»   » 'ರನ್ ಆಂಟನಿ' ನಂತರ 'ಅಚ್ಚರಿ'ಗೊಳಗಾದ ವಿನಯ್ ರಾಜ್ ಕುಮಾರ್

'ರನ್ ಆಂಟನಿ' ನಂತರ 'ಅಚ್ಚರಿ'ಗೊಳಗಾದ ವಿನಯ್ ರಾಜ್ ಕುಮಾರ್

Posted By:
Subscribe to Filmibeat Kannada

ನಟ ವಿನಯ್ ರಾಜ್ ಕುಮಾರ್ ಅಭಿನಯಿಸಲಿರುವ ಮೂರನೇ ಚಿತ್ರದ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಚಿತ್ರದ ಟೈಟಲ್ ಕೂಡ ಅಂತಿಮವಾಗಿದೆ. 'ರನ್ ಆಂಟನಿ' ಚಿತ್ರದ ನಂತರ ವಿನಯ್ ಅವರ ಮುಂದಿನ ಚಿತ್ರಕ್ಕೆ ನವ ನಿರ್ದೇಶಕ ಸುನೀಲ್ ತಾಳ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸುನೀಲ್ ತಾಳ್ಯ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ 'ಅಚ್ಚರಿ' ಎಂದು ಟೈಟಲ್ ಇಡಲಾಗಿದ್ದು, ಚಿತ್ರದಲ್ಲಿ ವಿನಯ್ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕಾಗಿ ನಟ ವಿನಯ್ ರಾಜ್ ಕುಮಾರ್ ಕೂಡ ಮೇಕ್ ಓವರ್ ಆಗುತ್ತಿದ್ದಾರಂತೆ.

Vinay Rajakumar's Next Movie Titled As Acchari

ಇನ್ನು ವಿಶೇಷ ಅಂದ್ರೆ, 'ಅಚ್ಚರಿ' ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಜೊತೆ ನಾಲ್ಕು ನಟಿಯರು ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ, ನಾಯಕಿಯರ ಹುಡುಕಾಟದಲ್ಲಿರುವ ಚಿತ್ರತಂಡ ಆದಷ್ಟೂ ಬೇಗ ನಟಿಯರನ್ನ ಅಂತಿಮಗೊಳಿಸಲಿದ್ದಾರಂತೆ.

ಈಗಾಗಲೇ ವಿನಯ್ ಅವರ ಫೋಟೋಶೂಟ್ ಕೂಡ ಮುಗಿಸಿರುವ ಚಿತ್ರತಂಡ ಈ ತಿಂಗಳ ಅಂತ್ಯದಲ್ಲಿ ಅಥವಾ ಆಗಸ್ಟ್ ತಿಂಗಳಲ್ಲಿ ಸಿನಿಮಾ ಶುರು ಮಾಡಲಿದ್ದಾರಂತೆ.

ಮೂವರು ನಾಯಕಿಯರ ಮುದ್ದಿನ ಹುಡುಗ ವಿನಯ್

English summary
Kannada Actor Vinay Rajakumar's Next Movie Titled As Acchari. The Movie Directed By Sunil Thalya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada