For Quick Alerts
  ALLOW NOTIFICATIONS  
  For Daily Alerts

  ಸಾಹಸಸಿಂಹ ಬರ್ತಡೇಗೆ 'ವಿಷ್ಣುಪ್ರಿಯ' ತಂಡದಿಂದ ಸರ್ಪ್ರೈಸ್ ಉಡುಗೊರೆ

  |

  ಅಭಿನಯ ಭಾರ್ಗವ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ಕೋಟಿಗೊಬ್ಬ ಡಾ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸಾಹಸಸಿಂಹ ಬರ್ತಡೇಯನ್ನು ಮತ್ತಷ್ಟು ವಿಶೇಷವಾಗಿಸಿಕೊಂಡಿದೆ ವಿಷ್ಣುಪ್ರಿಯ ಚಿತ್ರತಂಡ.

  ಹೌದು, ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ನಟನೆಯ ವಿಷ್ಣುಪ್ರಿಯ ಚಿತ್ರತಂಡ ವಿಷ್ಣುದಾದಾ ಹುಟ್ಟುಹಬಕ್ಕೆ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹೃದಯವಂತನ ಜನುಮದಿನಕ್ಕೆ ಶುಭಾಶಯ ತಿಳಿಸಿದೆ.

  'ವಿಷ್ಣು ಸಹೋದರ ರವಿ ಹೇಳಿದ 'ಆ ಮಾತು' ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ''ವಿಷ್ಣು ಸಹೋದರ ರವಿ ಹೇಳಿದ 'ಆ ಮಾತು' ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ'

  ಅಂದ್ಹಾಗೆ, ವಿಷ್ಣುಪ್ರಿಯ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಈ ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು, ಸ್ವತಃ ಕೆ ಮಂಜು ನಿರ್ಮಾಣ ಮಾಡುತ್ತಿದ್ದರು. ಇದು ಶ್ರೇಯಸ್ ಅವರ ಎರಡನೇ ಸಿನಿಮಾ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಇದಕ್ಕೂ ಮುಂಚೆ ಪಡ್ಡೆಹುಲಿ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಚೊಚ್ಚಲ ಚಿತ್ರ ಪಡ್ಡೆಹುಲಿಯಲ್ಲಿ ವಿಷ್ಣುವರ್ಧನ್ ಅವರನ್ನು ನೆನಪಿಸುವಂತೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು.

  ವಿಶೇಷ ಅಂದ್ರೆ ಕೆ ಮಂಜು ಅವರು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ಹಾಗೂ ಆಪ್ತ ವ್ಯಕ್ತಿ. ವಿಷ್ಣು ನಟನೆಯ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ವಿಷ್ಣುಪ್ರಿಯ ಚಿತ್ರದ ಶೂಟಿಂಗ್ ನಡೆಯುತ್ತಿದೆ.

  English summary
  K Manju son shreyas Starrer Vishnu Priya movie team remembered Sahasa Simha Vishnuvardhan on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X