»   » ಪೊಲೀಸರಿಗೆ ಮಾತ್ರ 'ಸಿದ್ದಾರ್ಥ' ಸ್ಪೆಷಲ್ ಶೋ

ಪೊಲೀಸರಿಗೆ ಮಾತ್ರ 'ಸಿದ್ದಾರ್ಥ' ಸ್ಪೆಷಲ್ ಶೋ

Posted By:
Subscribe to Filmibeat Kannada

ರಾಜ್ಯದಾದ್ಯಂತ ಮೂಲೆ ಮೂಲೆಯಲ್ಲೂ 'ಸಿದ್ದಾರ್ಥ'ನ ಅಬ್ಬರ ಜೋರಾಗಿದೆ. ರಿಲೀಸ್ ಆದ್ಮೇಲೆ ಕರ್ನಾಟಕದ ಎಲ್ಲಾ ಕಡೆ ಭರ್ಜರಿ ಪ್ರಚಾರ ಮಾಡುತ್ತಿರುವ 'ಸಿದ್ದಾರ್ಥ' ಚಿತ್ರತಂಡ, ನಿನ್ನೆಯಷ್ಟೇ ಟ್ರಾಫಿಕ್ ಡೇ ಪ್ರಯುಕ್ತ ಕಬ್ಬನ್ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.

ನಟ ರಮೇಶ್ ಅರವಿಂದ್, ನಿರ್ಮಾಪಕ-ನಟ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಅಪೂರ್ವ ಸೇರಿದಂತೆ ಇಡೀ 'ಸಿದ್ದಾರ್ಥ' ತಂಡ ಸ್ವಂತ ಇಚ್ಛೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. [ವಿನಯ್ ಈಗ 'ಮೆಗಾ 3G ಪವರ್ ಸ್ಟಾರ್']


Vinay Rajkumar starrer Siddhartha special show for Police Officers

ಇದರೊಂದಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಗೂ ಮಾತನಾಡಿದ ರಾಘಣ್ಣ, ಪೊಲೀಸರಿಗಾಗಿ ಒಂದು ವಿಶೇಷ ಉಡುಗೊರೆ ನೀಡುವುದಕ್ಕೆ ನಿರ್ಧರಿಸಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಕ್ರೈಂ, ಟೆನ್ಷನ್ ನಲ್ಲೇ ಕಾಲ ಕಳೆಯುತ್ತಿರುವ ಪೊಲೀಸರಿಗೆ ಕೊಂಚ ಮನರಂಜನೆ ಸಿಗಬೇಕು ಅಂತ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ 'ಸಿದ್ದಾರ್ಥ' ಚಿತ್ರದ ವಿಶೇಷ ಪ್ರದರ್ಶನವನ್ನ ಹಮ್ಮಿಕೊಂಡಿದ್ದಾರೆ. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]


ಇದೇ ಶನಿವಾರ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಬೆಳ್ಳಗ್ಗೆ 10.15 ಕ್ಕೆ (ಮಾರ್ನಿಂಗ್ ಶೋ) ಪೊಲೀಸರಿಗಾಗಿ ಸ್ಪೆಷಲ್ ಶೋ ನಡೆಯಲಿದೆ. ಪೊಲೀಸರು ಅವರ ಕುಟುಂಬದ ಸಮೇತ 'ಸಿದ್ದಾರ್ಥ' ಚಿತ್ರವನ್ನ ವೀಕ್ಷಿಸಬಹುದು. ['ಸಿದ್ದಾರ್ಥ'ನಿಗಾಗಿ ಫಿನ್ ಲ್ಯಾಂಡ್ ನಿಂದ ಬಂದ ಮಿ.ಹೆರ್ರಿ!]


Vinay Rajkumar starrer Siddhartha special show for Police Officers

ಪೊಲೀಸರ ಬಗ್ಗೆ ಅಪಾರ ಗೌರವ ಹೊಂದಿರುವ ರಾಜ್ ಕುಟುಂಬ, ಪೊಲೀಸರು ತಮ್ಮ ಕುಟುಂಬದೊಂದಿಗೆ ಕೆಲ ಹೊತ್ತಾದರೂ ಸಮಯ ಕಳೆಯಲಿ ಅಂತ ಈ ಪ್ರಯತ್ನ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ ಅಂತ ನೋಡೋಣ. (ಫಿಲ್ಮಿಬೀಟ್ ಕನ್ನಡ)

English summary
Actor-Producer Raghavendra Rajkumar is hosting a special show of 'Siddhartha' for all the Police Officers and their family. Venue-Kapali Theater, Bangalore. Time-10.30 A.M, Saturday (Feb 7th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada