For Quick Alerts
  ALLOW NOTIFICATIONS  
  For Daily Alerts

  ಶ್ರೀರೆಡ್ಡಿ-ನಾನಿ ವಿವಾದಕ್ಕೆ ನಟ ವಿಶಾಲ್ ಎಂಟ್ರಿ: ನಟಿಯ ವಿರುದ್ಧ ಬೇಸರ

  By Bharath Kumar
  |

  ತೆಲುಗು ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಠಿ ಮಾಡಿರುವ ನಟಿ ಶ್ರೀರೆಡ್ಡಿ ವಿರುದ್ಧ ಬಹುಭಾಷಾ ನಟ ವಿಶಾಲ್ ಕಿಡಿಕಾರಿದ್ದಾರೆ.

  ತೆಲುಗು ನಟ ಅಭಿರಾಮ್ ದಗ್ಗುಬಾಟಿ, ನಿರ್ಮಾಪಕ ಸುರೇಶ್ ಬಾಬು ಸೇರಿದಂತೆ ಮೇಲೆ ಗಂಭೀರ ಆರೋಪಗಳನ್ನ ಮಾಡಿರುವ ಶ್ರೀರೆಡ್ಡಿ, ಸದ್ಯ ನಾನಿ ವಿರುದ್ಧ ಕೀಳುಮಟ್ಟದಲ್ಲಿ ಹೇಳಿಕೆಗಳನ್ನ ನೀಡುತ್ತಿದ್ದಾರೆ.

  ನಟ ನಾನಿ ಜೊತೆ ನನ್ನದು ಲವ್ ಸ್ಟೋರಿ ಅಲ್ಲ...ಕಾಮ ಸ್ಟೋರಿ.! ನಟ ನಾನಿ ಜೊತೆ ನನ್ನದು ಲವ್ ಸ್ಟೋರಿ ಅಲ್ಲ...ಕಾಮ ಸ್ಟೋರಿ.!

  ಇದು ಟಾಲಿವುಡ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸಿದ್ದು, ಇದಕ್ಕೊಂದು ಅಂತ್ಯವಾಡಲೇಬೇಕು ಎಂದು ನಿರ್ಧರಿಸಿದಂತಿದೆ. ಈಗಾಗಲೇ ಶ್ರೀರೆಡ್ಡಿಗೆ ಲೀಗಲ್ ನೋಟಿಸ್ ನೀಡಿರುವ ನಾನಿ, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಷ್ಟಿದ್ದರೂ, ನಾನಿ ಬಗ್ಗೆ ಆರೋಪಗಳನ್ನ ಮಾಡ್ತಿದ್ದಾರೆ. ಇದೀಗ, ಈ ವಿವಾದದ ಬಗ್ಗೆ ವಿಶಾಲ್ ಮಾತನಾಡಿದ್ದು, ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಮುಂದೆ ಓದಿ....

  ಸಾಕ್ಷಿ ಸಮೇತ ಮಾತನಾಡಲಿ ಮಾಡಲಿ

  ಸಾಕ್ಷಿ ಸಮೇತ ಮಾತನಾಡಲಿ ಮಾಡಲಿ

  ''ಶ್ರೀರೆಡ್ಡಿ ಅವರು ಸುಮ್ಮನೆ ಚಿತ್ರರಂಗದ ಮೇಲೆ ಆರೋಪ ಮಾಡುವುದು ಸರಿಯಿಲ್ಲ. ಏನಾದರೂ ಅಂತಹ ಸಮಸ್ಯೆಗಳಿದ್ರೆ ಅದನ್ನ ಸಾಕ್ಷಿ ಸಮೇತ ಎದುರಿಸಬೇಕು. ಹೀಗೆ, ಆಧಾರ ರಹಿತ ಆರೋಪ ಮಾಡಿ ಮಾನಹಾನಿ ಮಾಡಬಾರದು'' ಎಂದು ವಿಶಾಲ್ ಹೇಳಿದ್ದಾರೆ.

  ಇಂಡಸ್ಟ್ರಿಯ ಗೌರವಕ್ಕೆ ಧಕ್ಕೆ

  ಇಂಡಸ್ಟ್ರಿಯ ಗೌರವಕ್ಕೆ ಧಕ್ಕೆ

  ''ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಹೇಳುವುದು ಸುಲಭ, ಆದ್ರೆ, ಅದಕ್ಕೆ ಸಾಕ್ಷಿ ಸಮೇತ ಬಯಲು ಮಾಡುವುದಕ್ಕೆ ಧೈರ್ಯ ಬೇಕು. ಸುಮ್ಮನೆ ಎಲ್ಲರ ಮೇಲೂ ಆರೋಪ ಮಾಡಬಾರದು. ಇಡೀ ಇಂಡಸ್ಟ್ರಿಯ ಗೌರವಕ್ಕೆ ಧಕ್ಕೆ ಬರುತ್ತೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಶ್ರೀರೆಡ್ಡಿ ವಿರುದ್ಧ ಸಿಡಿದೆದ್ದ ನಾನಿ: ಇಬ್ಬರ ಮಧ್ಯೆ ನೇರಾನೇರ ಫೈಟ್ ಶ್ರೀರೆಡ್ಡಿ ವಿರುದ್ಧ ಸಿಡಿದೆದ್ದ ನಾನಿ: ಇಬ್ಬರ ಮಧ್ಯೆ ನೇರಾನೇರ ಫೈಟ್

  ಕಲಾವಿದರ ಸಂಘ ಬಗೆಹರಿಸಬೇಕು

  ಕಲಾವಿದರ ಸಂಘ ಬಗೆಹರಿಸಬೇಕು

  ''ಶ್ರೀರೆಡ್ಡಿಯ ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಗ್ಗೆ ಕಲಾವಿದರ ಸಂಘ ಒಂದು ನಿರ್ಧಾರಕ್ಕೆ ಬರಬೇಕು, ಈ ವಿವಾದ ಬಗ್ಗೆ ಚರ್ಚೆ ಮಾಡಿ, ಇದಕ್ಕೆ ಅಂತ್ಯವಾಡಬೇಕಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.

  ಶ್ರೀರೆಡ್ಡಿ ಮತ್ತು ನಾನಿ ವಿವಾದಕ್ಕೆ ಎಂಟ್ರಿ ಕೊಟ್ಟ ನಾನಿ ಪತ್ನಿಶ್ರೀರೆಡ್ಡಿ ಮತ್ತು ನಾನಿ ವಿವಾದಕ್ಕೆ ಎಂಟ್ರಿ ಕೊಟ್ಟ ನಾನಿ ಪತ್ನಿ

  ಅಮಲಾ-ವರಲಕ್ಷ್ಮಿಗೆ ಮೆಚ್ಚುಗೆ

  ಅಮಲಾ-ವರಲಕ್ಷ್ಮಿಗೆ ಮೆಚ್ಚುಗೆ

  ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಿಶಾಲ್ ''ಈ ಹಿಂದೆ ಈ ರೀತಿಯ ಸಮಸ್ಯೆಗಳನ್ನ ಎದುರಿಸಿ, ಅದನ್ನ ಸಾಕ್ಷಿ ಸಮೇತ ಬಹಿರಂಗಪಡಿಸಿದ ನಟಿ ಅಮಲಾ ಪೌಲ್ ಮತ್ತು ವರಲಕ್ಷ್ಮಿ ಅವರಿಗೆ ಈ ವಿಷ್ಯದಲ್ಲಿ ಮೆಚ್ಚುಗೆ ಹೇಳಲೇಬೇಕು'' ಎಂದರು.

  English summary
  Tamil-Telugu actor Vishal Krishna asks Sri Reddy to produce evidence of sexual abuse as he defends Nani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X