twitter
    For Quick Alerts
    ALLOW NOTIFICATIONS  
    For Daily Alerts

    'ವಿಕ್ರಾಂತ್ ರೋಣ' ಟಿಕೆಟ್ ದರ ₹150 ರಿಂದ ₹10,000!

    |

    'ವಿಕ್ರಾಂತ್ ರೋಣ' ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾ ನೋಡುವ ಕೌತುಕತೆ ಪ್ರೇಕ್ಷಕರಲ್ಲಿ ಹೆಚ್ಚುತ್ತಿದೆ. ಅದರಂತೆ ಸಿನಿಮಾ ತಂಡ ಹೆಚ್ಚಿನ ಪ್ರಚಾರವನ್ನೂ ಮಾಡುತ್ತಿದೆ. ನಟ ಸುದೀಪ್ ರಾಜ್ಯ ರಾಜ್ಯ ಸುತ್ತಿ ಚಿತ್ರದ ಸುದ್ದಿ ಗೋಷ್ಠಿ ನಡೆಸುತ್ತಿದ್ದರೆ.

    ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಕನ್ನಡದ, ಸೌತ್ ಚಿತ್ರರಂಗದ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಮೇಲು ಹೆಚ್ಚಿನ ನಿರೀಕ್ಷೆಗಳು ಮನೆ ಮಾಡಿವೆ. 'ವಿಕ್ರಾಂತ್ ರೋಣ' ವಿಶ್ವಾದಾದ್ಯಂತ ಜುಲೈ 28ಕ್ಕೆ ಅಬ್ಬರಿಸಲಿದ್ದಾನೆ.

    'ವಿಕ್ರಾಂತ್ ರೋಣ' ಲೈನ್ ಕ್ಲಿಯರ್: ಕಿಚ್ಚನ ಮುಂದೆ ನಿಲ್ಲೋರೇ ಇಲ್ಲ!'ವಿಕ್ರಾಂತ್ ರೋಣ' ಲೈನ್ ಕ್ಲಿಯರ್: ಕಿಚ್ಚನ ಮುಂದೆ ನಿಲ್ಲೋರೇ ಇಲ್ಲ!

    ರಿಲೀಸ್ ಹತ್ತಿರ ಆಗುತ್ತಿದ್ದಂತೆಯೇ ಸಿನಿಮಾ ಒಂದು ಕಡೆ ಸಿನಿಮಾದ ಗಳಿಕೆಯ ಲೆಕ್ಕಾಚಾರ ಕೂಡ ಹುಟ್ಟಿಕೊಂಡರೆ. ಟಿಕೆಟ್ ದರದಿಂದ ಹೆಚ್ಚಿನ ಚರ್ಚೆ ಆಗ್ತಿದೆ. ಅಷ್ಟಕ್ಕೂ ವಿಕ್ರಾಂತ್ ರೋಣ ಟಿಕೆಟ್ ದರ ಹತ್ತು ಸಾವಿರದ ತನಕ ಇದೆ. ಅದು ಹೇಗೆ ಎನ್ನುವುನ್ನು ಮುಂದೆ ಓದಿ....

    ವಿಕ್ರಾಂತ್ ರೋಣ 2D ಟಿಕೆಟ್ ದರ!

    ವಿಕ್ರಾಂತ್ ರೋಣ 2D ಟಿಕೆಟ್ ದರ!

    ಈ ವಾರ ಎಲ್ಲೆಲ್ಲೂ ವಿಕ್ರಾಂತ್ ರೋಣ ಅಬ್ಬರ ಜರುಗಲಿದೆ. ಈ ಚಿತ್ರದ ಬಿಟ್ಟರೆ ಮತ್ಯಾವ ಸಿನಿಮಾ ಕೂಡ ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಸೂಚನೆ ಇಲ್ಲ. ಹಾಗಾಗಿ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ವಿಶ್ವದಾದ್ಯಂತ ಘರ್ಜಿಸಲಿದೆ. ಭಾರತದಾದ್ಯಂತ 'ವಿಕ್ರಾಂತ್ ರೋಣ' 2D ಟಿಕೆಟ್ ದರ 150 ರೂಪಾಯಿ ಇಂದ ಆರಂಭವಾಗಲಿದೆ. ಇನ್ನು ಗೋಲ್ಡ್ ಕ್ಲಾಸ್ ತನಕ 750 ರೂ ವರೆಗೂ, ಆಯಾ ಕ್ಲಾಸ್‌ಗೆ ತಕ್ಕಂತೆ ದರ ಇದೆ.

    ವಿಕ್ರಾಂತ್ ರೋಣ 3D ಟಿಕೆಟ್ ದರ!

    ವಿಕ್ರಾಂತ್ ರೋಣ 3D ಟಿಕೆಟ್ ದರ!

    ವಿಕ್ರಾಂತ್ ರೋಣ ಸಿನಿಮಾ 3d ತಂತ್ರಜ್ಙಾನದಲ್ಲೂ ಕೂಡ ತೆರೆಗೆ ಬರ್ತಿದೆ. ಹಾಗಾಗಿ 2dಗಿಂತಲೂ 3d ವರ್ಷನ್‌ಗೆ ಕೊಂಚ ಟಿಕೆಟ್ ದರದಲ್ಲಿ ವ್ಯತ್ಯಾಸವಿದೆ. 3d ಅವತರಣಿಕೆ ಟಿಕೆಟ್ ದರ 276 ರೂಪಾಯಿ ಇಂದ 950 ರೂಪಾಯಿ ತನಕ ಟಿಕೆಟ್ ದರ ನಿಗದಿಯಾಗಿದೆ. ಇದು ಕೂಡ ಕ್ಲಾಸ್ ಆಧಾರದ ಮೇಲೆ ಅವಲಂಬಿತವಾಗಿದೆ. ಈಗಾಗಲೆ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಹಲವು ಕಡೆಗಳಲ್ಲಿ ಸೀಟ್‌ಗಳು ಫೊಲ್ ಆಗುತ್ತಿದೆ.

    NFT ಟಿಕೆಟ್‌ಗೆ 10 ಸಾವಿರದಿಂದ 5 ಲಕ್ಷ!

    NFT ಟಿಕೆಟ್‌ಗೆ 10 ಸಾವಿರದಿಂದ 5 ಲಕ್ಷ!

    ಇನ್ನು ವಿಕ್ರಾಂತ್ ರೋಣ ಸಿನಿಮಾದ ಮೂಲಕ ಎನ್‌ಎಫ್‌ಟಿ ಎನ್ನುವ ವಿಶೇಷ ತಂತ್ರಜ್ಙಾನದ ಪ್ರಯೋಗವಾಗಿದೆ. ಇದು ಅತ್ಯಂತ ದುಬಾರಿಯೇ. NFT ಟಿಕೆಟ್ ದರ 10 ಸಾವಿರ ರೂಯಿ ಇಂದ 5 ಲಕ್ಷದ ತನಕ ಇರಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಈ ವರದಿಯಂತೆ ವಿಕ್ರಾಂತ್ ರೋಣ NFT ಟಿಕೆಟ್ ಪಡೆದುಕೊಂಡರೆ ಅಲ್ಲಿ ಸಿನಿಮಾ ನೋಡುವುದ ಜೊತೆಗೆ ಪಾರ್ಟಿ ಕೂಡ ಇರುತ್ತದೆ. ಹಾಗೆ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ.

    'ವಿಕ್ರಾಂತ್ ರೋಣ' ಗಳಿಕೆ ಮೇಲೆ ನಿರೀಕ್ಷೆ!

    'ವಿಕ್ರಾಂತ್ ರೋಣ' ಗಳಿಕೆ ಮೇಲೆ ನಿರೀಕ್ಷೆ!

    ಕನ್ನಡದ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಸಿನಿಮಾದ ಮೊದಲ ದಿನದ ಗಳಿಕೆಯ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತೆರೆಗೆ ಬರ್ತಿರುವ ವಿಕ್ರಾಂತ್ ರೋಣ, ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ಆದರೆ ವಿದೇಶಗಳಲ್ಲಿ ಇನ್ನೂ ಚಿತ್ರಮಂದಿರಗಳ ಸಂಖ್ಯೆ ಸ್ಪಷ್ಟವಾಗಿ ನಿಗದಿ ಆಗಿಲ್ಲ. ಹಾಗಾಗಿ ಭಾರತದಾದ್ಯಂತ ಮೊದಲ ದಿನದ ಗಳಿಕೆ ಎಷ್ಟಾಗಬಹುದು ಎನ್ನುವ ಲೆಕ್ಕಾಚಾರ ಮಾತ್ರವೇ ಲಭ್ಯವಾಗಿದೆ.

    ಭಾರತದಲ್ಲಿ 3500ಕ್ಕೂ ಹೆಚ್ಚು ಸ್ಕ್ರೀನ್!

    ಭಾರತದಲ್ಲಿ 3500ಕ್ಕೂ ಹೆಚ್ಚು ಸ್ಕ್ರೀನ್!

    'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಅನ್ನೋ ಬಗ್ಗೆ ಸಹಜ ಕುತೂಹಲ ಇದ್ದೇ ಇದೆ. ಅದು ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎನ್ನುವ ಬಗ್ಗೆ ಚಿತ್ರತಂಡ ಕಡೆಯಿಂದ ಫಿಲ್ಮೀ ಬೀಟ್‌ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಸುಮಾರು 3500 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ.

    Recommended Video

    ತನ್ನ ಕೈಯಾರೆ ಮಾಡಿದ ಜಾಕೆಟ್ ಗಿಫ್ಟ್ ಮಾಡಿದ ಅಭಿಮಾನಿ | Vikrant Rona | Upendra | Kiccha Sudeep *Press Meet

    English summary
    Vikrant Rona Movie High Ticket Price From 150 To 10 Thousand, Know More,
    Wednesday, July 27, 2022, 10:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X