»   » ವಿನಯ್ ರಾಜ್ 'ಸಿದ್ದಾರ್ಥ' ಚಿತ್ರದ ಕ್ಲಾಸ್ ಗೆಟಪ್

ವಿನಯ್ ರಾಜ್ 'ಸಿದ್ದಾರ್ಥ' ಚಿತ್ರದ ಕ್ಲಾಸ್ ಗೆಟಪ್

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ತಲೆಮಾರಿನ ನಾಯಕ ನಟ ವಿನಯ್ ರಾಜ್ ಅಭಿನಯದ 'ಸಿದ್ದಾರ್ಥ' ಚಿತ್ರ ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಲೇಟೆಸ್ಟ್ ಚಿತ್ರಗಳು ಬಿಡುಗಡೆಯಾಗಿದ್ದು ವಿನಯ್ ಗೆಟಪ್ ಪ್ರಮುಖ ಆಕರ್ಷಣೆ ಎನ್ನಬಹುದು.

ಈ ಚಿತ್ರದಲ್ಲಿ ಕ್ಲಾಸ್ ಗೆಟಪ್ ನಲ್ಲಿರುವ ಅವರು ನಾಯಕಿ ಅಪೂರ್ವ ಅರೋರಾ ಜೊತೆಗಿನ ಪ್ರೇಮ ಸನ್ನಿವೇಶದ ಸ್ಟಿಲ್ಸ್ ಬಿಡುಗಡೆಯಾಗಿವೆ. ರಾಜ್ ಫ್ಯಾಮಿಲಿ ಸದಾ ಸರಳ ಮತ್ತು ಸದ್ಭಾವನೆಯ ಸಂಕೇತ. ಆ ಕುಟುಂಬಕ್ಕೆ ತಕ್ಕಂತೆ ಸಖತ್ ಸಾಫ್ಟ್ ಟೈಟಲ್ ಇಟ್ಟಿದ್ದಾರೆ. ಟೈಟಲ್ ಎಷ್ಟು ಸೈಲೆಂಟ್ ಅನ್ನಿಸ್ತಿದೆಯೋ ಅಷ್ಟೇ ಪವರ್ ಫುಲ್ ಕೂಡ.

ಮಿಲನ ಸಿನಿಮಾ ಟೈಟಲ್ಲನ್ನೂ ಮೂರೇ ಅಕ್ಷರದಲ್ಲಿ ನೀಲಿ ಬಣ್ಣದಲ್ಲಿ ಡಿಸೈನ್ ಮಾಡಿಸಿದ್ದ ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಲವಲವಿಕೆಯ ಟೈಟಲ್ ಮೊರೆ ಹೋಗಿದ್ದಾರೆ. ಜೊತೆಗೆ 'ಗೀವ್ ಮಿ ಅ ಬ್ರೇಕ್' ಅನ್ನೋ ಟ್ಯಾಗ್ ಲೈನ್ ಕೂಡ ಇದೆ.

ಹೆಸರಘಟ್ಟ ಆಚಾರ್ಯ ಕಾಲೇಜಿನಲ್ಲಿ ಚಿತ್ರೀಕರಣ

ಈ ಚಿತ್ರದ ಪಾತ್ರವರ್ಗದಲ್ಲಿ ವಿನಯ್, ಅಪೂರ್ವಾ ಆರೋರ, ಅಶ್ವಿನಿ ಗೌಡ, ಸಾಧುಕೋಕಿಲ ಮುಂತಾದವರಿದ್ದಾರೆ. ಮೈನವಿರೇಳಿಸುವ ಹೊಡೆದಾಟದ ದೃಶ್ಯವೊಂದನ್ನು ರವಿವರ್ಮ ಸಾಹಸ ನಿರ್ದೇಶನದೊಂದಿಗೆ ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ಹೆಸರಘಟ್ಟ ಬಳಿಯಿರುವ ಆಚಾರ್ಯ ಕಾಲೇಜ್ ನಲ್ಲಿ ನಿರ್ದೇಶಕ ಪ್ರಕಾಶ್ ಜಯರಾಂ ಚಿತ್ರಿಸಿಕೊಂಡರು.

ಚಿತ್ರದ ತಾಂತ್ರಿಕ ಬಳಗ ಹೀಗಿದೆ

ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ ಕುಮಾರ್ ಅರ್ಪಿಸಿ ಪಾರ್ವತಮ್ಮರಾಜ್ ಕುಮಾರ್ ನಿರ್ಮಿಸುತ್ತಿರುವ 'ಸಿದ್ದಾರ್ಥ' ಚಿತ್ರಕ್ಕೆ ಈಗ ನಗರದ ಸುತ್ತಮುತ್ತಚಿತ್ರೀಕರಣ ಸಾಗಿದೆ. ಚಿತ್ರಕ್ಕೆ ರಘು ಸಮರ್ಥ ಸಂಭಾಷಣೆ, ಸಾಹಿತ್ಯ ಜಯಂತ್ ಕಾಯ್ಕಿಣಿ, ಎಂ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಮೋಹನ್ ಪಂಡಿತ್ ಕಲೆ, ಸಚಿನ್ ಸಂಕಲನ ರವಿವರ್ಮ ಸಾಹಸ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ, ಅನಂತಮೂರ್ತಿ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಪ್ರಕಾಶ್ ಜಯರಾಂ.

ಪಾತ್ರವರ್ಗದಲ್ಲಿರುವ ಇತರೆ ಕಲಾವಿದರು

ಇವರೊಂದಿಗೆ ಅಪೂರ್ವ ಆರೋರ, ಆಶಿಷ್ ವಿದ್ಯಾರ್ಥಿ, ಅಶ್ವಿನಿಗೌಡ, ಅಚ್ಯುತಕುಮಾರ್, ಸಾಧುಕೋಕಿಲ, ನಿಕ್ಕಿ, ಗುರುನಂದನ್, ನಯನಾ, ದೀಪಿಕಾ, ಉಮೇಶ್, ಅಲೋಕ್, ಜೀವನ್, ವಿನೋದ್, ಮಣಿಶೆಟ್ಟಿ ಮುಂತಾದವರು ಉಳಿದ ತಾರಾ ಬಳಗದಲ್ಲಿದ್ದಾರೆ.

ವಿಜಯ್ ಲುಕ್ ಗೆ ವಿಶೇಷ ಪ್ರಾಧಾನ್ಯತೆ

ಈ ಚಿತ್ರದಲ್ಲಿ ವಿನಯ್ ರಾಜ್ ಲುಕ್ ಗೆ ಸ್ಪೆಷಲ್ ಇಂಪಾರ್ಟೆನ್ಸ್ ಕೊಡಲಾಗಿದೆ. ರಾಜ್ ಕುಟುಂಬದ ಮೂರನೇ ತಲೆಮಾರಿನ ಓಪನಿಂಗ್ ಸಿನಿಮಾವನ್ನ ಸ್ವತಃ ಹೋಮ್ ಬ್ಯಾನರ್ ನಿಂದ ನಿರ್ಮಾಣ ಮಾಡಲಾಗುತ್ತಿದೆ.

ಸದಭಿರುಚಿಯ ಚಿತ್ರಗಳಿಗೆ ಹೆಸರಾದ ಬ್ಯಾನರ್

ರಾಜ್ ಬ್ಯಾನರ್ ಚಿತ್ರಗಳೆಂದರೆ ಮನೆಮಂದಿಯಲ್ಲಾ ಕುಳಿತು ನೋಡುವ ಸದಭಿರುಚಿಯ ಚಿತ್ರಗಳಿಗೆ ಹೆಸರುವಾಸಿ. ಇನ್ನು ಪ್ರಕಾಶ್ ಅವರ ನಿರ್ದೇಶನದ ಬಗ್ಗೆಯೂ ಅದೇ ರೀತಿಯ ಅಭಿಪ್ರಾಯವಿದೆ. ಜೊತೆಗೆ ಚಿತ್ರದ ಸ್ಟಿಲ್ಸ್ ಸಹ ಅದಕ್ಕೆ ಪೂರಕವಾಗಿರುವುದು ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸುತ್ತಿವೆ.

English summary
Vinay Rajkumar, Dr Rajkumar grand son, class look in upcoming movie Siddhartha. The sub title 'Give me a break' directed by Milana fame Prakash and music by V Harikrishna. Vinay Raj is son of Raghavendra Rajkumar is entering Kannada films on through Siddhartha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada