»   » ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?

ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಮೊಮ್ಮಗ, ನಟ-ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಸುಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ 'ರನ್ ಆಂಟನಿ' ಮುಹೂರ್ತ ಮುಗಿದಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿನ್ನೆ (ಡಿಸೆಂಬರ್ 14) 'ರನ್ ಆಂಟನಿ' ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. [ವಿನಯ್ 2ನೇ ಚಿತ್ರ 'R..The King' ರಾಘಣ್ಣ ಮುಂದೂಡಿದ್ಯಾಕೆ?]

ಚೊಚ್ಚಲ ಸಿನಿಮಾ 'ಸಿದ್ದಾರ್ಥ' ಬಿಡುಗಡೆ ಆದ ಸುಮಾರು 10 ತಿಂಗಳ ಲಾಂಗ್ ಗ್ಯಾಪ್ ನಂತರ 'ರನ್ ಆಂಟನಿ' ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಸ್ಪೆಷಾಲಿಟೀಸ್ ಏನು ಅಂತ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಅದ್ದೂರಿ ಮುಹೂರ್ತ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ.ರಾಜ್ ಕುಮಾರ್ ಅರ್ಪಿಸುವ ಶ್ರೀ ವಜ್ರೇಶ್ವರಿ ಹಾಸ್ಪಿಟಾಲಿಟೀಸ್ ಬ್ಯಾನರ್ ನಲ್ಲಿ 'ರನ್ ಆಂಟನಿ' ಸಿನಿಮಾ ರೆಡಿಯಾಗಲಿದೆ. ಅಂದ್ಮೇಲೆ ಸಿನಿಮಾ ಅದ್ದೂರಿಯಾಗಿ ಮೂಡಿ ಬರುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ಸಾಕ್ಷಿ ಎಂಬಂತೆ 'ರನ್ ಆಂಟನಿ' ಚಿತ್ರದ ಮುಹೂರ್ತ ಕೂಡ ಧಾಂ ಧೂಂ ಆಗಿ ನಡೆಯಿತು. [ಆರ್ ದಿ ಕಿಂಗ್ ನಿರ್ದೇಶನಕ್ಕೆ ಪ್ರೇಮ್ ಸಂಭಾವನೆಯೆಷ್ಟು?]

ಮುಹೂರ್ತದಲ್ಲಿ ತಾರೆಯರ ದಂಡು!

ವಿನಯ್ ರಾಜ್ ಕುಮಾರ್ ಗೆ ಶುಭ ಹಾರೈಸುವುದಕ್ಕೆ ತಾರೆಯರ ದಂಡೇ ಕಂಠೀರವ ಸ್ಟುಡಿಯೋದಲ್ಲಿ ನೆರೆದಿತ್ತು. ನವರಸ ನಾಯಕ ಜಗ್ಗೇಶ್ ಕೂಡ ವಿನಯ್ ಗೆ ವಿಶ್ ಮಾಡಿದರು. ['ರನ್ ಆಂಟನಿ' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಡಾ.ರಾಜ್ ಮೊಮ್ಮಗ.!]

ಯುವ ನಿರ್ದೇಶಕ ರಘು ಶಾಸ್ತ್ರಿ

'ರನ್ ಆಂಟನಿ' ಚಿತ್ರದ ನಿರ್ದೇಶಕ ರಘು ಶಾಸ್ತ್ರಿಗಿದು ಚೊಚ್ಚಲ ಸಿನಿಮಾ. ಈ ಹಿಂದೆ ಆಡ್ ಫಿಲ್ಮ್ಸ್ ಮಾಡುತ್ತಿದ್ದ ರಘು ಶಾಸ್ತ್ರಿ ಕೆಲವು ಕಥೆಗಳನ್ನ ರೆಡಿಮಾಡಿಟ್ಟುಕೊಂಡಿದ್ರಂತೆ. ಒಮ್ಮೆ ವಿನಯ್ ರಾಜ್ ಕುಮಾರ್ ಭೇಟಿ ಆದಾಗ, ಅವರಿಗೆ ಒಂದ್ ಕಥೆ ಹೇಳಿದ್ರಂತೆ. ರಘು ಶಾಸ್ತ್ರಿ ಹೇಳಿದ ಕಥೆ ವಿನಯ್ ಗೆ ಇಷ್ಟವಾಗ್ಬಿಟ್ಟಿದೆ. ಅದರ ರಿಸಲ್ಟ್ 'ರನ್ ಆಂಟನಿ' ಮುಹೂರ್ತ!

ಕನಸು ನನಸಾದ ಘಳಿಗೆ

ನಿರ್ದೇಶಕ ರಘು ಶಾಸ್ತ್ರಿಗಿದು ಕನಸು ನನಸಾದ ಘಳಿಗೆ. ''ಡಾ.ರಾಜ್ ಕುಮಾರ್ ರವರ ಪ್ರೊಡಕ್ಷನ್ ಹೌಸ್ ನಲ್ಲಿ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಇಂತಹ ಚಾನ್ಸ್ ಯಾರಿಗೆ ಸಿಗುತ್ತೆ ಹೇಳಿ'' ಅಂತಾರೆ ರಘು ಶಾಸ್ತ್ರಿ.

ಶಿವರಾಜ್ ಕುಮಾರ್ ಕ್ಲಾಪ್

ವಿನಯ್ ರಾಜ್ ಕುಮಾರ್ ರವರ 'ರನ್ ಆಂಟನಿ' ಸಿನಿಮಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಲಾಪ್ ಮಾಡಿದರು.

ಪುನೀತ್ ಕ್ಯಾಮರಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಯಾಮರಾ ಸ್ವಿಚ್ ಆನ್ ಮಾಡಿದರು.

ವಿನಯ್ ರಾಜ್ ಕುಮಾರ್ ಪಾತ್ರವೇನು?

'ರನ್ ಆಂಟನಿ' ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಗೆ ವಿಭಿನ್ನ ಪಾತ್ರವಿದೆ. ''ಇಂತಹ ಪಾತ್ರ ಸಿಕ್ಕಿರುವುದು ನನಗೆ ಖುಷಿ ಇದೆ. ಮುಂಬೈನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿ ಬಂದಿರುವುದು ಈ ಪಾತ್ರಕ್ಕೆ ತುಂಬಾ ಸಹಾಯವಾಗುತ್ತದೆ. ನನ್ನ ಲುಕ್ಸ್ ನಲ್ಲಿ ಸ್ವಲ್ಪ ಎಕ್ಸ್ ಪೆರಿಮೆಂಟ್ ಮಾಡಿದ್ದೀವಿ. ಆಕ್ಷನ್ ಕೂಡ ಸಿನಿಮಾದಲ್ಲಿದೆ. ಇದು ಲವ್ ಸ್ಟೋರಿ ಕಮ್ ಸಸ್ಪೆನ್ಸ್, ಥ್ರಿಲ್ಲರ್. ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ಭಾವನೆ ಇದೆ'' ಅಂದ್ರು ವಿನಯ್ ರಾಜ್ ಕುಮಾರ್. [ಅರೆ ವಾಹ್! ಜಾನ್ ಜೊತೆ 3G ಮೆಗಾ ಪವರ್ ಸ್ಟಾರ್]

ಸಿನಿಮಾದಲ್ಲಿ ಇಬ್ಬರು ಹೀರೋಯಿನ್ಸ್!

