»   » ಮುಂದಿನ ಚಿತ್ರದಲ್ಲಿ 'ಲಾಯರ್' ಆದ ವಿನಯ್ ರಾಜ್ ಕುಮಾರ್

ಮುಂದಿನ ಚಿತ್ರದಲ್ಲಿ 'ಲಾಯರ್' ಆದ ವಿನಯ್ ರಾಜ್ ಕುಮಾರ್

Posted By:
Subscribe to Filmibeat Kannada

ಡಾ.ರಾಜ್ ಮೊಮ್ಮಗ ವಿನಯ್ ರಾಜಕುಮಾರ್‌ ಅಭಿನಯಿಸಲಿರುವ ಎರಡು ಚಿತ್ರಗಳು ಒಟ್ಟಿಗೆ ಘೋಷಣೆ ಅಗಿದ್ದವು. ಆದ್ರೆ, ಇವರೆಡರಲ್ಲಿ ಯಾವ ಚಿತ್ರ ಮೊದಲು ಶುರುವಾಗುತ್ತೆ ಮತ್ತು ಬಿಡುಗಡೆಯಾಗುತ್ತೆ ಎಂಬುದು ಕುತೂಹಲವಾಗಿಯೇ ಉಳಿದಿದೆ. ಆದ್ರೆ, ಎರಡು ಚಿತ್ರಗಳ ಪೈಕಿ ಒಂದು ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

'ರನ್ ಆಂಟನಿ' ನಂತರ 'ಅಚ್ಚರಿ'ಗೊಳಗಾದ ವಿನಯ್ ರಾಜ್ ಕುಮಾರ್

"ಅಚ್ಚರಿ' ಹಾಗೂ "ಅನಂತು ವರ್ಸಸ್ ನುಸ್ರತ್' ಎಂಬ ಎರಡು ಚಿತ್ರಗಳ ಪೈಕಿ 'ಅನಂತು ವರ್ಸಸ್ ನುಸ್ರತ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ವಿನಯ್ ರಾಜಕುಮಾರ್‌ ಸಖತ್‌ ಸ್ಟಾಂಡರ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಕಪ್ಪು ಬಟ್ಟೆ ತೊಟ್ಟು ವಕೀಲನಂತೆ ಫೋಸ್ ಕೊಟ್ಟಿದ್ದಾರೆ. ಹೀಗಾಗಿ, ಚಿತ್ರದಲ್ಲಿ ವಿನಯ್ ಅವರದ್ದು 'ಲಾಯರ್' ಪಾತ್ರವಿರಬಹುದು ಎಂಬ ಅನುಮಾನ ಕಾಡುತ್ತಿದೆ. ಆದ್ರೆ, ಸದ್ಯಕ್ಕೆ ಉತ್ತರವಿಲ್ಲ.

Vinay Rajkumar's 3rd Movie 'Ananthu versus Nusrath' first look

ಈ ಚಿತ್ರವನ್ನ ಸುಧೀರ್‌ ಶಾನುಭೋಗ್ ನಿರ್ದೇಶಿಸುತ್ತಿದ್ದು, ಮಾಣಿಕ್ಯ ಪ್ರೊಡಕ್ಷನ್ಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದಂದು ಪೂಜೆ ಮುಗಿಸಿರುವ ಚಿತ್ರತಂಡ ಫೋಟೋಶೂಟ್ ಮುಗಿಸಿದೆ. ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲಿದೆ.

ವಿನಯ್ ರಾಜ್ ಕುಮಾರ್ ನಾಲ್ಕನೇ ಚಿತ್ರಕ್ಕೂ ಟೈಟಲ್ ಫಿಕ್ಸ್! ನಿರ್ದೇಶಕ ಯಾರು?

Run Antony Kannada Film Audience Response

ಉಳಿದಂತೆ ಸುನಾದ್ ಗೌತಮ್ ಅವರ ಸಂಗೀತ ಚಿತ್ರಕ್ಕಿದೆ. ಸದ್ಯ, ಟೆಕ್ನಿಕಲ್ ತಂಡವನ್ನ ಆಯ್ಕೆ ಮಾಡಿಕೊಂಡಿರುವ ಚಿತ್ರತಂಡ, ನಾಯಕಿ ಸೇರಿದಂತೆ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿದೆ. ಅಂದ್ಹಾಗೆ, 'ರನ್‌ ಆಂಟೋನಿ' ಚಿತ್ರದ ನಂತರ ವಿನಯ್ ಅವರ ಮೂರನೇ ಚಿತ್ರ ಇದಾಗಿದ್ದು, ಇದರ ಜೊತೆಗೆ ಸುನೀಲ್ ತಾಳ್ಯ ನಿರ್ದೇಶನದ 'ಅಚ್ಚರಿ' ಚಿತ್ರವನ್ನ ಕೂಡ ಕೈಗೆತ್ತಿಕೊಳ್ಳಲಿದ್ದಾರೆ.

English summary
Kannada Actor Vinay Rajkumar starrer 3rd Kannada Movie 'Ananthu versus Nusrath' first look poster is out. The movie is direted by sudhir shanbhag

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada