For Quick Alerts
  ALLOW NOTIFICATIONS  
  For Daily Alerts

  ನಾಳೆ 'ಚಕ್ರವ್ಯೂಹ' ಸಿನಿಮಾ ನೋಡ್ತೀರಾ? ಒಂದು ಸರ್ ಪ್ರೈಸ್ ಕಾದಿದೆ.!

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಚಕ್ರವ್ಯೂಹ' ನಾಳೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ.

  'ಚಕ್ರವ್ಯೂಹ' ಚಿತ್ರ ನೋಡಲು ನಾಳೆ ನೀವು ಚಿತ್ರಮಂದಿರಕ್ಕೆ ಭೇಟಿ ಕೊಟ್ರೆ, ನಿಮಗೆ ಒಂದು ಸರ್ಪ್ರೈಸ್ ಕಾದಿದೆ. ಅದೇನಪ್ಪಾ ಅಂದ್ರೆ, 'ಚಕ್ರವ್ಯೂಹ' ಚಿತ್ರದ ಜೊತೆಗೆ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ 'ರನ್ ಆಂಟನಿ' ಮೊಟ್ಟ ಮೊದಲ ಟ್ರೈಲರ್ ಕೂಡ ನಾಳೆ ಪ್ರದರ್ಶನ ಆಗುತ್ತಿದೆ. [ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ 'ರನ್ ಆಂಟನಿ' ತಂಡ]

  'ರನ್ ಆಂಟನಿ' ಚಿತ್ರದ ಟ್ರೈಲರ್ ರೆಡಿಯಾಗಿದ್ದು, 'ಚಕ್ರವ್ಯೂಹ' ಚಿತ್ರದೊಂದಿಗೆ ಪ್ರದರ್ಶನ ಮಾಡಲು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ನಿರ್ಧರಿಸಿದ್ದಾರೆ. [ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?]

  ಚಿತ್ರೀಕರಣ ಮುಗಿಸಿರುವ 'ರನ್ ಆಂಟನಿ' ಸಿನಿಮಾ ಮೇ ಅಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ಲವ್ ಸ್ಟೋರಿ ಜೊತೆ ಥ್ರಿಲ್ಲರ್ ಅಂಶಗಳಿರುವ 'ರನ್ ಆಂಟನಿ' ಚಿತ್ರಕ್ಕೆ ಚೊಚ್ಚಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ರಘು ಶಾಸ್ತ್ರಿ.

  'ರನ್ ಆಂಟನಿ' ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಗೆ ರುಕ್ಸಾರ್ ಮೀರ್ ಮತ್ತು ಸುಶ್ಮಿತಾ ಜೋಶಿ ನಾಯಕಿಯರು.[ವರ್ಷದ ನಂತರ 'ಚಕ್ರವ್ಯೂಹ' ಬೇಧಿಸಲು ಸಜ್ಜಾದ ಪವರ್ ಸ್ಟಾರ್]

  ಹಲವು ಕುತೂಹಲಗಳಿಗೆ ಕಾರಣವಾಗಿರುವ 'ರನ್ ಆಂಟನಿ' ಚಿತ್ರ ಹೇಗೆ ಮೂಡಿ ಬಂದಿದೆ ಅಂತ ಅಂದಾಜಿಸುವುದಕ್ಕೆ ನಾಳೆ ಮೊದಲ ಟ್ರೈಲರ್ ನೋಡಿ....

  English summary
  Kannada Actor Vinay Rajkumar starrer 'Run Antony' trailer will be screened for the first time during the release of Puneeth Rajkumar's 'Chakravyuha' on April 29th. 'Run Antony' is directed by 'Raghu Shastri'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X