ಬರೋಬ್ಬರಿ 500 ಫೋಟೋಗಳನ್ನ ನೋಡಿದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಮತ್ತು ರಘು ಶಾಸ್ತ್ರಿ ರುಕ್ಶಾರ್ ಮಿರ್ ಮತ್ತು ಸುಶ್ಮಿತಾ ಜೋಶಿ ರವರನ್ನ 'ರನ್ ಆಂಟನಿ' ಸಿನಿಮಾಗೆ ಸೆಲೆಕ್ಟ್ ಮಾಡಿದ್ದಾರೆ. ರುಕ್ಶಾರ್ ಮಿರ್ ಈಗಾಗಲೇ ಕನ್ನಡದ 'ಕಟ್ಟೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೂಲತಃ ಉತ್ತರ ಭಾರತದವರಾದರೂ, ಬೆಂಗಳೂರಿನಲ್ಲೇ ವಾಸವಿರುವ ಕಾರಣ ರುಕ್ಶಾರ್ ಗೆ ಕನ್ನಡ ಅರ್ಥವಾಗುತ್ತೆ. ಇನ್ನೂ ಡಾರ್ಜಿಲಿಂಗ್ ಬೆಡಗಿ ಸುಶ್ಮಿತಾಗಿದು ಮೊದಲ ಸಿನಿಮಾ.

ಟ್ರೈಯಾಂಗಲ್ ಲವ್ ಸ್ಟೋರಿ ಅಲ್ಲ!

ಇಬ್ಬರು ಹೀರೋಯಿನ್ ಗಳಿದ್ದರೂ 'ರನ್ ಆಂಟನಿ' ಟ್ರೈಯಾಂಗಲ್ ಲವ್ ಸ್ಟೋರಿ ಇರುವ ಸಿನಿಮಾ ಅಲ್ಲ. ಇದರಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಎಲಿಮೆಂಟ್ ಜಾಸ್ತಿ. ಇಬ್ಬರು ನಾಯಕಿಯರಿಗೂ ಸಮನಾದ ಪಾತ್ರವಿದೆ.

ನಿರ್ಮಾಪಕರಾದ ಗುರು ರಾಜ್ ಕುಮಾರ್!

ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, 'ರನ್ ಆಂಟನಿ' ಮೂಲಕ ರಾಜ್ ಕುಟುಂಬದ ಮತ್ತೊಂದು ಕುಡಿ (ರಾಘವೇಂದ್ರ ರಾಜ್ ಕುಮಾರ್ ದ್ವಿತೀಯ ಪುತ್ರ) ಗುರು ರಾಜ್ ಕುಮಾರ್ 'ನಿರ್ಮಾಪಕ'ರಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. [ವಿನಯ್ ರಾಜ್ 'ರನ್ ಆಂಟನಿ'ಗೆ ನಿರ್ಮಾಪಕರು ಯಾರು ಗೊತ್ತಾ?]

ಮಣಿಕಾಂತ್ ಖದ್ರಿ ಸಂಗೀತ

'ರನ್ ಆಂಟನಿ' ಸಿನಿಮಾಗೆ ಮಣಿಕಾಂತ್ ಖದ್ರಿ ಸಂಗೀತ ನೀಡುತ್ತಿದ್ದಾರೆ.

ಗಾನ ಸುಧೆ ಹರಿಸಲಿದ್ದಾರೆ ಪುನೀತ್ ರಾಜ್ ಕುಮಾರ್

'ರನ್ ಆಂಟನಿ' ಚಿತ್ರದ ಹಾಡೊಂದರ ಟ್ಯೂನ್ ಕೇಳಿ ತಾವೇ ಹಾಡುವುದಾಗಿ ಪುನೀತ್ ರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ.

'ರನ್ ಆಂಟನಿ' ರಿಲೀಸ್ ಯಾವಾಗ ಗೊತ್ತಾ?

ಈ ತಿಂಗಳಾಂತ್ಯಕ್ಕೆ 'ರನ್ ಆಂಟನಿ' ಚಿತ್ರದ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷದ ಏಪ್ರಿಲ್ ನಲ್ಲಿ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ 'ರನ್ ಆಂಟನಿ' ರಿಲೀಸ್ ಆಗಲಿದೆ.

English summary
Kanteerava Studio, Bengaluru witnessed the grand Muhoortha of Kannada Actor Vinay Rajkumar starrer 'Run Antony'. The film is directed by Debutant Raghu Shastry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada