twitter
    For Quick Alerts
    ALLOW NOTIFICATIONS  
    For Daily Alerts

    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಷ್ಣು ಅಭಿಮಾನಿಗಳ ಪತ್ರ

    By Suneetha
    |

    ಕನ್ನಡ ಚಿತ್ರರಂಗದ ಮೇರು ನಟ ದಿ.ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಷಯದಲ್ಲಿ ಅಭಿಮಾನಿಗಳು ಇನ್ನೂ ಕಷ್ಟ ಪಡುತ್ತಿದ್ದಾರೆ. ಬೆಂಗಳೂರಿನ ಕೆಂಗೇರಿ ಸಮೀಪವಿರುವ ದಿವಂಗತ ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸ್ಮಾರಕದ ಆಸ್ತಿ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ಎಲ್ಲಾ ಗೊಂದಲ ಪರಿಹಾರಕ್ಕಾಗಿ ವಿಷ್ಣು ಅಭಿಮಾನಿಗಳು ಈಗ ಸರ್ಕಾರದ ನೆರವು ಕೋರಿದ್ದಾರೆ.

    ಡಾ.ವಿಷ್ಣು ಅಭಿಮಾನಿಗಳ .ಡಾ.ವಿಷ್ಣುವರ್ಧನ ಸೇನಾ ಸಮಿತಿ ಮತ್ತು ಎಲ್ಲಾ ಅಣ್ಣನ ಅಭಿಮಾನಿ ಸಂಘಗಳ ಮತ್ತು ಚಿತ್ರರಂಗದವರ ನೇತೃತ್ವದಲ್ಲಿ ಡಾ.ವಿಷ್ಣು ಅಣ್ಣ ಅವರ ಸ್ಮಾರಕ ನಿರ್ಮಾಣಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಹಾಯ ಕೇಳಲು ಮುಂದಾಗಿದ್ದಾರೆ.[ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮತ್ತೆ ವಿಘ್ನ ]

    Vishnuvardhan

    ಇನ್ನೂ ಆಮೆ ನಡಿಗೆಯಲ್ಲಿ ಸಾಗುತ್ತಿರುವ ನಟ ಸಾರ್ವಭೌಮ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಕೆಲಸ ಕಾರ್ಯಗಳನ್ನು ಕರ್ನಾಟಕ ಸರಕಾರ ವಹಿಸಿಕೊಳ್ಳಬೇಕೆಂದು ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದು, ಸದ್ಯದಲ್ಲೇ ಸಿ.ಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಿದ್ದಾರೆ.[ವಿಷ್ಣು ಸ್ಮಾರಕಕ್ಕೆ ಸರ್ಕಾರದಿಂದ ಭೂಮಿ ಹಸ್ತಾಂತರ]

    ಮಾತ್ರವಲ್ಲದೇ ಒಂದು ವೇಳೆ ಸೆಪ್ಟೆಂಬರ್ 18 ರ ಒಳಗಾಗಿ ಶಂಕುಸ್ಥಾಪನೆ ಮಾಡದಿದ್ದರೆ ಆ ದಿನ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಕ್ಕೆ ವಿಷ್ಣುದಾದ ಅಭಿಮಾನಿಗಳ ಶಕ್ತಿ ಪ್ರದರ್ಶನ ಮಾಡಲಾಗುವುದು ಅಂತ ಟ್ವೀಟ್ ಮಾಡಿದ್ದಾರೆ.ಶಾಂತಿ ಧೂತನ ಸ್ಮಾರಕ ನಿರ್ಮಾಣದ ಈ ಕಾರ್ಯದಲ್ಲಿ ಭಾಗಿಯಾಗಲು ಸಹಸ್ರಾರು ಸಂಖ್ಯೆಯಲ್ಲಿ ಬನ್ನಿ ಅಂತ ವಿಷ್ಣು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಬಹಿರಂಗ ಆಹ್ವಾನ ನೀಡಿದ್ದಾರೆ.

    ಇನ್ನೂ ನಟ ಜಗ್ಗೇಶ್ ಅವರು ಕೂಡ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕರ್ನಾಟಕ ಸರ್ಕಾರ. ಮಾನ್ಯ ಮುಖ್ಯ ಮಂತ್ರಿಗಳಿಗೆ ನೀವು ಕಾನೂನು ಪಧವೀಧರರು. ದಾರಿ ಹುಡುಕಿ ವಿಷ್ಣುವರ್ಧನರ ಸ್ಮಾರಕ ನಿರ್ಮಿಸಿ ಕನ್ನಡಿಗರ ಮನದಲ್ಲಿ ಉಳಿಯಿರಿ. ಕನ್ನಡಕ್ಕೆ ದುಡಿದಿದ್ದಾರೆ, ಅಂತ ರಿ ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಮತ್ತು ಡಾ.ವಿಷ್ಣುವರ್ಧನ ಸೇನಾ ಸಮಿತಿ ಮತ್ತು ಎಲ್ಲಾ ಅಣ್ಣನ ಅಭಿಮಾನಿ ಬಳಗ, ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಜುಲೈ 26 ರಿಂದ ಮೆಜೆಸ್ಟಿಕ್ ಬಳಿ ಇರುವ ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಮುಂಭಾಗ, ಪ್ರತಿ ಭಾನುವಾರ ಈ ಹೋರಾಟ ನಡೆಸಿ, ಸಂಬಂಧಿಸಿದವರಿಗೆ ಮನವಿ ಸಲ್ಲಿಸುವ ಕೆಲಸ ಮಾಡಲಾಗುವುದು. ಸೆಪ್ಟೆಂಬರ್ 18 ರ ತನಕ ಈ ಹೋರಾಟ ಮುಂದುವರಿಯಲಿದೆ. ಅಂತ ಮನವಿ ಸಲ್ಲಿಕೆ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.[ವಿಷ್ಣು ಹೆಸರಲ್ಲಿ ರಸ್ತೆ, ಪಾರ್ಕ್;ಆಕ್ಷೇಪವಿದ್ದರೆ ಸಲ್ಲಿಸಿ]

    ಅಂತೂ ಈ ಮೂಲಕನಾದ್ರೂ ಡಾ.ವಿಷ್ಣು ಅವರ ಸ್ಮಾರಕ ಶಂಕುಸ್ಥಾಪನಾ ಕಾರ್ಯ ಕೈಗೂಡುತ್ತಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

    English summary
    Vishnusena samithi, Benagaluru seeks CM Siddaramaiah led Congress Government help to resolve Vishnu Memorial Chaos. and Vishnusena samithi also approched Karnataka Film Chambers Commerce (KFCC) regarding this matter.
    Thursday, July 23, 2015, 10:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X