ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ನಾಯಕಿಯಾಗಿ ಅದಿತಿ ಪ್ರಭುದೇವ

ಡಾ ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ 'ಅದೊಂದಿತ್ತು ಕಾಲ' ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಈ ಚಿತ್ರಕ್ಕೆ ಕೀರ್ತಿ ನಿರ್ದೇಶನ ಮಾಡುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾ ಆಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ.

ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಪೋಸ್ಟರ್‌ನಲ್ಲಿ ಪುಟ್ಟ ಹುಡುಗನೊಬ್ಬ ಗಾಳಿಪಟ ಹಾರಿಸುವಂತೆ ಕಾಣಿಸಿಕೊಂಡಿದ್ದಾರೆ. ''ಹೃದಯ ತುಂಬಾ ಅಳುವಿದೆ. ನಗುವಷ್ಟು ಅದೃಷ್ಟವಂತನಲ್ಲ. ಮರೆಯಾದ ನಗುವಿನಲ್ಲಿ ನಗುವಿಲ್ಲದ ನೋವಿನಲ್ಲಿ ನಾ ನಿನ್ನ ಸೆರೆಯಾಗುವೆ....ಓ ಬಾಲ್ಯವೇ ನೀ ಮತ್ತೆ ಬಂದು ಬಿಡು, ನನ್ನ ಮತ್ತೆ ಮಗುವಾಗಿಸು-ಕುಮಾರ'' ಎಂದು ಕವನ ಪೋಸ್ಟರ್‌ನಲ್ಲಿ ಗಮನ ಸೆಳೆಯುತ್ತಿದ್ದು, ಚಿತ್ರ ಕಥೆಯ ಬಗ್ಗೆ ಸುಳಿವು ನೀಡುವಂತಿದೆ.

Vinay Rajkumar and Aditi Prabhudeva come together for Keerthi s directorial debut titled Andondittu Kaala

ಭುವನ್, ಲೋಕೇಶ್, ಶಿವಣ್ಣ ಎಸ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಅಭಿಷೇಖ್ ಜಿ ಕಾಸರಗೋಡು, ಅವರ ಛಾಯಾಗ್ರಹಣ ಹಾಗೂ ರಾಘವೇಂದ್ರ ವಿ ಸಂಗೀತ ಒದಗಿಸಿದ್ದಾರೆ.

ಅಂದ್ಹಾಗೆ, ಈ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ, ಸದ್ಯಕ್ಕೆ ಆ ನಟ ಯಾರು ಎನ್ನುವುದು ಗೌಪ್ಯವಾಗಿದೆ.

More from Filmibeat

English summary
Kannada actor Vinay Rajkumar and Aditi Prabhudeva come together for Keerthi 's directorial debut titled Andondittu Kaala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X