»   » 'ವೀಕೆಂಡ್ ವಿತ್ ರಮೇಶ್'ನಲ್ಲಿ ನಟಿ ಭಾರತಿ: ವಿಷ್ಣು ಅಭಿಮಾನಿಗಳು ಗರಂ ಆಗಿದ್ಯಾಕೆ?

'ವೀಕೆಂಡ್ ವಿತ್ ರಮೇಶ್'ನಲ್ಲಿ ನಟಿ ಭಾರತಿ: ವಿಷ್ಣು ಅಭಿಮಾನಿಗಳು ಗರಂ ಆಗಿದ್ಯಾಕೆ?

Posted By:
Subscribe to Filmibeat Kannada

'ಜೀ-ಕನ್ನಡ'ದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಅವರನ್ನ ಕರೆಯಿಸಿ ಎಂದು ಅಭಿಮಾನಿಗಳು ಮೊದಲ ಆವೃತ್ತಿಯಿಂದಲೂ ಒತ್ತಾಯಿಸುತ್ತಲೇ ಇದ್ದರು. ಕೊನೆಗೂ 3ನೇ ಆವೃತ್ತಿಯಲ್ಲಿ ಭಾರತಿ ವಿಷ್ಣುವರ್ಧನ್ ಅವರನ್ನ 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ ನೋಡುವ ಅವಕಾಶ ಸಿಕ್ಕಿದೆ.

ಇದು ಕೆಲವು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದ್ದರೇ, ಮತ್ತೆ ಕೆಲವು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಯಾಕಂದ್ರೆ, ಭಾರತಿ ವಿಷ್ಣುವರ್ಧನ್ ಅವರ ಸಾಧನೆಗೆ ತಕ್ಕ ಗೌರವ ಸಿಕ್ಕಿಲ್ಲ ಎಂಬುದು ಅಭಿಮಾನಿಗಳ ಆರೋಪ ಮತ್ತು ಆಕ್ರೋಶ.['ವೀಕೆಂಡ್ ವಿತ್ ರಮೇಶ್'ನಲ್ಲಿ ಈ ವಾರ ಇಬ್ಬರು ದಿಗ್ಗಜರು]

ಈ ಕುರಿತು ಸೋಶಿಯಲ್ ಮಿಡಿಯಾದಲ್ಲಿ 'ಜೀ-ಕನ್ನಡ' ಹಾಗೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ ಅಭಿಮಾನಿಗಳು. ಮುಂದೆ ಓದಿ......

ವಿಷ್ಣು ಅಭಿಮಾನಿಗಳ ಕೋಪಕ್ಕೆ ಕಾರಣ!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕೆಲವು ಸಾಧಕರ ಕುರಿತು ಶನಿವಾರ ಮತ್ತು ಭಾನುವಾರ ಎರಡು ದಿನವೂ ಕಾರ್ಯಕ್ರಮ ಪ್ರಸಾರ ಮಾಡಿದ್ದಾರೆ. ಆದ್ರೆ, 50 ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಭಾರತಿ ವಿಷ್ಣುವರ್ಧನ್ ಅವರದು ಮಾತ್ರ ಕೇವಲ ಒಂದು ದಿನ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದಾರೆ. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಅಭಿಮಾನಿಗಳ ಬೇಸರ!

''ಎಂಟು ಹತ್ತು ವರ್ಷ ಸಾಧನೆ ಮಾಡಿದವರನ್ನು ಎರೆಡೆರೆಡು ಎಪಿಸೊಡಿನಲ್ಲಿ ಮಾತಾಡಿಸುತ್ತೀರ, ಅದೇ ನಾಲ್ಕೈದು ದಶಕಗಳಿಂದ ಸಾಧನೆ ಮಾಡಿರುವರನ್ನು ಮಾತ್ರ ಯಾಕೆ ಒಂದೇ ಎಪಿಸೊಡಿನಲ್ಲಿ ಮಾತಾನಾಡಿಸಿ ಕಳುಹಿಸುತ್ತೀರಾ? ಭಾರತಿಯವರದು ಅಗಣ್ಯ ನೆನಪುಗಳು ಘಟನೆಗಳಿವೆ, ಹಲವು ವರ್ಷಗಳ ಅನುಭವವಿದೆ, ಹಿರಿತನವಿದೆ. ಅದೆಲ್ಲದಕ್ಕೂ ಸೂಕ್ತ ಮರ್ಯಾದೆ ಕೊಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ.''

ನಿರೀಕ್ಷೆ ಹುಸಿಯಾಗಿದೆ!

ಭಾರತಿ ವಿಷ್ಣುವರ್ಧನ್ ಅವರ ಎಪಿಸೋಡ್ ನಿಂದ ನಮ್ಮ ನಿರೀಕ್ಷೆ ಹುಸಿಯಾಗಿದೆ. ಚಿತ್ರರಂಗದಲ್ಲಿ ವರ್ಷಗಳ ಕಾಲ ಕಲಾಸೇವೆ ಮಾಡಿರುವ ನಟಿಗೆ ನೀವು ಕೊಡುವ ಗೌರವವಿದೆನಾ? ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಎರಡು ದಿನ ಪ್ರಸಾರ ಮಾಡಿ!

''ಭಾರತಿ ವಿಷ್ಣುವರ್ಧನ್ ಅವರ ಎಪಿಸೋಡ್ ಒಂದೇ ದಿನವೆಂದು ಬೇಸರಗೊಂಡಿರುವ ಪ್ರೇಕ್ಷಕರು ದಯವಿಟ್ಟು ಎರಡು ದಿನ ಮುಂದುವರೆಸಿ ಎಂದು ಕೇಳಿಕೊಳ್ಳುತ್ತಿದ್ದಾರೆ''

ಒತ್ತಾಯಕ್ಕೆ ಕರೆಸಿದಂತಿದೆ!

''ಭಾರತಿ ವಿಷ್ಣುವರ್ಧನ್ ಅವರ ಬಗ್ಗೆ ಒಂದು ದಿನ ಎಪಿಸೋಡ್ ಮಾಡುವಂತಹದ್ದು ಏನಿದೆ. ಎರಡು ದಿನ ಮಾಡಬಹುದಿತ್ತು ಅಲ್ವಾ? ಸುಮ್ಮನೆ ಒತ್ತಾಯಕ್ಕೆ ಮಣಿದು ಕರೆಸಿದಂತೆ''

ರಮೇಶ್ ಅವರೇ ಇದು ನ್ಯಾಯನಾ?

''ವಿಷ್ಣುವರ್ಧನ್ ಅವರ ಜೊತೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರಮೇಶ್ ಅವರು, ಈ ಬಗ್ಗೆ ಗಮನ ಹರಿಸಬಹುದಿತ್ತು. ಭಾರತಿ ಅವರನ್ನ ಮೊದಲ ಆವೃತ್ತಿಯಲ್ಲಿ ಕರೆಯಿಸಬೇಕಾಗಿತ್ತು. ತಡವಾಗಿ ಕರೆಸಿದ್ದರೂ ಗೌರವಿಸಿಲ್ಲ ಯಾಕೆ? ಎಂಬ ಪ್ರಶ್ನೆಯನ್ನ ಪ್ರೇಕ್ಷಕರು ಕೇಳುತ್ತಿದ್ದಾರೆ.

ದಾದ ಬಗ್ಗೆ ಒಂದು ದಿನ ಮಾತಾಡಬಹುದಿತ್ತು

ದಿವಂಗತ ಡಾ.ವಿಷ್ಣುವರ್ಧನ್ ಅವರು ಇಂದು ನಮ್ಮೊಂದಿಗಿಲ್ಲ. ಅವರ ಬಗ್ಗೆನೇ ಒಂದು ಎಪಿಸೋಡ್ ಪೂರ್ತಿ ಮಾತನಾಡಬಹುದಿತ್ತು ಎಂಬುದು ವಿಷ್ಣು ಅಭಿಮಾನಿಗಳ ಆಶಯ.

ಈ ವಾರ ಪ್ರಸಾರ

ಭಾರತಿ ವಿಷ್ಣುವರ್ಧನ್ ಅವರ ಕಾರ್ಯಕ್ರಮ ಶನಿವಾರ ಅಂದ್ರೆ 22 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ.

English summary
Kannada Legend Actor Dr.Vishnuvardhan Fans Are Angry On Weekend with Ramesh 3 Programme. Because, Zee kannada Telecasting only one day of Actress Bharathi Vishnuvardhan Episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada