»   » ಅಸಹಾಯಕರ ಸಾಧನೆಗೆ ಸ್ಫೂರ್ತಿಯಾಗಲಿದೆ 'ಜೋಶಿಲೇ'.!

ಅಸಹಾಯಕರ ಸಾಧನೆಗೆ ಸ್ಫೂರ್ತಿಯಾಗಲಿದೆ 'ಜೋಶಿಲೇ'.!

Posted By:
Subscribe to Filmibeat Kannada

ಆರ್ ಜೆ ವಿನಾಯಕ್ ಜೋಶಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ವೆಬ್ ಸೀರಿಸ್ ಶುರು ಮಾಡಿರುವುದು ಗೊತ್ತಿರುವ ವಿಚಾರ. 'ಜೋಶಿಲೇ' ಎಂಬ ಹೆಸರಿನಲ್ಲಿ ಸ್ಫೂರ್ತಿದಾಯಕವಾದ ಕಥೆಗಳ ಮೂಲಕ ವೆಬ್ ಸೀರಿಸ್ ವೊಂದನ್ನ ತಯಾರಿಸುತ್ತಿದ್ದು, ಈಗ ಟ್ರೈಲರ್ ಬಿಡುಗಡೆಯಾಗಿದೆ.

ವಿಶೇಷ ಅಂದ್ರೆ 5 ವಿಶೇಷವಾದ ಕಥೆಗಳನ್ನೊಳಗೊಂಡ ವೆಬ್ ಸೀರಿಸ್ ಇದಾಗಿದ್ದು, ಎಲ್ಲವೂ ನೋಡುಗರಿಗೆ ಸ್ಪೂರ್ತಿ ನೀಡಲಿದೆ. ಸದ್ಯ, ರಿಲೀಸ್ ಆಗಿರುವ 'ಜೋಶಿಲೇ' ಟ್ರೈಲರ್ ಯ್ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 9ನೇ ಸ್ಥಾನದಲ್ಲಿದೆ.

Vinayak joshis 'Joshelay' Webseries tariler release

''ಅಸ್ಪಷ್ಟತೆ, ಭಯ, ಜೀವನ ಏಕತಾನತೆಯಿಂದ ಬೇಸತ್ತ ಯುವಕನೋರ್ವ ಇದೆಲ್ಲದರಿಂದ ದೂರ ಹೋಗಲು ಬಯಸುವನು. ಇದಕ್ಕಾಗಿ ಆತ ಹುಡುಕುವ ಹಾದಿ ಓಡುವುದು. ತನ್ನ ಈ ಓಟದ ಪಯಣದಲ್ಲಿ ಆತನಿಗೆ ಕೆಲವು ವ್ಯಕ್ತಿಗಳ ಒಡನಾಟ ಸಿಗುವುದು. ಈ ವ್ಯಕ್ತಿಗಳು ತಂತಮ್ಮ ದೌರ್ಬಲ್ಯಗಳನ್ನು ಮೀರಿ ಜೀವನದಲ್ಲಿ ಒಂದು ಉತ್ಕೃಷ್ಟ ಸ್ಥಾನವನ್ನು ಅಲಂಕರಿಸಿರುವರು. ಇವರ ಪರಿಚಯದಿಂದ ಪ್ರೇರಣೆ ಪಡೆಯುವ ಯುವಕ ತನ್ನ ದೌರ್ಬಲ್ಯ, ಭಯಗಳನ್ನು ಮೆಟ್ಟಿ ನಿಲ್ಲುವ ಕತೆಯೇ 'ಜೋಶಿಲೇ'' ಎನ್ನುತ್ತಾರೆ ನಿರ್ದೇಶಕರು

ಅಂದ್ಹಾಗೆ, ಈ ವೆಬ್ ಸೀರಿಸ್ ಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವುದು ವಿನಾಯಕ್ ಜೋಶಿ. 'ಜೋಶಿಲೇ' ವೆಬ್ ಸೀರಿಸ್ 'ಸಖತ್ ಸ್ಟುಡಿಯೋ' ಯೂಟ್ಯೂಬ್ ಚಾನೆಲ್ ಮೂಲಕ ಹೊರಬರಲಿದೆ.

'ಜೋಶಿಲೇ' ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
R J Vinayak joshi Directional 'Joshelay' Web series tariler release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X