For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಮೊಮ್ಮಗ ವಿನಯ್ ರಾಜ್‌ಕುಮಾರ್ ಕೈಯಲ್ಲಿ ಮಚ್ಚು: 'ಪೆಪೆ' ಟೀಸರ್ ಭಯಾನಕ

  |

  ಕೆಲವು ದಿನಗಳಿಂದ ವಿನಯ್ ರಾಜ್‌ಕುಮಾರ್ ಸಿನಿಮಾಗಳು ಸೆಟ್ಟೇರುತ್ತಿದ್ದವು. ಆ ಸಿನಿಮಾಗಳ ಬಗ್ಗೆ ಒಂದೇ ಒಂದು ಸುದ್ದಿ ಹೊರಬರುತ್ತಿರಲಿಲ್ಲ. ಅಸಲಿಗೆ ರಾಘವೇಂದ್ರ ರಾಜ್‌ಕುಮಾರ್ ಹಿರಿ ಮಗ ಏನು ಮಾಡುತ್ತಿದ್ದಾರೆ ಅನ್ನುವ ಸುಳಿವೇ ಇರಲಿಲ್ಲ. ಮೂರರಿಂದ ನಾಲ್ಕು ಸಿನಿಮಾಗಳು ಕೈಯಲ್ಲಿದ್ದರೂ ವಿನಯ್ ಆ ಸಿನಿಮಾ ಎಲ್ಲೂ ಮಾತಾಡುತ್ತಿರಲಿಲ್ಲ. ಆದ್ರೀಗ ಒಂದೇ ಟೀಸರ್ ಮೂಲಕ ಅದೆಲ್ಲಕ್ಕೂ ಉತ್ತರ ಕೊಟ್ಟಿದ್ದಾರೆ. ಕಳೆದೆರಡು ದಿನಗಳಿಂದ ವಿನಯ್ ನಟಿಸಿದ ಸಿನಿಮಾ ಟೀಸರ್ ಬೇಜಾನ್ ಸದ್ದು ಮಾಡುತ್ತಿದೆ.

  ವಿನಯ್​ ರಾಜ್​ಕುಮಾರ್​ ರಗಡ್ ಅವತಾರಕ್ಕೆ ಸ್ಯಾಂಡಲ್‌ವುಡ್ ಬೆಚ್ಚಿಬಿದ್ದಿದೆ. ಇದೂವರೆಗೂ ಲವರ್ ಬಾಯ್ ಆಗಿ ಕಂಡಿದ್ದ ವಿನಯ್ ರಾಜ್‌ಕುಮಾರ್ ಈಗ ಮಾಸ್ ಲುಕ್ ಕೊಟ್ಟಿದ್ದಾರೆ. ಈ ಲುಕ್ ನೋಡಿದವರು ತಲೆಕೆಡಿಸಿಕೊಂಡಿದ್ದಾರೆ. ಅಂದ ಹಾಗೆ ಆ ಸಿನಿಮಾ ಯಾವುದು ಅಂತಿರಾ? ಅದುವೇ 'ಪೆಪೆ'. ಈ ಸಿನಿಮಾ ಟೈಟಲ್, ಟೀಸರ್ ಎಲ್ಲವೂ ಪ್ರೇಕ್ಷಕರನ್ನು ಸೆಳೆಯುತ್ತಿದೆ. 'ಪೆಪೆ' ಟೀಸರ್ ನೋಡಿ ಸಿನಿಮಾ ಮಂದಿ ಶಾಕ್ ಆಗಿದ್ದಾರೆ.

  ವಿನಯ್ ರಾಜ್‌ಕುಮಾರ್ ಸಿನಿಮಾ 'ಅಂದೊಂದಿತ್ತು ಕಾಲ' ಟೈಟಲ್ ಕೇಳಿ ಅಪ್ಪು ಹಾಡು ಹಾಡಿದ್ದೇಕೆ?ವಿನಯ್ ರಾಜ್‌ಕುಮಾರ್ ಸಿನಿಮಾ 'ಅಂದೊಂದಿತ್ತು ಕಾಲ' ಟೈಟಲ್ ಕೇಳಿ ಅಪ್ಪು ಹಾಡು ಹಾಡಿದ್ದೇಕೆ?

   ಮಚ್ಚು ಹಿಡಿದು ಬಂದ ವಿನಯ್ ರಾಜ್‌ಕುಮಾರ್

  ಮಚ್ಚು ಹಿಡಿದು ಬಂದ ವಿನಯ್ ರಾಜ್‌ಕುಮಾರ್

  ವಿನಯ್ ರಾಜ್‌ಕುಮಾರ್ ಹಿಂದೆ ಎಂದಿಗೂ ಇಂತಹ ಲುಕ್ ಕೊಟ್ಟಿಲ್ಲ. ಕೈಯಲ್ಲಿ ಮಚ್ಚು ಹಿಡಿದಿದ್ದೂ ಇದೇ ಮೊದಲು. ದೊಡ್ಮನೆ ಕುಟುಂಬದಿಂದ ಬರುವ ಸಿನಿಮಾಗಳು ಲಾಂಗ್ ಮಚ್ಚು ಸಿನಿಮಾಗಳಿಂದ ದೂರ ಉಳಿದಿದ್ದರು. ಶಿವಣ್ಣ ಎವರ್‌ಗ್ರೀನ್ ಸಿನಿಮಾ 'ಓಂ' ಮೂಲಕ ಲಾಂಗ್ ಹಿಡಿದಿದ್ದರೆ, ವಿನಯ್ ರಾಜ್‌ಕುಮಾರ್ 'ಪೆಪೆ' ಮೂಲಕ ಮಚ್ಚು ಹಿಡಿದು ಬಂದಿದ್ದಾರೆ. 'ಪೆಪೆ' ಟೈಟಲ್, ಮಾಸ್ ಲುಕ್, ರಕ್ತ ಚರಿತ್ರೆಯನ್ನು ಹೇಳುವ ಹಿನ್ನೆಲೆ ಧ್ವನಿ, ವಿನಯ್ ರಾಜ್‌ಕುಮಾರ್ ಎಂಟ್ರಿ ಎಲ್ಲವೂ ಟೀಸರ್‌ನಲ್ಲಿ ತೋರಿಸಿದ್ದು, ಫ್ಯಾನ್ಸ್‌ಗೆ ಕಿಕ್ ಕೊಡುತ್ತಿದೆ.

  ಅಣ್ಣಾವ್ರ ಮನೆ ಇಬ್ಭಾಗವಾಗಿದ್ದು ಏಕೆ? ರಾಘವೇಂದ್ರ ರಾಜ್‌ಕುಮಾರ್ ಕೊಟ್ಟರು ಕಾರಣಅಣ್ಣಾವ್ರ ಮನೆ ಇಬ್ಭಾಗವಾಗಿದ್ದು ಏಕೆ? ರಾಘವೇಂದ್ರ ರಾಜ್‌ಕುಮಾರ್ ಕೊಟ್ಟರು ಕಾರಣ

   ವಿನಯ್ ರಾಜ್‌ಕುಮಾರ್ ಈಗ ಮಾಸ್

  ವಿನಯ್ ರಾಜ್‌ಕುಮಾರ್ ಈಗ ಮಾಸ್

  ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಹಿರಿಮಗ ವಿನಯ್ ಸ್ಯಾಂಡಲ್‌ವುಡ್‌ ಎಂಟ್ರಿನೇ ಕ್ಲಾಸ್ ಆಗಿತ್ತು. ಲವ್ ಸ್ಟೋರಿ ಮೂಲಕ ಪ್ರೇಕ್ಷಕರ ಮನಮೆಚ್ಚಿಸಲು ಮುಂದಾಗಿದ್ದರು. ಮೊದಲ ಸಿನಿಮಾ 'ಸಿದ್ಧಾರ್ಥ'ದಿಂದ ಹಿಡಿದು, 'ರನ್ ಆಂಟನಿ', 'ಅನಂತು Vs ನುಸ್ರತ್'ವರೆಗೂ ಕ್ಲಾಸ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದೂವರೆಗೂ ಲವರ್ ಬಾಯ್ ಆಗಿ ಕಂಡಿದ್ದ ವಿನಯ್ 'ಪೆಪೆ' ಮೂಲಕ ಮಾಸ್ ಹೀರೋ ಪಟ್ಟಿಗೆ ಸೇರಿಕೊಂಡಿದ್ದಾರೆ. ಲೋಕಲ್ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದು ನಿಂತಿದ್ದಾರೆ.

   'ಪೆಪೆ'ಗೂ ಮಲೆನಾಡಿಗೂ ಏನು ನಂಟು

  'ಪೆಪೆ'ಗೂ ಮಲೆನಾಡಿಗೂ ಏನು ನಂಟು

  ಗ್ಯಾಂಗ್‌ಸ್ಟರ್ ಲುಕ್ ಕೊಟ್ಟಿರುವ ವಿನಯ್ ರಾಜ್‌ಕುಮಾರ್ 'ಪೆಪೆ' ಟೀಸರ್ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ದೃಶ್ಯಗಳು ಮಾಸ್ ಆಗಿದ್ದರೆ. ಆ ಮಾಸ್ ಫೀಲ್ ಕೊಡುತ್ತಿರುವುದು ಡೈಲಾಗ್ಸ್‌. ಅಂದಹಾಗೇ 'ಪೆಪೆ' ಸಿನಿಮಾ ಮಲೆನಾಡಿನಲ್ಲಿ ನಡೆಯುವ ಕತೆಯಾಗಿದೆ. ಹಳ್ಳಿ ಸೊಗಡಿನ ಈ ಆಕ್ಷನ್ ಸಿನಿಮಾ ವಿನಯ್ ರಾಜ್‌ಕುಮಾರ್ ವೃತ್ತಿ ಬದುಕಿಗೆ ಹೊಸ ತಿರುವು ನೀಡಲಿದೆ ಎಂದು ಸ್ಯಾಂಡಲ್‌ವುಡ್ ಭವಿಷ್ಯ ನುಡಿಯುತ್ತಿದೆ. ವಿನಯ್ ಜೊತೆ ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಹೀಗೆ ಸಾಕಷ್ಟು ಮಂದಿ ಕಲಾವಿದರು ನಟಿಸಿದ್ದಾರೆ. 'ಪೆಪೆ'ಗೆ ಶ್ರೀಲೇಶ್ ಎಸ್ ನಾಯರ್ ಆಕ್ಷನ್ ಕಟ್ ಹೇಳಿದ್ದಾರೆ.

  'ಖಡಕ್ ಹಳ್ಳಿ ಹುಡುಗರು': ರಾಘವೇಂದ್ರ ರಾಜಕುಮಾರ್ ದನಿಯಲ್ಲಿ ಕನ್ನಡಾಭಿಮಾನದ ಹಾಡು'ಖಡಕ್ ಹಳ್ಳಿ ಹುಡುಗರು': ರಾಘವೇಂದ್ರ ರಾಜಕುಮಾರ್ ದನಿಯಲ್ಲಿ ಕನ್ನಡಾಭಿಮಾನದ ಹಾಡು

   ವಿನಯ್ ಕೈಯಲ್ಲಿವೆ 4 ಸಿನಿಮಾ

  ವಿನಯ್ ಕೈಯಲ್ಲಿವೆ 4 ಸಿನಿಮಾ

  ವಿನಯ್ ರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ಪೆಪೆ' ಸೇರಿದಂತೆ ನಾಲ್ಕು ಸಿನಿಮಾಗಳಿವೆ. ಇದರ ಜೊತೆ 'ಟೆನ್', 'ಗ್ರಾಮಾಯಣ', 'ಅಂದೊಂದಿತ್ತು ಕಾಲ', ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿ ಇವೆ. ಲಾಕ್‌ಡೌನ್ ಹಾಗೂ ಕೊರೊನಾ ಕಾರಣದಿಂದ ಸಿನಿಮಾ ಶೂಟಿಂಗ್ ತಡವಾಗಿದ್ದು, ಈ ಎಲ್ಲಾ ಸಿನಿಮಾಗಳು ವಿನಯ್ ಕೆರಿಯರ್‌ಗೆ ಹೊಸ ಇಮೇಜ್ ಕೊಡಲಿವೆ ಎಂದು ಅಂದಾಜಿಸಲಾಗುತ್ತಿದೆ. 'ಪೆಪೆ' ಟೀಸರ್ ಹೊಸ ಭರವಸೆ ಮೂಡಿಸಿದ್ದು, ಸಿನಿಮಾ ಗೆದ್ದರೆ ವಿನಯ್ ಭವಿಷ್ಯವೇ ಬದಲಾಗುತ್ತೆ.

  English summary
  Vinay Rajkumar starrer Pepe Kannada movie teaser and interesting facts. For the first time Vinay Rajkumar holding long in his hand.
  Friday, February 18, 2022, 17:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X