆ. ಹಾಗಾಗಿ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಿಂದಿ ಅವತರಣಿಕೆಯ 'ವಿಕ್ರಾಂತ್ ರೋಣ' ಅಬ್ಬರಿಸಲಿದ್ದಾನೆ.

    English summary
    Vikrant Rona Day 1 Box Office Collection Prediction Is 25 to 50 Crore, Details Is Here
    Monday, July 25, 2022, 10:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X