»   » ಯೂಟ್ಯೂಬಲ್ಲಿ ಝೇಂಕರಿಸಿದ 'ಸಿದ್ದಾರ್ಥ' ಟ್ರೇಲರ್

ಯೂಟ್ಯೂಬಲ್ಲಿ ಝೇಂಕರಿಸಿದ 'ಸಿದ್ದಾರ್ಥ' ಟ್ರೇಲರ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ 'ದೊಡ್ಮನೆ' ಕುಟುಂಬದ ಒಂದೊಂದು ಕುಡಿ, ಚಿತ್ರರಂಗಕ್ಕೆ ಕಾಲಿಟ್ಟಾಗಲೂ ಗಾಂಧಿನಗರದ ನೆಲ ಅಲ್ಲಾಡಿದೆ. ನಟಸಾರ್ವಭೌಮ ಡಾ.ರಾಜ್, ನಂತ್ರ ಹ್ಯಾಟ್ರಿಕ್ ಹೀರೋ ಶಿವಣ್ಣ, ರಾಘಣ್ಣ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

ಹೀಗೆ, ಒಬ್ಬೊಬ್ಬರು ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗೆಲ್ಲಾ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ಇದೀಗ ಅಂತದ್ದೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ ಅಣ್ಣಾವ್ರ ಮರಿ ಕುಡಿ ವಿನಯ್ ರಾಜ್ ಕುಮಾರ್.

Kannada movie Siddhartha1

'ಸಿದ್ದಾರ್ಥ' ಚಿತ್ರದಿಂದ ಬಣ್ಣದ ಬದುಕಿಗೆ ಕಾಲಿಟ್ಟಿರುವ ವಿನಯ್ ರಾಜ್ ಕುಮಾರ್, ತೆರೆಮೇಲೆ ಹೇಗೆ ಅಬ್ಬರಿಸಬಹುದು ಅನ್ನುವುದನ್ನ ನೀವೀಗಾಗಲೇ ಚಿತ್ರದ ಟ್ರೇಲರ್ ನಲ್ಲಿ ನೋಡಿದ್ದೀರಾ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಿಲೀಸ್ ಆದ 'ಸಿದ್ದಾರ್ಥ' ಟ್ರೇಲರ್ ನ ಅದಾಗಲೇ ಐವತ್ತು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. [ಪೋಲಿ ಹುಡುಗನಾಗಿ ಎಂಟ್ರಿ ಕೊಟ್ಟ ವಿನಯ್ ರಾಜ್]

ಕೇವಲ ಹತ್ತು ದಿನಗಳಲ್ಲಿ ನವ ನಟನೊಬ್ಬನ ಚಿತ್ರದ ಟ್ರೇಲರ್ ನ ಅರ್ಧ ಲಕ್ಷಕ್ಕೂ ಹೆಚ್ಚು ಮಂದಿ ಕುತೂಹಲದಿಂದ ನೋಡಿದ್ದಾರೆ ಅಂದ್ರೆ, ಅದು ಸಾಮಾನ್ಯದ ಸಂಗತಿ ಅಲ್ಲ. ಮಗನನ್ನ ಬೆಳ್ಳಿತೆರೆ ಮೇಲೆ ನೋಡ್ಬೇಕು ಅಂತ ಕಾತರರಾಗಿದ್ದ ರಾಘಣ್ಣನಿಗೂ ಈ ಸುದ್ದಿ ಖುಷಿ ಕೊಟ್ಟಿದೆ.

Kannada movie Siddhartha2

ಅಭಿಮಾನಿ ದೇವರುಗಳ ಶ್ರೀರಕ್ಷೆ ವಿನಯ್ ಮೇಲಿರಲಿ ಅಂತ ಹೇಳುವ ರಾಘಣ್ಣ, ಸಿನಿಮಾ ರಿಲೀಸ್ ಆಗೋದಕ್ಕೆ ಕಾಯ್ತಿದ್ದಾರೆ. ವಿನಯ್ ಜೊತೆ ಅಪೂರ್ವ ಜೋಡಿಯಾಗಿ ನಟಿಸಿರುವ 'ಸಿದ್ದಾರ್ಥ' ಕಂಪ್ಲೀಟ್ ಮ್ಯೂಸಿಕಲ್ ಲವ್ ಸ್ಟೋರಿ. [ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ]

ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡುಗಳೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. 'ಮಿಲನ' ಪ್ರಕಾಶ್ ನಿರ್ದೇಶನ ಮಾಡಿರುವ 'ಸಿದ್ದಾರ್ಥ' ಸದ್ಯದಲ್ಲೇ ತೆರೆಮೇಲೆ ಬರಲಿದೆ. 'ಗಿವ್ ಮೀ ಎ ಬ್ರೇಕ್' ಅಂತ ಕೈಲಿ ಗಿಟಾರ್ ಹಿಡಿದು ಹಾಡು ಹಾಡಿರುವ ಸಿದ್ದಾರ್ಥನಿಗೆ ಅರ್ಧ ಲಕ್ಷ ಜನ ಈಗಾಗಲೇ ಮೆಚ್ಚಿದ್ದಾಗಿದೆ. ಸಿನಿಮಾ ರಿಲೀಸ್ ಆದಮೇಲೆ ಕೋಟಾಂತರ ಕನ್ನಡಿಗರು ಶಿಳ್ಳೆ ಹೊಡಿಬಹುದಾ..?! (ಏಜೆನ್ಸೀಸ್)

English summary
Raghavendra Rajkumar's son Vinay Rajkumar Debut movie 'Siddhartha' trailer has crossed 50,000 views on YouTube. It's an fantastic opening for the movie trailer. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada