For Quick Alerts
  ALLOW NOTIFICATIONS  
  For Daily Alerts

  ವಿನಯ್ ರಾಜ್ ಕುಮಾರ್ ಸಿನಿಮಾಗೆ ತಾತನ ಚಿತ್ರದ ಟೈಟಲ್

  |

  'ದಾರಿ ತಪ್ಪಿದ ಮಗ' ಸಿನಿಮಾದ ಟೈಟಲ್ ನಲ್ಲಿ ಈಗಾಗಲೇ ರಾಜ್ ಮೊಮ್ಮಗ ಧೀರನ್ ರಾಜ್​ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಮೊಮ್ಮಗ ವಿನಯ್ ರಾಜ್ ಕುಮಾರ್ ಕೂಡ ತಾತನ ಚಿತ್ರದ ಹೆಸರನ್ನು ಇಟ್ಟುಕೊಂಡಿದ್ದಾರೆ.

  ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ 'ವೀರ ಕೇಸರಿ' ಎಂಬ ಟೈಟಲ್ ಇಡಲಾಗಿದೆ. ರಘು ವರ್ಧನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಥೆಗೆ 'ವೀರ ಕೇಸರಿ' ಎನ್ನುವ ಹೆಸರು ತುಂಬ ಚೆನ್ನಾಗಿ ಹೋಲುತ್ತಿದ್ದು, ಅದೇ ಹೆಸರನ್ನು ಬಳಸಿಕೊಳ್ಳಲಾಗಿದೆಯಂತೆ.

  ಶಿವಣ್ಣ, ಪುನೀತ್ ನಂತರ 'ಬಾಕ್ಸರ್' ಆದ ವಿನಯ್ ಶಿವಣ್ಣ, ಪುನೀತ್ ನಂತರ 'ಬಾಕ್ಸರ್' ಆದ ವಿನಯ್

  ರಾಜ್ ಕುಮಾರ್ ನಟನೆಯ 'ವೀರ ಕೇಸರಿ' ಸಿನಿಮಾ 1963 ರಲ್ಲಿ ಬಿಡುಗಡೆಯಾಗಿತ್ತು. ರಾಜ್ ಕುಮಾರ್, ಟಿ ಎಸ್ ಬಾಲಕೃಷ್ಣ, ಉದಯ್ ಕುಮಾರ್ ಆ ನಾಗೇಂದ್ರ ರಾವ್ ಸಿನಿಮಾದಲ್ಲಿ ನಟಿಸಿದ್ದರು.

  ಖ್ಯಾತ ನಿರ್ದೇಶಕ ವಿಠಲಾಚಾರ್ಯ ಚಿತ್ರದ ನಿರ್ದೇಶನ ಮಾಡಿದ್ದರು. ಶೇಕ್ಸ್ ಪಿಯರ್ ಬರೆದಿರುವ 'ಟೇಮಿಂಗ್‌ ಆಫ್‌ ದಿ ಶ್ರ್ಯೂ' ಕೃತಿ ಆಧಾರಿಸಿ ಈ ಸಿನಿಮಾ ಮಾಡಲಾಗಿತ್ತು.

  ಇಂತಹ 'ವೀರ ಕೇಸರಿ' ಚಿತ್ರದ ಹೆಸರನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದರೂ, ಹಳೆ ಚಿತ್ರಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ನಿರ್ದೇಶಕ ರಘುವರ್ಧನ್ ತಿಳಿಸಿದ್ದಾರೆ.

  English summary
  Kannada actor Vinay Rajkumar new movie titled as 'Veera Kesari'. 'Veera Kesari' is Dr Rajkumar's popular movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X