»   » ಅಲ್ಲು ಅರ್ಜುನ್ ಜೊತೆ ವಿನಯ್ ಗ್ರ್ಯಾಂಡ್ ಪಾರ್ಟಿ

ಅಲ್ಲು ಅರ್ಜುನ್ ಜೊತೆ ವಿನಯ್ ಗ್ರ್ಯಾಂಡ್ ಪಾರ್ಟಿ

Posted By:
Subscribe to Filmibeat Kannada

ಅಣ್ಣಾವ್ರ ಕುಟುಂಬದ ಕುಡಿ, ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ, 'ಮೆಗಾ 3G ಪವರ್ ಸ್ಟಾರ್' ವಿನಯ್ ರಾಜ್ ಕುಮಾರ್ ಈಗ ಹೊಸ ನಕ್ಷತ್ರದಂತೆ ಸ್ಯಾಂಡಲ್ ವುಡ್ ನಲ್ಲಿ ಫಳಫಳ ಹೊಳೆಯುತ್ತಿದ್ದಾರೆ. ಇತ್ತೀಚೆಗೆ 25ನೇ ಹುಟ್ಟುಹಬ್ಬವನ್ನೂ ಭರ್ಜರಿಯಾಗಿ ಆಚರಿಸಿಕೊಂಡು ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರ 'R The King' ಸಹ ಪ್ರಕಟವಾಗಿದೆ. ಇದೇ ಖುಷಿಯಲ್ಲಿ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೆ ಗ್ರ್ಯಾಂಡ್ ಪಾರ್ಟಿ ಮಾಡಿಕೊಂಡು ಸಂಭ್ರಮಿಸಿದ್ದಾರೆ. [ವಿನಯ್ ರಾಜ್ ಕೈಹಿಡಿದ ಅಭಿಮಾನಿ ದೇವರುಗಳು]

Vinay Rajkumar grand party with Allu Arjun

ಮೊದಲಿಂದಲೂ ಅಣ್ಣಾವ್ರ ಕುಟುಂಬಕ್ಕೂ ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಅವರ ಮನೆಯಲ್ಲಿ ಶುಭ ಕಾರ್ಯವಾದರೆ ಇವರು, ಇವರ ಮನೆಯಲ್ಲಿ ಮಂಗಳ ಕಾರ್ಯವಾದರೆ ಇವರು ಆಹ್ವಾನಿಸುವುದು ವಾಡಿಕೆ.

ಈ ಫೋಟೋ ನೋಡಿದರೆ ಬಹುಶಃ ವಿನಯ್ ಬರ್ತ್ ಡೇಗೆ ಅಲ್ಲು ಅರ್ಜುನ್ ವಿಶ್ ಮಾಡಲು ಬಂದಂತಿದೆ. ವಿನಯ್ ಗೆಳೆಯರು ಅಲ್ಲು ಅರ್ಜುನ್ ಜೊತೆ ಸೇರಿಕೊಂಡು ಭರ್ಜರಿ ಪಾರ್ಟಿ ಮಾಡಿಕೊಂಡು ಸವಿದಿದ್ದಾರೆ.

ಒಟ್ಟಾರೆ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ವಾರಸುದಾರರು ಒಂದಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಮುಂದೊಂದು ದಿನ ಇವರಿಬ್ಬರೂ ಒಟ್ಟಿಗೆ ಅಭಿನಯಿಸಿದರೂ ಅಚ್ಚರಿಯಿಲ್ಲ. (ಫಿಲ್ಮಿಬೀಟ್ ಕನ್ನಡ)

English summary
Vinay Rajkumar was found partying with Stylish Star All Arjun. This somewhere reflects that, Vinay has good bonding with Telugu actor Allu Arjun. One picture from the party has been posted in Facebook in which Vinay and his friends are happily enjoying a grand party with Allu Arjun.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada