For Quick Alerts
  ALLOW NOTIFICATIONS  
  For Daily Alerts

  ಗಮನ ಸೆಳೆಯುತ್ತಿದೆ 'ಸಾಹಸ ಸಿಂಹ'ನ 'ಸಿಂಹರೂಪಿ' ಕ್ಯಾಲೆಂಡರ್

  |

  ವಿಷ್ಣು ಸೇನಾ ಸಮಿತಿಯು ಪ್ರತಿ ವರ್ಷದಂತೆ ಈ ವರ್ಷವೂ ವಿಷ್ಣುವರ್ಧನ್ ಅವರ ಅಪರೂಪದ ಚಿತ್ರಗಳನ್ನು ಬಳಸಿ ಹೊಸ ಪರಿಕಲ್ಪನೆಯೊಂದಿಗೆ ಕ್ಯಾಲೆಂಡರ್ ಬಿಡುಗಡೆಗೊಳಿಸಿದೆ.

  ಡಾ.ವಿಷ್ಣುವರ್ಧನ್ ಅವರ ನೆನಪಿನಲ್ಲಿ 2022 ರ ಕ್ಯಾಲೆಂಡರ್ ಅನ್ನು ಡಾ.ವಿಷ್ಣು ಸೇನಾ ಸಮಿತಿಯು ಹೊರತಂದಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕೋಟಿಗೊಬ್ಬ ಹೆಸರಿನಲ್ಲಿ ಕ್ಯಾಲೆಂಡರ್ ಅನ್ನು ಹೊರತರಲಾಗುತ್ತಿದೆ. ಸಾಹಸಸಿಂಹ ಎಂಬ ಬಿರುದು ವಿಷ್ಣು ಅವರ ಹೆಸರಷ್ಟೇ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿದೆ. ಆ ಹಿನ್ನಲೆಯಲ್ಲಿಯೇ ಈ ಕ್ಯಾಲೆಂಡರ್ ಅನ್ನು ರೂಪಿಸಲಾಗಿದೆ. ಈ ಸಲ ಸಿಂಹರೂಪಿ ಪರಿಕಲ್ಪನೆ ಅಡಿಯಲ್ಲಿ ಮೂರು ಸಿಂಹಗಳ ನಡುವೆ ಡಾ.ವಿಷ್ಣು ಅವರು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿಪುಟದಲ್ಲೂ ಡಾ.ವಿಷ್ಣು ಅವರ ವಿಶೇಷ ಚಿತ್ರಗಳನ್ನು ಬಳಸಲಾಗಿದೆ.

  ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷದ ಕ್ಯಾಲೆಂಡರ್‌ಗಳಲ್ಲಿ ವಿಷ್ಣುವರ್ಧನ್ ಅವರ ಅಪರೂಪದ ಭಾವ ಚಿತ್ರಗಳನ್ನು ಬಳಸಿಕೊಳ್ಳಲಾಗಿತ್ತು. ವಿಷ್ಣುವರ್ಧನ್ ಅವರ ಸಿನಿಮಾದ ಹೆಸರುಗಳನ್ನು ಬಳಸಿ ಕ್ಯಾಲೆಂಡರ್ ರಚಿಸಿದ್ದು ಸಹ ವಿಶೇಷವಾಗಿತ್ತು. ಈ ಬಾರಿ ಸಿಂಹರೂಪಿ ಪರಿಕಲ್ಪನೆಯಡಿ ಕ್ಯಾಲೆಂಡರ್ ರಚಿಸಲಾಗಿದೆ.

  ಕ್ಯಾಲೆಂಡರ್ ವಿನ್ಯಾಸ ಮತ್ತು ಮುದ್ರಣ ಸೇರಿ ರೂ. 80 ಖರ್ಚಾಗತ್ತದೆ. ಆದರೆ ಪ್ರತಿ ಅಭಿಮಾನಿ ಮನೆಯಲ್ಲಿಯೂ ಈ ಕ್ಯಾಲೆಂಡರ್ ಇರಬೇಕೆಂಬ ಕಾರಣಕ್ಕೆ ರೂ.50 ಕ್ಕೆ ಎಲ್ಲಾ ಕಡೆ ಮಾರಾಟಕ್ಕೆ ನೀಡಲಾಗುತ್ತಿದೆ. ಉಳಿದ 30 ರೂಪಾಯಿ ವೆಚ್ಚವನ್ನು ವೀರಕಪುತ್ರ ಶ್ರೀನಿವಾಸ ಮತ್ತು ಅವರ ಗೆಳೆಯರು ಭರಿಸುತ್ತಿದ್ದಾರೆ.

  ವಿಷ್ಣುಸೇನಾ ಸಮಿತಿಯು ಆಗಾಗ್ಗೆ ವಿಷ್ಣುವರ್ಧನ್ ನೆನಪಿನಲ್ಲಿ ಸಮಾಜೋಪಯೋಗಿ ಕಾರ್ಯಗಳನ್ನು ಮಾಡುತ್ತಿರುತ್ತದೆ. ವಿಷ್ಣುವರ್ಧನ್ ಹುಟ್ಟುಹಬ್ಬದಂದು ಒರಿಸ್ಸಾದ ಭುವನೇಶ್ವರ್‌ನಲ್ಲಿ ಸಮುದ್ರ ದಡದಲ್ಲಿ ವಿಷ್ಣುವರ್ಧನ್ ಅವರ ಮರಳು ಶಿಲ್ಪ ಮಾಡಿಸಲಾಗಿತ್ತು. ವಿಷ್ಣುವರ್ಧನ್ ಅವರ ಮಹತ್ವವನ್ನು ಪರಭಾಷಿಕರಿಗೂ ಸಾರುವ ಕಾರ್ಯ ಮಾಡಲಾಗಿತ್ತು.

  Vishnu Sena Samiti Released Vishnuvardhans 2022 Year Calendar

  ಕೆಲವು ದಿನಗಳ ಹಿಂದಷ್ಟೆ ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆ ನಡೆದಿದ್ದು, ಅಂದು ಮೈಸೂರಿನಲ್ಲಿ ಮಾತನಾಡಿದ್ದ ವಿಷ್ಣುವರ್ಧನ್ ಪತ್ನಿ ಭಾರತಿ, ''ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಬಹುತೇಕ ಕಾರ್ಯಗಳು ಮುಗಿದಿದ್ದು, 2022 ರಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ'' ಎಂದಿದ್ದಾರೆ.

  English summary
  Vishnu Sena Samiti released Vishnuvardhan's 2022 year calendar. Calendar designed using Vishnuvardhan's photo with Lion image.
  Monday, January 3, 2022, 19:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X