For Quick Alerts
  ALLOW NOTIFICATIONS  
  For Daily Alerts

  ಐಎಂಡಿಬಿ ರೇಟಿಂಗ್: ವಿಕ್ರಾಂತ್ ರೋಣ ಟಾಪ್, RRR ಪಟ್ಟಿಯಲ್ಲೇ ಇಲ್ಲ

  |

  ಈ ಕ್ಷಣಕ್ಕೆ ಭಾರತೀಯ ಸಿನಿಮಾರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿರುವ ಚಿತ್ರ ಯಾವುದು ಎಂದು ಸರ್ಚ್ ಮಾಡಿದರೆ ಎಸ್‌ಎಸ್‌ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಆರ್‌ಆರ್‌ಆರ್', ಯಶ್ ನಟನೆಯ 'ಕೆಜಿಎಫ್' ಸಿನಿಮಾಗಳು ಮೊದಲೆರಡು ಸ್ಥಾನದಲ್ಲಿ ಇರಬಹುದು ಎಂಬ ಲೆಕ್ಕಾಚಾರ ಚಿತ್ರ ಜಗತ್ತಿನಲ್ಲಿ ಸಾಮಾನ್ಯ.

  ವಿಕ್ರಾಂತ್ ರೋಣ ಒಂದು ಹಾಡಿನ ಬಜೆಟ್ ಕೇಳಿದ್ರೆ ಶಾಕ್ ಆಗ್ತೀರಾ | filmibeat kannada

  ಆದರೆ, ಆ ಲೆಕ್ಕಾಚಾರ ತಲೆಕೆಳಗಾಗುವಂತಿದೆ ಐಎಂಡಿಬಿ ರೇಟಿಂಗ್. ಪ್ರಸ್ತುತ, ಭಾರತದ ಅತಿ ಹೆಚ್ಚು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಆರ್‌ಆರ್‌ಆರ್ ಚಿತ್ರಕ್ಕೆ ಟಾಪ್ ಹತ್ತರೊಳಗೆ ಸ್ಥಾನವಿಲ್ಲ. ಕೆಜಿಎಫ್ ಚಿತ್ರಕ್ಕೂ ಮೊದಲ ಸ್ಥಾನ ಸಿಕ್ಕಿಲ್ಲ. ಮೊದಲ ಸ್ಥಾನದಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಇದೆ. ಮುಂದೆ ಓದಿ...

  ಸುದೀಪ್ 'ವಿಕ್ರಾಂತ್ ರೋಣ' ಟಾಪ್

  ಸುದೀಪ್ 'ವಿಕ್ರಾಂತ್ ರೋಣ' ಟಾಪ್

  ಭಾರತೀಯ ಸಿನಿಮಾಗಳಿಗೆ ರೇಟಿಂಗ್ ನೀಡಿರುವ ಐಎಂಡಿಬಿ ಅಭಿಮಾನಿಗಳ ವಲಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಟಾಪ್‌ನಲ್ಲಿ ತಮ್ಮ ನೆಚ್ಚಿನ ಹೀರೋ ಸಿನಿಮಾ ಇದ್ದರೆ ಅದು ಹೆಮ್ಮೆಯಾಗಿ ಭಾವಿಸುವ ಟ್ರೆಂಡ್ ಇದೆ. ಇದೀಗ, ಭಾರತೀಯ ಅತಿ ಹೆಚ್ಚು ನಿರೀಕ್ಷೆಯ ಪಟ್ಟಿಯಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನದಲ್ಲಿದೆ.

  ಅನೂಪ್ ಭಂಡಾರಿ ಕೆಲಸ ಕಂಡು ದೊಡ್ಡ ಹೊಗಳಿಕೆ ಮಾತಾಡಿದ ಜಾಕ್ವೆಲಿನ್ಅನೂಪ್ ಭಂಡಾರಿ ಕೆಲಸ ಕಂಡು ದೊಡ್ಡ ಹೊಗಳಿಕೆ ಮಾತಾಡಿದ ಜಾಕ್ವೆಲಿನ್

  ಎರಡನೇ ಸ್ಥಾನದಲ್ಲಿ ಕೆಜಿಎಫ್

  ಎರಡನೇ ಸ್ಥಾನದಲ್ಲಿ ಕೆಜಿಎಫ್

  ಐಎಂಡಿಬಿ ಪ್ರಕಟಿಸಿರುವ ಭಾರತೀಯ ಅತಿ ಹೆಚ್ಚು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕುತೂಹಲ ಮೂಡಿಸಿರುವ ಕೆಜಿಎಫ್ ಚಾಪ್ಟರ್ 2 ಎರಡನೇ ಸ್ಥಾನದಲ್ಲಿದೆ. ಕೆಜಿಎಫ್ ಚಾಪ್ಟರ್ 1 ಗೆಲುವು, ಎರಡನೇ ಭಾಗದ ಮೇಲೆ ಹೆಚ್ಚು ನಿರೀಕ್ಷೆ ಮೂಡಿಸಿದೆ.

  ಐದನೇ ಸ್ಥಾನದಲ್ಲಿ ಪುಷ್ಪ

  ಐದನೇ ಸ್ಥಾನದಲ್ಲಿ ಪುಷ್ಪ

  ಭಾರತೀಯ ಸಿನಿಪ್ರಪಂಚದಲ್ಲಿ ಸಂಚಲನ ಸೃಷ್ಟಿಸಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'. ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರಲಿದೆ. ಐಎಂಡಿಬಿ ಪಟ್ಟಿಯಲ್ಲಿ 'ಪುಷ್ಪ' ಐದನೇ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ 'ನವರಸ' ಸಿನಿಮಾ ಹಾಗೂ ನಾಲ್ಕನೇ ಸ್ಥಾನದಲ್ಲಿ 'ಶೇರ್‌ಷಾ' ಇದೆ.

  'KGF-2' ದಾಖಲೆ ಮುರಿದ 'RRR': ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ'KGF-2' ದಾಖಲೆ ಮುರಿದ 'RRR': ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ

  ಟಾಪ್ ಹತ್ತರಲ್ಲಿ ಯಾವ ಚಿತ್ರಗಳು

  ಟಾಪ್ ಹತ್ತರಲ್ಲಿ ಯಾವ ಚಿತ್ರಗಳು

  ಆರನೇ ಸ್ಥಾನದಲ್ಲಿ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ', ಏಳನೇ ಸ್ಥಾನದಲ್ಲಿ 'ತಿಮ್ಮರಸು', ಏಂಟನೇ ಸ್ಥಾನದಲ್ಲಿ ಆಲಿಯಾ ಭಟ್ ನಟನೆಯ 'ಗಂಗುಬಾಯಿ ಕಥಿಯಾವಾಡಿ', ಒಂಬತ್ತನೇ ಸ್ಥಾನದಲ್ಲಿ 'ರಾಧೇ ಶ್ಯಾಮ್' ಹಾಗೂ ಹತ್ತನೇ ಸ್ಥಾನದಲ್ಲಿ 'ಅನೆಕ್' ಇದೆ.

  ಟಾಪ್ ಹತ್ತರಲಿಲ್ಲ 'ಆರ್‌ಆರ್‌ಆರ್'

  ಟಾಪ್ ಹತ್ತರಲಿಲ್ಲ 'ಆರ್‌ಆರ್‌ಆರ್'

  ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸದ್ಯದ ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಐಎಂಡಿಬಿ ಪ್ರಕಟಿಸಿರುವ ಭಾರತೀಯ ಅತಿ ಹೆಚ್ಚು ನಿರೀಕ್ಷೆಯ ಸಿನಿಮಾಗಳ ಪ್ರಸ್ತುತ ಪಟ್ಟಿಯಲ್ಲಿ 'ಆರ್‌ಆರ್‌ಆರ್' ಚಿತ್ರಕ್ಕೆ ಸ್ಥಾನವಿಲ್ಲ. ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  English summary
  Kicccha Sudeep starrer Vikrant Rona tops the list of most anticipated new Indian movies on IMDB.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X