Don't Miss!
- Sports
ಕಾಮನ್ವೆಲ್ತ್ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?
- News
ಚನ್ನಪಟ್ಟಣ; ಕಾಡಾನೆ ದಾಳಿಗೆ ಮಹಿಳೆ ಬಲಿ, ಪರಿಹಾರಕ್ಕೆ ಜನರ ಪಟ್ಟು
- Automobiles
ಇದೇ ತಿಂಗಳು 11ರಂದು ಅನಾವರಣಗೊಳ್ಳಲಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Technology
ಒನ್ಪ್ಲಸ್ ಏಸ್ ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ! ಫೀಚರ್ಸ್ ಹೇಗಿದೆ?
- Lifestyle
Mangal Gochar 2022: ಆ. 10ಕ್ಕೆ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ದ್ವಾದಶ ಮೇಲೆ ಬೀರಲಿರುವ ಪ್ರಭಾವವೇನು?
- Finance
ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
- Travel
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
'ವಿಕ್ರಾಂತ್ ರೋಣ' ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆಗೆ ದಾಖಲು: ಎಡವಿ ಬಿದ್ದಿದ್ದೇ ಅನಾಹುತಕ್ಕೆ ಕಾರಣ!
ಕನ್ನಡದ 'ವಿಕ್ರಾಂತ್ ರೋಣ' ಸಿನಿಮಾ ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಕಿಚ್ಚ ಸುದೀಪ್‌ರ ಆತ್ಮೀಯ ಜಾಕ್ ಮಂಜು ಸದ್ಯ ಕಾಲಿನ ಸಮಸ್ಯೆಯಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.
20 ದಿನಗಳ ಹಿಂದೆ ಜಾಕ್ ಮಂಜು ಕಾಲಿಗೆ ಪೆಟ್ಟಾಗಿತ್ತು. ಎಡವಿ ಬಿದ್ದ ಕಾರಣ ಕಾಲಿನ ಸಮಸ್ಯೆ ಎದುರಾಗಿತ್ತು. ಹಾಗಾಗಿ ಕಾಲಿನ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಯಾವುದೇ ಉಪಯೋಗವಾಗಿರಲಿಲ್ಲ. ದಿನೇ ದಿನೇ ಕಾಲಿನ ಸಮಸ್ಯೆ ಅಧಿಕವಾಗುತ್ತಲೇ ಬಂದಿತ್ತು. ಹಾಗಾಗಿ ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
'ವಿಂಡೋಸೀಟ್'ನಲ್ಲಿ
ಕೂತು
ಕಥೆ
ಹೇಳುತ್ತಿರೋರಿಗೆ
ಸಾಥ್
ಕೊಟ್ಟ
ಕಿಚ್ಚ
ಸುದೀಪ್

ದಿನ ಕಳೆದಂತೆ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಊತ ಬರಲು ಆರಂಭವಾಗಿತ್ತು, ಹೀಗಾಗಿ ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಆಪರೇಷನ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

'ವಿಕ್ರಾಂತ್ ರೋಣ' ಪ್ರಚಾರದಲ್ಲಿ ಬ್ಯುಸಿ!
ಎರಡು ದಿನಗಳಿಂದ ಆಸ್ಪತ್ರೆಯಲ್ಲಿರುವ ಜಾಕ್ ಮಂಜು ಕಾಲಿಗೆ ಸರ್ಜರಿ ಮಾಡಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಜಾಕ್ ಮಂಜು ಕಳೆದ ಕೆಲವು ದಿನಗಳಿಂದ ಬಹುನಿರೀಕ್ಷೆಯ 'ವಿಕ್ರಾಂತ್ ರೋಣ' ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದರು. ದೇಶದಾದ್ಯಂತ ಸಂಚರಿಸುತ್ತಿದ್ದರು. ಆದರೀಗ ಧಿಡೀರ್ ಆಸ್ಪತ್ರೆ ದಾಖಲಾದ ವಿಚಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಜಾಕ್ ಮಂಜು ಬೇಗ ಗುಣಮುಖರಾಗಿ ವಾಪಾಸ್ ಆಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇಂಗ್ಲೆಂಡ್ನ
ಖ್ಯಾತ
ಕ್ರಿಕೆಟಿಗನಿಂದ
ಬ್ಯಾಟ್
ಉಡುಗೊರೆಯಾಗಿ
ಪಡೆದ
ಸುದೀಪ್

ಜಾಕ್ ಮಂಜು, ಸುದೀಪ್ ಸ್ನೇಹಿತ!
ನಿರ್ಮಾಪಕ ಜಾಕ್ ಮಂಜು ಮತ್ತು ಸುದೀಪ್ ಇಬ್ಬರು ಆಪ್ತ ಸ್ನೇಹಿತರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಸುದೀಪ್ ನಟನೆಯ ಸಿನಿಮಾಗಳಿಗೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಜಾಕ್ ಮಂಜು ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು ಮತ್ತು ಚಿತ್ರ ವಿತರಕರು. 'ಅಂಬಿ ನಿಂಗ್ ವಯಸ್ಸಾಯ್ತೋ', 'ಲೈಫು ಇಷ್ಟೇನೆ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದೀಗ ಪ್ಯಾನ್ ಇಂಡಿಯಾ 'ವಿಕ್ರಾಂತ್ ರೋಣ' ಸಿನಿಮಾದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಜುಲೈ 28ಕ್ಕೆ 'ವಿಕ್ರಾಂತ್ ರೋಣ' ರಿಲೀಸ್!
'ವಿಕ್ರಾಂತ್ ರೋಣ' ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ 'ವಿಕ್ರಾಂತ್ ರೋಣ' ಸಿನಿಮಾದ ಹಾಡು, ಟೀಸರ್, ಪೋಸ್ಟರ್ ಈಗಾಗಲೇ ವೈರಲ್ ಆಗಿದೆ. ಈ ನಡುವೆ ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆ ದಾಖಲಾಗಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಕನ್ನಡ
ಕಲಿತ
ಜಾಕ್ವೆಲಿನ್
ಬೆಂಗಳೂರಿಗೆ
ಬರ್ತಿದ್ದಾರೆ!

ಸುದೀಪ್ ಮೊದಲ 3D ಚಿತ್ರ!
ಕಿಚ್ಚ ಸುದೀಪ್ ಸಿನಿಮಾ ಇದೇ ಮೊದಲ ಬಾರಿಗೆ 3Dಯಲ್ಲಿ ತೆರೆಕಾಣುತ್ತಿದೆ. ಹಾಗಾಗಿ ಸಿನಿಮಾ ರಿಲೀಸ್ ಬಗ್ಗೆ ಕುತೂಹಲ ಹೆಚ್ಚಾಗಿದೆ. 3Dಯಲ್ಲಿ ಕಿಚ್ಚನ ಈ ಅಡ್ವೆಂಚರ್ ಸಿನಿಮಾ ಹೇಗೆ ಇರಲಿದೆ ಎನ್ನುವ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಈ ಚಿತ್ರದಲ್ಲಿ ಸುದೀಪ್ ಜೊತೆಗೆ ನೀತಾ ಅಶೋಕ್, ನಿರೂಪ್ ಭಂಡಾರಿ ಕಾಣಿಕೊಂಡಿದ್ದು, ಅನೂಪ್ ಭಂಡಾರಿ ನಿರ್ದೇಶವಿದೆ.