For Quick Alerts
  ALLOW NOTIFICATIONS  
  For Daily Alerts

  'ವಿನೋದ್ ರಾಜ್ ಸಹಾಯ ಮಾಡಿದ್ರು': ಧನ್ಯವಾದ ಹೇಳಿದ ವಿಜಯಲಕ್ಷ್ಮಿ

  |

  'ನನ್ನ ಸಹೋದರಿ ಚಿಕಿತ್ಸೆಗೆ ಸಹಾಯ ಮಾಡಿ' ಎಂದು ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ವಿನಂತಿಸಿದ್ದರು. ನಟ ಶಿವಣ್ಣ, ದರ್ಶನ್, ಪುನೀತ್, ಯಶ್ ಸೇರಿದಂತೆ ಕನ್ನಡ ಚಿತ್ರರಂಗ ಹಾಗೂ ಕನ್ನಡ ಅಭಿಮಾನಿಗಳು ನೆರವು ನೀಡಿ ಎಂದು ಕೇಳಿಕೊಂಡಿದ್ದರು.

  Recommended Video

  ಲೀಲಾವತಿ ಕುಟುಂಬ ನನಿಗೆ ಸಹಾಯ ಮಾಡಿದಾರೆ! | Filmibeat Kannada

  ಉಷಾದೇವಿ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಸ್ಥಿತಿ ಬಹಳ ಗಂಭೀರವಾಗಿದೆ. ದಯವಿಟ್ಟು ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದರು.

  ದಯವಿಟ್ಟು ಸಹಾಯಮಾಡಿ, ಶಿವಣ್ಣನ ಗಮನಕ್ಕೆ ತನ್ನಿ: ನಟಿ ವಿಜಯಲಕ್ಷ್ಮಿ ಅಳಲು ದಯವಿಟ್ಟು ಸಹಾಯಮಾಡಿ, ಶಿವಣ್ಣನ ಗಮನಕ್ಕೆ ತನ್ನಿ: ನಟಿ ವಿಜಯಲಕ್ಷ್ಮಿ ಅಳಲು

  ವಿಜಯಲಕ್ಷ್ಮಿಯ ಕಷ್ಟಕ್ಕೆ ಸ್ಪಂದಿಸಿದ ಹಿರಿಯ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಸಹಾಯ ಹಸ್ತಚಾಚಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಸ್ವತಃ ವಿಜಯಲಕ್ಷ್ಮಿ ಈ ವಿಷಯವನ್ನು ತಿಳಿಸಿದ್ದು, ವಿನೋದ್ ರಾಜ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

  ''ಉಷಾದೇವಿ ಬಹಳ ದಿನಗಳ ನಂತರ ಮಾತನಾಡಿದ್ದಾರೆ. ನಿಮ್ಮೆಲ್ಲರ ಶುಭಾಶಯ ನಮಗೆ ಧೈರ್ಯ ತಂದಿದೆ. ಬಹಳಷ್ಟು ಜನ ಸಹಾಯ ಮಾಡ್ತಿದ್ದಾರೆ. ಫೋನ್ ಮಾಡಿ ಧೈರ್ಯ ತುಂಬುತ್ತಿದ್ದಾರೆ, ಎಲ್ಲರಿಗೂ ಧನ್ಯವಾದ'' ಎಂದು ವಿಜಯಲಕ್ಷ್ಮಿ ಮತ್ತೊಂದು ವಿಡಿಯೋ ಮಾಡಿದ್ದಾರೆ.

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಷಾದೇವಿ ಸಹ ವಿಡಿಯೋ ಮೂಲಕ ಕನ್ನಡಿಗರಿಗೆ ಧನ್ಯವಾದ ಎಂದು ಹೇಳಿದ್ದಾರೆ.

  ''ನನಗೆ ಇಂಡಸ್ಟ್ರಿಯಲ್ಲಿ ಯಾರೂ ಸಹಾಯ ಮಾಡಿಲ್ಲ ಅಂತ ಬೇಜಾರಿಲ್ಲ. ಅವರೆಲ್ಲರ ಆಶೀರ್ವಾದ ಇದೆ ಎಂದು ಭಾವಿಸಿದ್ದೇನೆ. ನನಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೇ ಯಾರಿಗಾದರೂ ನೋವುಂಟು ಮಾಡಿದ್ದಾರೆ ದಯವಿಟ್ಟು ನನ್ನನ್ನು ಕ್ಷಮಿಸಿ'' ಎಂದು ವಿಜಯಲಕ್ಷ್ಮಿ ಹೇಳಿಕೊಂಡಿದ್ದಾರೆ.

  English summary
  Kannada actor Vinod raj has help to Vijayalakshmi sister Usha Devi treatment.
  Friday, June 4, 2021, 10:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X