For Quick Alerts
  ALLOW NOTIFICATIONS  
  For Daily Alerts

  ಏಕ್ ಥಾ ಟೈಗರ್ ಅಲ್ಲಪ್ಪೋ ಇದು ಮರಿ ಟೈಗರ್ ಹ್ಞಾಂ

  By Rajendra
  |

  ಸಲ್ಮಾನ್ ಖಾನ್ ಅಭಿನಯದ 'ಏಕ್ ಥಾ ಟೈಗರ್' ಆಟ ಮುಗಿದಿದೆ. ಇನ್ನೇನಿದ್ದರೂ 'ಮರಿ ಟೈಗರ್' ಆಟ ಶುರುವಾಗುತ್ತಿದೆ. ಇದು ಅಂತಿಂಥ ಮರಿ ಟೈಗರ್ ಅಲ್ಲ. ಜಿಂಕೆ ಮರಿ ಹಿಂದೆ ಬಿದ್ದ ಟೈಗರ್. ಟೈಗರ್ ಪ್ರಭಾಕರ್ ಅವರ ಪುತ್ರ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಚಿತ್ರವಿದು.

  'ಮರಿ ಟೈಗರ್' ಚಿತ್ರ ಪಕ್ಕಾ ಆಕ್ಷನ್ ಬೇಸ್ಡ್ ಲವ್ ಸ್ಟೋರಿ. ದರ್ಶನ್, ಸುದೀಪ್ ಅವರಿಗೆ ಆಕ್ಷನ್ ಇಮೇಜ್ ನೀಡಿದ ಪಿಎನ್ ಸತ್ಯಾ ನಿರ್ದೇಶಿಸುತ್ತಿರುವ ಚಿತ್ರವನ್ನು ರಮೇಶ್ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಅಜಯ್ ಕುಮಾರ್ ಅವರದು.

  ಎಂಬತ್ತರ ದಶಕದಲ್ಲಿ ಪ್ರಭಾಕರ್ ಅವರು 'ಟೈಗರ್' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಅವರ ಪುತ್ರ ಮರಿ ಟೈಗರ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಕಥೆಗಳನ್ನು ರೂಪಿಸಿದ್ದ ಅಜಯ್ ಕುಮಾರ್ ಈ ಬಾರಿ ತಮ್ಮ ಟ್ರಾಕ್ ಬದಲಾಯಿಸಿ ಅಪ್ಪಟ ಕಮರ್ಶಿಯಲ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ.

  ಶೇಕಡ ಮೂವತ್ತರಷ್ಟು ಕತೆ ರೈಲ್ವೇ ಸ್ಟೇಷನ್ ಬ್ಯಾಕ್ ಡ್ರಾಪ್ ನಲ್ಲಿ ನಡೆಯುತ್ತದೆ. ಚಿತ್ರದ ನಾಯಕ ಅನ್ಯಾಯದ ವಿರುದ್ಧ ಹೋರಾಡುತ್ತಾನೆ. ಬೆಂಗಳೂರು ಮತ್ತು ಮೈಸೂರು ರೈಲ್ವೇ ಸ್ಟೇಷನ್ ನ ಸ್ಕ್ರಾಪ್ ಬೋಗಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರು ಫೈಟ್ ಗಳು ಒಂದು ಚೇಸಿಂಗ್ ಸೀನ್ ಇರುತ್ತದೆ.

  'ಚಿಂಗಾರಿ' ಚಿತ್ರದಲ್ಲಿ ನಾಯಕಿಯ ತಂಗಿ ಪಾತ್ರ ಪೋಷಿಸಿದ್ದ ತೇಜೂ ಚಿತ್ರದ ನಾಯಕಿ. ಬೆಂಗಳೂರು, ಮೈಸೂರು ಮತ್ತು ಬಳ್ಳಾರಿಯಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದ ಮುಹೂರ್ತದ ದಿನ ಮರಿ ಟೈಗರ್ ಪತ್ರಕರ್ತರಿಗೆ ಹೆದರಿ ಇಲಿಯಂತೆ ಬಿಲ ಸೇರಿಕೊಂಡಿದ್ದು ಮಾತ್ರ ಭಾರಿ ಚರ್ಚೆಗೆ ಕಾರಣವಾಗಿತ್ತು.

  ವಿನೋದ್‌ ಪ್ರಭಾಕರ್ ಅವರ ನಡವಳಿಕೆ ಮತ್ತು ಬಾಡಿ ಲಾಂಗ್ವೇಜ್‌ಗೆ ತಕ್ಕ ಹಾಗೆ ಕತೆ ರೂಪಿಸಲಾಗಿದೆಯಂತೆ. ಜೈ ಆನಂದ್‌ ಛಾಯಾಗ್ರಹಣ ರಾಕ್ ರವಿ ಸಂಗೀತ ಇರುವ ಚಿತ್ರದಲ್ಲಿ ಆರು ಹಾಡುಗಳಿರುತ್ತವೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. (ಒನ್ ಇಂಡಿಯಾ ಕನ್ನಡ)

  English summary
  Tiger Prabhakar's son Vinod Prabhakar action based film Mari Tiger starts roaring. ‘Mari Tiger’ is a film with some dialogues related to Tiger Prabhakar, there are six action scenes and six songs in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X