»   » ವೀಣಾ ಮಲಿಕ್ ಕನ್ನಡ ಡರ್ಟಿ ಪಿಕ್ಚರ್‌ಗೆ ವೀಸಾ ವಿಘ್ನ

ವೀಣಾ ಮಲಿಕ್ ಕನ್ನಡ ಡರ್ಟಿ ಪಿಕ್ಚರ್‌ಗೆ ವೀಸಾ ವಿಘ್ನ

Posted By:
Subscribe to Filmibeat Kannada
ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್‌ ಕನ್ನಡದ 'ಡರ್ಟಿ ಪಿಕ್ಚರ್'ಗೆ ಬರಲು ಸಾಧ್ಯವಾಗುತ್ತಿಲ್ಲ. ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಚಿತ್ರೀಕರಣದಲ್ಲಿ ಮೇ18ರಂದು ವೀಣಾ ಭಾಗಿಯಾಗಬೇಕಿತ್ತು. ಆದರೆ ಆಕೆ ಕರ್ನಾಟಕಕ್ಕೆ ಅಡಿಯಿಡಲು ವೀಸಾ ಸಮಸ್ಯೆ ಅಡ್ಡ ಬಂದಿದೆ.

ಕೇವಲ 11 ನಗರಗಳಿಗೆ ಭೇಟಿ ನೀಡಲಷ್ಟೇ ವೀಣಾ ಮಲಿಕ್‌ಗೆ ಭಾರತ ಸರಕಾರ ವೀಸಾ ಪರವಾನಗಿ ನೀಡಲಾಗಿತ್ತು ಆದರೆ ಈಗ ಆಕೆಯ ವೀಸಾ ಅವಧಿ ಮುಗಿದಿದ್ದು ಕರ್ನಾಟಕಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಈಗ ತಮ್ಮ ವೀಸಾವನ್ನು ನವೀಕರಿಸುವ ಕೆಲಸದಲ್ಲಿ ವೀಣಾ ಬಿಜಿಯಾಗಿದ್ದಾರಂತೆ.

'ಡರ್ಟಿ ಪಿಕ್ಚರ್‌' ಚಿತ್ರೀಕರಣದಲ್ಲಿ ಭಾಗವಹಿಸಲು ವೀಣಾ ಮಲಿಕ್ ಮೇ 24ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಆಕೆಗೆ ವೀಸಾ ಪ್ರಾಬ್ಲಂ ಆದ ಕಾರಣ ಕೊಂಚ ತಡವಾಯಿತು ಅಷ್ಟೇ. ಆದರೂ ಚಿತ್ರೀಕರಣಕ್ಕೇನು ತೊಂದರೆಯಾಗುತ್ತಿಲ್ಲ ಎಂದಿದ್ದಾರೆ ಚಿತ್ರದ ನಿರ್ದೇಶಕ ತ್ರಿಶೂಲ್.

ಕನ್ನಡದ 'ಡರ್ಟಿ ಪಿಕ್ಚರ್‌'ಗೆ ಇನ್ನೊಂದು ವಿಘ್ನವೂ ಎದುರಾಗಿದೆ. ತಮ್ಮ ಚಿತ್ರದ ಶೀರ್ಷಿಕೆಯನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಗುಡುಗಿದ್ದರು. ಕನ್ನಡ ಚಿತ್ರದ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ತಿಳಿಸಿದ್ದರು.

ಈ ಸಂಬಂಧ ಚಿತ್ರದ ನಿರ್ಮಾಪಕರು ಕನ್ನಡದ 'ಡರ್ಟಿ ಪಿಕ್ಚರ್' ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಬಾಲಿವುಡ್‌ನ ಡರ್ಟಿ ಪಿಕ್ಚರ್‌ಗೂ ತಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಚಿತ್ರದ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

English summary
Pakistani hot actress Veena Malik visa have been expired, so her Kannada film 'Dirty Picture: Silk Sakkath Maga', is facing troubles now. The actress was busy signing official documents and could not join the shoots as expected.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada