Don't Miss!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- News
Breaking: ಭವಾನಿ ರೇವಣ್ಣಗೆ ಹಾಸನದಿಂದ ಟಿಕೆಟ್ ನೀಡುವಂತೆ ಪ್ರತಿಭಟನೆ
- Technology
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿರೂಪ್ ಭಂಡಾರಿ ಪೋಸ್ಟರ್: 'ವಿಕ್ರಾಂತ್ ರೋಣ' ಬೇಟೆಯ ಸುಳಿವು
'ರಂಗಿತರಂಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಿರೂಪ್ ಭಂಡಾರಿ ಈಗ ವಿಕ್ರಾಂತ್ ರೋಣ ಸಿನಿಮಾದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. ಕಿಚ್ಚ ಸುದೀಪ್ ನಾಯಕನಟನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ನಿರೂಪ್ 'ಸಂಜೀವ್ ಗಂಭೀರ' ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ.
ನಿರೂಪ್ ಭಂಡಾರಿ ಹುಟ್ಟುಹಬ್ಬದ ವಿಶೇಷವಾಗಿ ಇಂದು (ಆಗಸ್ಟ್ 13) ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಂಜೀವ್ ಗಂಭೀರ (ಸಂಜು) ಪಾತ್ರದ ಬಗ್ಗೆ ಒಂದಿಷ್ಟು ಸುಳಿವು ಈ ಪೋಸ್ಟರ್‌ನಲ್ಲಿ ಸಿಕ್ಕಿದೆ. ಇತ್ತೀಚಿಗಷ್ಟೆ ಜಾಕ್ವೆಲಿನ್ ಫರ್ನಾಂಡಿಸ್ ಅವರ 'ಗಡಂಗ್ ರಕ್ಕಮ್ಮನ' ಪಾತ್ರದ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. ಅದರ ಹಿಂದೆಯೇ ನಿರೂಪ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಈ ಎರಡು ಪೋಸ್ಟರ್‌ನಲ್ಲಿ ಒಂದೇ ಸಾಮ್ಯತೆ ಇದೆ. ಬೇಟೆಗಾರ ಅಥವಾ ಹಂಟರ್‌ಗೆ ಈ ಇಬ್ಬರು ಬೇಕಾಗಿದ್ದಾರೆ. ಈಗ ಒಂದೊಂದೆ ಪಾತ್ರಗಳ ಪೋಸ್ಟರ್ ಬಹಿರಂಗವಾಗುತ್ತಿದ್ದು, ಚಿತ್ರದ ಥ್ರಿಲ್ ಹೆಚ್ಚಿಸುತ್ತಿದೆ.
'ಗದಂಗ್
ರಕ್ಕಮ್ಮ'ನ
ಭರ್ಜರಿ
ಎಂಟ್ರಿ:
ಕಿಚ್ಚನ
ಅಭಿಮಾನಿಗಳು
ಫುಲ್
ಖುಷ್
ನಿರೂಪ್ ಭಂಡಾರಿ ಹುಟ್ಟುಹಬ್ಬಕ್ಕೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ಸಹೋದರ ಅನೂಪ್ ಭಂಡಾರಿ, ಕಿಚ್ಚ ಸುದೀಪ್, ಅಜನೀಶ್ ಲೋಕನಾಥ್, ಶೈನ್ ಶೆಟ್ಟಿ, ರಮೇಶ್ ಬಾಲ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ.
ಶ್ರೀಲಂಕಾ
ಬ್ಯೂಟಿ
ಜಾಕ್ವೆಲಿನ್ಗೆ
ಕಿಚ್ಚ
ಸುದೀಪ್
ವಿಶ್
ಮಾಡಿದ್ದು
ಹೀಗೆ
ನಿರ್ದೇಶಕ ಸುಧಾಕರ್ ಭಂಡಾರಿ ಅವರ ಮಕ್ಕಳು ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ. ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದ ಪ್ರೇಮದ ಕಾದಂಬರಿ ಧಾರಾವಾಹಿಯನ್ನು ಸುಧಾಕರ್ ಭಂಡಾರಿ ನಿರ್ದೇಶಿಸಿದ್ದರು. ನಿರೂಪ್-ಅನೂಪ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಸಿನಿಮಾ ಮೇಕಿಂಗ್‌ನಲ್ಲಿ ಹೆಚ್ಚಿನ ತರಬೇತಿ ಪಡೆದುಕೊಂಡಿದ್ದಾರೆ. ಮುಂದೆ ಓದಿ...

'ರಂಗಿತರಂಗ' ಚಿತ್ರದೊಂದಿಗೆ ಸಹೋದರರ ಎಂಟ್ರಿ
2015ರಲ್ಲಿ 'ರಂಗಿತರಂಗ' ಸಿನಿಮಾ ಮೂಲಕ ನಿರೂಪ್ ನಾಯಕನಟನಾಗಿ, ಅನೂಪ್ ನಿರ್ದೇಶಕನಾಗಿ ಇಂಡಸ್ಟ್ರಿ ಪ್ರವೇಶಿಸಿದರು. ರಾಜಮೌಳಿಯ 'ಬಾಹುಬಲಿ' ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ 'ರಂಗಿತರಂಗ' ಬಿಡುಗಡೆಯಾಗಿತ್ತು. ತೆಲುಗಿನ ಮೆಗಾ ಚಿತ್ರದ ಅಬ್ಬರದ ನಡುವೆ ರಂಗಿತರಂಗ ಗೆದ್ದು ಬೀಗಿತ್ತು. ಅವಂತಿಕಾ ಶೆಟ್ಟಿ, ರಾಧಿಕಾ ಚೇತನ್ ಹಾಗೂ ಸಾಯಿಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದರು.

'ರಂಗಿತರಂಗ' ಟು 'ರಾಜರಥ'
'ರಂಗಿತರಂಗ' ಯಶಸ್ಸಿನ ನಂತರ 'ರಾಜರಥ' ಸಿನಿಮಾ ಕೈಗೆತ್ತಿಕೊಂಡರು. ನಿರೂಪ್ ನಾಯಕ ಹಾಗೂ ಅನೂಪ್ ನಿರ್ದೇಶಕರಾಗಿ ಮಾಡಿದ ಎರಡನೇ ಚಿತ್ರ. ಚಿತ್ರೀಕರಣದ ಹಂತದಲ್ಲಿ ಈ ಸಿನಿಮಾ ಬಹಳ ಕುತೂಹಲ ಮೂಡಿಸಿತು. ತಮಿಳು ನಟ ಆರ್ಯ ಸಹ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದರು. ಈ ಸಿನಿಮಾ ನಿರೀಕ್ಷೆಯಂತೆ ಸಕ್ಸಸ್ ಆಗಿಲ್ಲ. ಆಮೇಲೆ ಅಭಿಷೇಕ್ ಅಂಬರೀಶ್ ಮೊದಲ ಸಲ ನಟಿಸಿದ 'ಅಮರ್' ಚಿತ್ರದ ಹಾಡೊಂದರಲ್ಲಿ ನಿರೂಪ್ ಹೆಜ್ಜೆ ಹಾಕಿದ್ದರು.

ಕೈಹಿಡಿಯದ 'ಆದಿಲಕ್ಷ್ಮಿ ಪುರಾಣ'
ರಾಧಿಕಾ ಪಂಡಿತ್ ಕಂಬ್ಯಾಕ್ ಸಿನಿಮಾದಲ್ಲಿ ನಿರೂಪ್ ನಾಯಕನ ಪಾತ್ರ ಮಾಡುವ ಮೂಲಕ ಗಮನ ಸೆಳೆದರು. ಮದುವೆ ಆದ್ಮೇಲೆ ರಾಧಿಕಾ ಪಂಡಿತ್ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. 2019ರಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಆದಿಲಕ್ಷ್ಮಿ ಪುರಾಣ' ಸಿನಿಮಾದಲ್ಲಿ ಕಂಬ್ಯಾಕ್ ಮಾಡಿದರು. ನಿರೀಕ್ಷೆಯಂತೆ ಸಕ್ಸಸ್ ಕಂಡಿಲ್ಲ. ಹೀಗೆ, ರಂಗಿತರಂಗ ಆದ್ಮೇಲೆ ನಿರೂಪ್ ಭಂಡಾರಿಗೆ ಒಂದೊಳ್ಳೆ ಬ್ರೇಕ್ ಸಿಕ್ಕಿಲ್ಲ. ಈಗ ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣ ಸಿನಿಮಾ ಮಾಡ್ತಿದ್ದು, ಬಹುಶಃ ಇದು ನಿರೂಪ್ ಪಾಲಿಗೆ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.

'ವಿಂಡೋಸೀಟ್'ನಲ್ಲಿ ನಿರೂಪ್
ನಿರೂಪಕಿ ಶೀತಲ್ ಶೆಟ್ಟಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡ್ತಿರುವ 'ವಿಂಡೋಸೀಟ್' ಸಿನಿಮಾದಲ್ಲಿ ನಿರೂಪ್ ನಾಯಕರಾಗಿ ಅಭಿನಯಿಸಿದ್ದಾರೆ. ಈ ಚಿತ್ರ ಸಂಪೂರ್ಣವಾಗಿ ತಯಾರಾಗಿದ್ದು, ರಿಲೀಸ್‌ಗಾಗಿ ಕಾಯುತ್ತಿದೆ. 'ವಿಕ್ರಾಂತ್ ರೋಣ' ನಿರ್ಮಿಸಿರುವ ಜಾಕ್ ಮಂಜು ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.