For Quick Alerts
  ALLOW NOTIFICATIONS  
  For Daily Alerts

  ಕಳ್ಳತನ ಮಾಡಲು ಹೋಗಿದ್ದ ತುಳಸಿ ಪ್ರಸಾದ್ ಗೆ ಬೀಳುತ್ತಿತ್ತು ಧರ್ಮದೇಟು!

  By Naveen
  |
  ತುಳಸಿ ಪ್ರಸಾದ್‌ಗೆ ಧರ್ಮದೇಟು ಜಸ್ಟ್ ಮಿಸ್..! | Filmibeat Kannada

  ತನ್ನ ಕರ್ಕಶ ಧ್ವನಿಯ ಮೂಲಕ ಒಂದು ಹಾಡಿದ ಅಂದವನ್ನು ಹಾಳು ಮಾಡುತ್ತಿದ್ದ ತುಳಸಿ ಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಇದ್ದಕ್ಕಿದ್ದ ಹಾಗೆ ಫೇಮಸ್ ಆಗಿ ಬಿಟ್ಟ. ಆದರೆ, ಈಗ ಈತ ಒಂದು ಅವಾಂತರ ಮಾಡಿಕೊಂಡಿದ್ದಾನೆ.

  ವಿಚಿತ್ರವಾಗಿ ಹಾಡುತ್ತಿದ್ದ ಇವನನ್ನು ಮೊದ ಮೊದಲು ನೋಡಿ ಮಂದಿ ತಲೆ ಕೆಡಿಸಿಕೊಂಡಿದ್ದರು. ಇದೇ ಸಮಯದಲ್ಲಿಯೇ ಸುದ್ದಿ ವಾಹಿನಿಯಲ್ಲಿ ಈತನ ಸಂದರ್ಶನದ ಆಯ್ತು. ಈ ಎಲ್ಲದರ ನಂತರ ತುಳಸಿ ಪ್ರಸಾದ್ ಬಿಗ್ ಬಾಸ್ ಗೆ ಹೋಗುತ್ತಾನೆ ಎಂಬ ಸುದ್ದಿ ಕೂಡ ಹೆಚ್ಚಾಗಿತ್ತು.

  ಇಂತಹ ತುಳಸಿ ಪ್ರಸಾದ್ ಇದೀಗ ಹೊಸ ಸುದ್ದಿ ಮಾಡಿಕೊಂಡಿದ್ದಾನೆ. ಅದರ ಸಂಪೂರ್ಣ ವಿವರ ಮುಂದಿದೆ ಓದಿ....

  ಕಳ್ಳತನ ಮಾಡಲು ಪ್ರಯತ್ನ

  ಕಳ್ಳತನ ಮಾಡಲು ಪ್ರಯತ್ನ

  ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕೆಟ್ಟ ಧ್ವನಿಯ ಮೂಲಕ ಫೇಮ್ ಪಡೆದಿದ್ದ ತುಳಸಿ ಪ್ರಸಾದ್ ಇದೀಗ ಕಳ್ಳತನ ಮಾಡಲು ಪ್ರಯತ್ನ ಪಟ್ಟಿದ್ದಾನೆ. ಬಿಗ್ ಬಜಾರ್ ನಲ್ಲಿ ಕಳ್ಳತನ ಮಾಡಲು ಹೋಗಿ ಜನರ ಕೈನಲ್ಲಿ ಸಿಕ್ಕಿ ಬಿದ್ದಿದ್ದಾನೆ.

  ಕೆಲ ವಸ್ತುಗಳನ್ನು ಎಗರಿಸಿದ್ದ

  ಕೆಲ ವಸ್ತುಗಳನ್ನು ಎಗರಿಸಿದ್ದ

  ಬೆಂಗಳೂರಿನ ಒಂದು ಬಿಗ್ ಬಜಾರ್ ಶಾಖೆಗೆ ತುಳಸಿ ಪ್ರಸಾದ್ ಶಾಪಿಂಗ್ ಮಾಡಲು ಹೋಗಿದ್ದ. ಈ ವೇಳೆ ಎಲ್ಲರ ಗಮನ ತಪ್ಪಿಸಿ ಕೆಲವು ವಸ್ತುಗಳನ್ನು ಎಗರಿಸಿದ್ದಾನೆ. ತಾನು ತೊಟ್ಟಿದ್ದ ಜರ್ಕಿನ್ ನಲ್ಲಿ ಯಾರಿಗೂ ಕಾಣದಂತೆ ಕೆಲ ವಸ್ತುಗಳನ್ನು ಇಟ್ಟುಕೊಂಡಿದ್ದ ತುಳಸಿ ಕಳ್ಳತನದ ಪ್ರಯತ್ನ ಮಾಡಿದ್ದಾನೆ.

  ಸೆಕ್ಯೂರಿಟಿ ಕೈನಲ್ಲಿ ಸಿಕ್ಕಿ ಬಿದ್ದ

  ಸೆಕ್ಯೂರಿಟಿ ಕೈನಲ್ಲಿ ಸಿಕ್ಕಿ ಬಿದ್ದ

  ಜರ್ಕಿನ್ ನಲ್ಲಿ ಅಂಗಡಿಯ ಕೆಲ ವಸ್ತುಗಳನ್ನು ಹಾಕಿಕೊಂಡು ಬಂದ ತುಳಸಿ ಪ್ರಸಾದ್ ಸೆಕ್ಯೂರಿಟಿ ಕೈ ನಲ್ಲಿ ಸಿಕ್ಕಿ ಬಿದ್ದಿದ್ದಾನೆ. ಮೊದಲು ಕಳ್ಳತನ ಮಾಡಿಲ್ಲ ಎಂದು ನಾಟಕ ಆಡಿದ ತುಳಸಿ ಬಳಿಕ ಒಪ್ಪಿಕೊಂಡಿದ್ದಾನೆ.

  ಮುಖಕ್ಕೆ ಮಂಗಳಾರತಿ ಮಾಡಿದ ಸ್ಥಳೀಯರು

  ಮುಖಕ್ಕೆ ಮಂಗಳಾರತಿ ಮಾಡಿದ ಸ್ಥಳೀಯರು

  ಕಳ್ಳತನ ಮಾಡಿ ಸಿಕ್ಕಿ ಬಿದ್ದ ತುಳಸಿ ಪ್ರಸಾದ್ ಗೆ ಅಲ್ಲೇ ಇದ್ದ ಸ್ಥಳೀಯರು ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಬೀಳುತ್ತಿದ್ದ ಧರ್ಮದೇಟು ಜಸ್ಟ್ ಮಿಸ್ ಆಗಿದೆ. ಯಾಕೆ ಈ ರೀತಿ ಮಾಡಿದೆ ಎಂದು ಕೇಳಿದರೆ ತಪ್ಪಾಯ್ತು ಎಂದು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾನೆ.

  English summary
  Viral singer Thulasi Prasad was got in Bigg Bazar while stealing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X