»   » 'ಹಂಬಲ್ ಪೊಲಿಟೀಶಿಯನ್ ನೋಗರಾಜ್'ಗೆ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ.!

'ಹಂಬಲ್ ಪೊಲಿಟೀಶಿಯನ್ ನೋಗರಾಜ್'ಗೆ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ.!

Posted By:
Subscribe to Filmibeat Kannada
Virat Kholi wishes Danish Sait for 'Humble Politician Nograj' movie | Watch video

ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಡ್ಯಾನಿಶ್ ಸೇಠ್ ನಟಿಸಿರುವ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಚಿತ್ರದ ಟ್ರೇಲರ್ ಈಗಲೂ ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಚಿತ್ರದ ಟ್ರೈಲರ್ ನೋಡಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ.

Virat Kohli wishes Danish Sait for 'Humble Politician Nograj'

'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದ ಟ್ರೇಲರ್ ಈಗ ಯೂ ಟ್ಯೂಬ್ ನಲ್ಲಿ ನಂ1

ಅಷ್ಟಕ್ಕೂ, ಡ್ಯಾನಿಶ್ ಸೇಠ್ ಗೆ ವಿರಾಟ್ ಕೊಹ್ಲಿ ಬೆಸ್ಟ್ ಫ್ರೆಂಡ್. ಹೀಗಾಗಿ, ಡ್ಯಾನಿಶ್ ಸೇಠ್ ಅಭಿನಯದ ಚೊಚ್ಚಲ ಚಿತ್ರ 'ಹಂಬಲ್ ಪೊಲಿಟೀಶಿಯನ್ ನೋಗರಾಜ್'ಗೆ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.

''ನಮಸ್ಕಾರ... ಡ್ಯಾನಿಶ್ ಸೇಠ್ ಅಭಿನಯಿಸಿರುವ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಚಿತ್ರದ ಟ್ರೈಲರ್ ಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನನಗೆ ತುಂಬಾ ಖುಷಿ ಆಗಿದೆ. ಸಿನಿಮಾ ಕೂಡ ಯಶಸ್ವಿ ಆಗಲಿ ಎಂದು ನಾನು ಹಾರೈಸುತ್ತೇನೆ'' ಎಂದು ವಿಡಿಯೋ ಮೂಲಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.

ನಟ ರಕ್ಷಿತ್ ಶೆಟ್ಟಿ, ಹೇಮಂತ್.ಎಂ.ರಾವ್, ಪುಷ್ಕರ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿರುವ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಚಿತ್ರದಲ್ಲಿ ಡ್ಯಾನಿಶ್ ಸೇಠ್, ಶ್ರುತಿ ಹರಿಹರನ್ ಅಭಿನಯಿಸಿದ್ದಾರೆ. ಸಾದ್ ಖಾನ್ ನಿರ್ದೇಶನ ಮಾಡಿರುವ ಈ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.

ಒಂದು ವೇಳೆ 'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಚಿತ್ರದ ಟ್ರೈಲರ್ ಮಿಸ್ ಮಾಡಿಕೊಂಡಿದ್ರೆ, ಈಗ ನೋಡಿಬಿಡಿ...

English summary
Virat Kohli wishes Danish Sait for 'Humble Politician Nograj'. Watch Video

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada